ಬೆಳಗಾವಿ: ನಗರದಲ್ಲಿ ಮಟ್ಕಾ, ಓಸಿ ಆಡಲು ಜನರನ್ನು ಪ್ರೇರೇಪಿಸುತ್ತಿದ್ದ ಬುಕ್ಕಿಯನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಜೂಜುಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಇಲ್ಲಿಯ ಅನಗೋಳದ ಪರುಶರಾಮ ಬಾಬು ಮೇತ್ರಿ ಎಂಬಾತನನ್ನು ಒಂದು ವರ್ಷಗಳ ಕಾಲ 2023 ಸೆ. 18ರ ವರೆಗೆ ಗಡಿಪಾರು ಮಾಡಲಾಗಿದೆ. ಬೆಳಗಾವಿಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಗಡಾದಿ ಆದೇಶ ಹೊರಡಿಸಿದ್ದಾರೆ. ಪರುಶರಾಮ ಮೇತ್ರಿ ವಿರುದ್ಧ ಏಳು ಪ್ರಕರಣಗಳು …
Read More »ಖಿಲಾರದಡ್ಡಿಗೆ ಕೊನೆಗೂ ಬಂತು ಬಸ್!
ತೆಲಸಂಗ: ಸಮೀಪದ ಖಿಲಾರದಡ್ಡಿ ಗ್ರಾಮಕ್ಕೆ ಕೊನೆಗೂ ಸೋಮವಾರ ಬಸ್ ಬಂದಿದ್ದು, ಬಸ್ಸೇ ಕಾಣದ ಗ್ರಾಮಸ್ಥರಲ್ಲಿ ಸಂಭ್ರಮವೋ ಸಂಭ್ರಮ. ಸ್ವಾತಂತ್ರ್ಯ ದೊರೆತು 75 ವರ್ಷವಾದರೂ ಖಿಲಾರದಡ್ಡಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ. ಸದ್ಯ ಬಸ್ ಗ್ರಾಮದಲ್ಲಿ ಬರುತ್ತಿದ್ದಂತೆ ಗ್ರಾಮಸ್ಥರೆಲ್ಲ ಸೇರಿ ಚಾಲಕ, ನಿರ್ವಾಹಕ, ನಿಯಂತ್ರಣಾಧಿಕಾರಿಯನ್ನು ಸತ್ಕರಿಸಿ ಬಸ್ ಗೆ ಪೂಜೆ ಸಲ್ಲಿಸಿ, ಕುಣಿದು ಕುಪ್ಪಳಿಸಿದರು. 280ಕ್ಕೂ ಹೆಚ್ಚು ಶಾಲಾ ಮಕ್ಕಳು ಬಂದು ಹೋಗುವುದು ಸೇರಿ 16 ಕಿ.ಮೀ ನಿತ್ಯ ಕಾಲ್ನಡಿಗೆಯಲ್ಲಿಯೇ ಶಾಲೆಗೆ …
Read More »ಬೆಳಗಾವಿ ತಾಲೂಕಿನ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಬೆಳಗಾವಿ ತಾಲೂಕಿನ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರದಲ್ಲಿ ಇಂದು ಮಂಗಳವಾರ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಕೂಲಿ ಕಾರ್ಮಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ತಲೆಯ ಮೇಲೆ ಬುಟ್ಟಿ, ಕೂಲಿ ಕೆಲಸದ ಸಾಮಗ್ರಿ ಹಿಡಿದು ಪ್ಲೇಟ್ …
Read More »ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆ
ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿಯು ಅತ್ಯವಶ್ಯವಾಗಿದೆ.ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಕರಾಟೆ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರಾಟೆ ಮಾಸ್ಟರ್ ಜೀತೇಂದ್ರ ಕಾಕತಿಕರ್ ಹೇಳಿದ್ದಾರೆ. ಬೆಳಗಾವಿ ನಗರದ ಮರಾಠಾ ಮಂದಿರದಲ್ಲಿ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಈ ವೇಳೆ ಬೆಳಗಾವಿ ಜಿಲ್ಲಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷರಾದ ಗಜೇಂದ್ರ ಕಾಕತೀಕರ್ …
Read More »ಓಸಿ, ಇಸ್ಪೀಟ್ ಆಡಲು ಪ್ರೇರೇಪಿಸುತ್ತಿದ್ದ ಆರೋಪಿ ಗಡಿಪಾರು ಮಾಡಿದ ಡಿಸಿಪಿ ಗಡಾದಿ..!
