Home / ರಾಜಕೀಯ (page 704)

ರಾಜಕೀಯ

ಕಾಯಕ ನಿಷ್ಠೆಯುಳ್ಳವರ ಬದುಕು ಬೆಳಗುತ್ತೆ; ಡಾ| ವಿಜಯ ಸಂಕೇಶ್ವರ

ಮುಂಡರಗಿ: 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಯಕ ಹಾಗೂ ದಾಸೋಹ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಳವಡಿಸಿಕೊಂಡು ಬದುಕಿದವರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬಹುದು. ಕಾಯಕದಲ್ಲಿ ನಿಷ್ಠೆಯುಳ್ಳವರು ಬದುಕಿನಲ್ಲಿ ಬೆಳೆಯಲು ಸಾಧ್ಯ ಎಂದು ವಿಆರ್‌ಎಲ್‌ ಸಮೂಹ ಸಂಸ್ಥೆ ಮುಖ್ಯಸ್ಥ ಡಾ| ವಿಜಯ ಸಂಕೇಶ್ವರ ಹೇಳಿದರು.   ಪಟ್ಟಣದ ಜ| ಅನ್ನದಾನೀಶ್ವರ ಸಂಸ್ಥಾನಮಠ 153ನೇ ಜಾತ್ರಾ ಮಹೋತ್ಸವದಲ್ಲಿ ನಾಡೋಜ ಡಾ|ಅನ್ನದಾನೀಶ್ವರ ಮಹಾಶಿವಯೋಗಿಗಳವರಿಂದ “ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ’ ಹಾಗೂ ಚಿನ್ನದ ಉಂಗುರುವನ್ನು ಭಕ್ತಿಪೂರ್ವಕವಾಗಿ …

Read More »

ಕನ್ನಡಿಗರ ಮೇಲೇಕೆ ಅಷ್ಟು ದ್ವೇಷ? ಸಿದ್ದರಾಮಯ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ #ಆನ್ಸರ್‌ಮಾಡಿಮೋದಿ ಎಂಬ ಹ್ಯಾಷ್ ಟ್ಯಾಗ್ ನೀಡಿ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.   ಇದು ಚುನಾವಣಾ ಸಂದರ್ಭ ಆಗಿರುವುದರಿಂದ ನರೇಂದ್ರ ಮೋದಿ, ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬರಗಾಲದ ಸಂದರ್ಭ ಮೋದಿ ರಾಜ್ಯದ ನೆರವಿಗೆ ಬರಲಿಲ್ಲ. ಆದರೆ, ಈಗ ಮತ ಕೇಳಲು ಬರುತ್ತಿದ್ದಾರೆ. ಈ ಬಾರಿಯ …

Read More »

ವಿಧಾನಸಭಾ ಚುನಾವಣೆ ತಂತ್ರ; ಬೆಳಗಾವಿ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಉಡಿಗೆ

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ತಂತ್ರದಿಂದಾಗಿ ಮಹಾನಗರ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಪರವಾಯಿತು. ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಮೇಯರ್‌, ಉಪ ಮೇಯರ್ ಸ್ಥಾನಗಳನ್ನು ಮರಾಠಿಗರಿಗೆ ‘ಉಡುಗೊರೆ’ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.   ಪಾಲಿಕೆಯಲ್ಲಿ ಇಷ್ಟು ವರ್ಷಗಳೂ ಭಾಷೆ ಆಧಾರಿತ ಚುನಾವಣೆ ನಡೆಯು ತ್ತಿತ್ತು. ಎಲ್ಲ ಸದಸ್ಯರು ಪಕ್ಷೇತರರೇ ಆಗಿರುತ್ತಿದ್ದರು. …

Read More »

ವಿಧಾನಸಭೆ ಚುನಾವಣೆ: ಶೀಘ್ರದಲ್ಲಿ ವರಿಷ್ಠರ ‘ಕೈ’ ಸೇರಲಿದೆ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಈ ಪಟ್ಟಿಯು ಶೀಘ್ರದಲ್ಲಿ ವರಿಷ್ಠರ ಕೈ ಸೇರಲಿದೆ. 120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಸೋಮವಾರ ನಗರಕ್ಕೆ ಬಂದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತಂತೆ ಕೆಲವು ನಾಯಕರ ಜೊತೆ ಚರ್ಚೆ ನಡೆಸಿದರು. ಮೊದಲ ಹಂತದ ಪಟ್ಟಿ ಸಿದ್ಧಪಡಿಸುವ …

Read More »

ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದ ಬಿಜೆಪಿ- ಕರವೇ ಆರೋಪ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಮಹಾಪೌರ,ಮತ್ತು ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆರೋಪಿಸಿದ್ದಾರೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮರಾಠಿ ಭಾಷಿಕರಿಗೆ ನೀಡಿರುವ ಬೆಳಗಾವಿ ನಗರದ ಬಿಜೆಪಿ ನಾಯಕರು ಈಗ ಬೆಳಗಾವಿ ಪಾಲಿಕೆ ಮಹಾಪೌರ ಉಪ ಮಹಾಪೌರ …

Read More »

ಹೊಂದಾಣಿಕೆ, ಕೋಟಾಕ್ಕೆ ಕಾಂಗ್ರೆಸ್‌ ತಿಲಾಂಜಲಿ

ಬೆಂಗಳೂರು: ಈ ಬಾರಿ ಚುನಾವಣೆಗೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಹೊಂದಾಣಿಕೆಯ ರಾಜಕೀಯ ಹಾಗೂ ಕೋಟಾ ವ್ಯವಸ್ಥೆಗೆ ತಿಲಾಂಜಲಿ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸಿದೆ. ಕಳೆದ ಚುನಾವಣೆಯಲ್ಲಿ ಇದರಿಂದಾಗಿಯೇ ಕೆಲವು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿ ಪಾಠ ಕಲಿತಿದ್ದು, ಹೀಗಾಗಿ ಈ ಬಾರಿ ಸಮೀಕ್ಷೆ ಆಧರಿಸಿಯೇ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ.   ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಕಡೆ ಹೊಂದಾಣಿಕೆ ನಡೆಯಬಹುದು ಎಂಬ ದೂರು ಹೈಕಮಾಂಡ್‌ ಅಂಗಳಕ್ಕೆ ತಲುಪಿದ್ದು, ಎಚ್ಚರಿಕೆಯಿಂದ ಟಿಕೆಟ್‌ ನೀಡಲು ತೀರ್ಮಾನಿ …

Read More »

8-10 ಬಿಜೆಪಿ ಸಂಸದರು ಚುನಾವಣೆಗೆ ಸ್ಪರ್ಧಿಸಲ್ಲ: ಡಿಕೆಶಿ

ಕನಕಪುರ: ಸರ್ಕಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗದ ಬಿಜೆಪಿಯ ಸಂಸದರು ಒಳಗೊಳಗೆ ಭಾರಿ ಅವಮಾನ ಎದುರಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಎಂಟರಿಂದ ಹತ್ತು ಬಿಜೆಪಿ ಸಂಸದರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   ‘ಈ ಸರ್ಕಾರದಲ್ಲಿ ಮಾತನಾಡಲು ನಮಗೆ ಧ್ವನಿ ಇಲ್ಲ ಎಂದು ಬಿಜೆಪಿ ಸಂಸದರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಅವರ ಹೆಸರು ಬೇಡ. ಆ ಸಂಸದರ ಯಾರು …

Read More »

20 ಎಕರೆ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿ

ಆಕಸ್ಮೀಕವಾಗಿ ಹತ್ತಿದ ಬೆಂಕಿಗೆ ಅಂದಾಜು 20 ಎಕರೆ ಬೆಳೆದು ನಿಂತ ಕಬ್ಬು ಆಹುತಿಯಾದ ಘಟನೆ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ ಉಪ್ಪಾರಟ್ಟಿಯ ಗ್ರಾಮದ ರೈತರಾದ ವಿಠ್ಠಲ ಚುನ್ನನವರ,ನಾರಾಯಣ ನಂದಿ, ಪುಂಡಲಿಕ್ ದರೆನ್ನವರ್, ರುದ್ರಪ್ಪ ಮುರ್ಕಿ ಭಾವಿ, ಗಂಗಪ್ಪ ಕೊಳವಿ, ಇವರು ತಮ್ಮ ಹೊಲದಲ್ಲಿನ ಕಬ್ಬು ಇನ್ನೆನು ಕೆಲವೆ ದಿನಗಳಲ್ಲಿ ಕಟಾವು ಮಾಡಿ ಕಾರ್ಖಾನೆಗೆ ಕಳಿಸುವ ವಿಚಾರದಲ್ಲಿದ್ದಾಗ ಇವತ್ತು ಅಪರಾಹ್ನ 12 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಮೊದಲು …

Read More »

ಬೆಳಗಾವಿ| ಮೇಯರ್‌, ಉಪಮೇಯರ್‌; ಕೊನೆಕ್ಷಣದ ಕಸರತ್ತು

ಬೆಳಗಾವಿ: ಬೆಳಗಾವಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಇಡೀ ದಿನ ತುರುಸಿನ ಚಟುವಟಿಕೆಗಳು ನಡೆದವು. ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳು ಒಬ್ಬರಿಗಿಂತ ಒಬ್ಬರು ಉಮೇದಿನಲ್ಲಿದ್ದಾರೆ. ಉಪ ಮೇಯರ್‌ ಸ್ಥಾನಕ್ಕೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಂಇಎಸ್‌ಗಳಲ್ಲಿ ಇನ್ನಿಲ್ಲದ ಕಸರತ್ತು ನಡೆದವು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರು …

Read More »

ಬೆಳಗಾವಿ ಮೇಯರ್ ಚುನಾವಣೆ: ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್‌ ಬೆಂಬಲಿತ ಸದಸ್ಯರು

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಮೇಯರ್‌, ಉಪಮೇಯರ್‌ ಚುನಾವಣೆಗೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಮೂವರು ಸದಸ್ಯರು ಮತ್ತೆ ನಾಡದ್ರೋಹಿ ಘೋಷಣೆ ಕೂಗಿದರು. ಎಂಇಎಸ್‌ ಮುಖಂಡರೂ ಆಗಿರುವ ವೈಶಾಲಿ ಭಾತಖಾಂಡೆ ಉಪಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದರು. ಪಾಲಿಕೆ ಆವರಣ ಪ್ರವೇಶಿಸುತ್ತಿದ್ದಂತೆಯೇ ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ’ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು. ಅವರೊಂದಿಗೆ ಬಂದ ಇನ್ನಿಬ್ಬರು ಎಂಇಎಸ್‌ ಬೆಂಬಲಿತ ಸದಸ್ಯರೂ ಧ್ವನಿಗೂಡಿಸಿದರು. ಕೇಸರಿ …

Read More »