ಓಸಿ ಮತ್ತು ಇಸ್ಪೀಟ್ ಆಡಲು ಜನರನ್ನು ಪ್ರೇರೇಪಿಸುತ್ತಿದ್ದ ಆರೋಪಿಯನ್ನು ಒಂದು ವರ್ಷದವರೆಗೆ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದಿ ಆದೇಶ ಹೊರಡಿಸಿದ್ದಾರೆ. ಅನಗೋಳದ ನಿವಾಸಿ ಪರಶುರಾಮ್ ಬಾಬು ಮೇತ್ರಿ ಗಡಿಪಾರು ಶಿಕ್ಷೆಗೆ ಒಳಗಾಗಿರುವ ಆರೋಪಿ. ಸೆಪ್ಟೆಂಬರ್ 19 2022ರಿಂದ ಸೆಪ್ಟೆಂಬರ್ 18 2023ರವರೆಗೆ 1 ವರ್ಷ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದಿ ಆದೇಶ ಹೊರಡಿಸಿದ್ದಾರೆ. ಈ ಆರೋಪಿ ವಿರುದ್ಧ ಒಟ್ಟು 7 …
Read More »ಸರಕಾರಕ್ಕೆ ತಾಕತ್ತು ಇದ್ದರೇ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕನ ಮೇಲೆ ಇಡಿ, ಐಟಿ ದಾಳಿ ನಡೆಸಿ:A.A.P. ಭಾಸ್ಕರ್ ರಾವ್
ಸರಕಾರ ದರ್ಪದಿಂದ ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ೪೦% ವ್ಯವಹಾರ ಗಡಿ ದಾಟಿ ಹೈದರಾಬಾದ್ ಹೋಗಿ ಪೋಸ್ಟರ್ ಹಾಕಿ ಮಾನ ಮರ್ಯಾದೆ ತೆಗೆದುಕೊಂಡಿದೆ ಎಂದು ಆಮ್ ಆದ್ಮಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದರು. ಇಂದು ಮಂಗಳವಾರ ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್ ರವರು, ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಸಹಾಯವಾಗಿ ಸಿಎಂ ಹೇಳುತ್ತಾರೆ. ಇದನ್ನು ನಾವು ಮಾಡಿಲ್ಲ ಎನ್ನುತ್ತಾರೆ. ಆದರೆ ಬೆಳಗಾವಿ …
Read More »ರಾಮದುರ್ಗ: ಮಾರಕಾಸ್ತ್ರಗಳಿಂದ ವ್ಯಕ್ತಿ ಕೊಲೆ
ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹೊಸೂರ ಗ್ರಾಮದ ಬಳಿ ಸೋಮವಾರ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪೂಲ್ ಕೆಳಗೆ ಬಿಸಾಕಲಾಗಿದೆ. ಪಾಂಡಪ್ಪ ದುಂಡಪ್ಪ ಜಟಕನ್ನವರ (35) ಕೊಲೆಯಾದವರು. ಬೇರೆಡೆ ಕೊಲೆಗೈದು ಹೊಸೂರ ಹಳ್ಳದ ಬಳಿ ಶವ ಎಸೆಯಲಾಗಿದೆ. ವ್ಯಕ್ತಿಯ ಮೈತುಂಬ ಮಾರಕಾಸ್ತ್ರಗಳಿಂದ ಕೊಚ್ಚಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಜನ ಬೆಚ್ಚಿದರು. ಸ್ಥಳದಲ್ಲಿ ಅವರ ಬೈಕ್ ಕೂಡ ಇದೆ. ಕಟಕೋಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ರಾಮದುರ್ಗ …
Read More »ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿ?: ಕಾಂಗ್ರೆಸ್
ಬೆಂಗಳೂರು: ವಿದ್ಯಾರ್ಥಿಗಳ (Students) ಸಮವಸ್ತ್ರದಲ್ಲೂ (Uniform) 40% ಲೂಟಿ ಮಾಡಿಲಾಗಿದೆಯೇ ಬಿ.ಸಿ ನಾಗೇಶ್ (B.C Nagesh) ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, ಅದರಲ್ಲೂ ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಇದರಲ್ಲೂ ಮೊಟ್ಟೆಯ ಕಮಿಷನ್‍ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ವಿರುದ್ಧ ಚಾಟಿ ಬೀಸಿದೆ. ಟ್ವೀಟ್‍ನಲ್ಲಿ ಏನಿದೆ? ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ ಬಿ.ಸಿ ನಾಗೇಶ್ ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, …
Read More »ಇನ್ಮುಂದೆ ಪೌರ ಕಾರ್ಮಿಕರು ಸರ್ಕಾರಿ ನೌಕರರು
ಬೆಂಗಳೂರು : ಬಹು ದಿನಗಳ ಬೇಡಿಕೆಯಂತೆ ರಾಜ್ಯದ ನಗರಸಭೆ ಪುರಸಭೆ , ಪಟ್ಟಣ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸೋಮವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿಯ 3673 ನೌಕರರು, …
Read More »ಅಗ್ನಿವೀರರ ನೇಮಕಾತಿ ಪೂರ್ಣ
ಹಾವೇರಿ: ಅಗ್ನಿಪಥ್ ಯೋಜನೆಯಡಿ ಹಾವೇರಿಯಲ್ಲಿ ಕಳೆದ ಹದಿನೆಂಟು ದಿನಗಳಿಂದ ಜರುಗಿದ್ದ ಅಗ್ನಿವೀರರ ನೇಮಕಾತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. 43 ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದು, ಈ ಪೈಕಿ 4,200 ಅಭ್ಯರ್ಥಿಗಳು ಲಿಖೀತ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು. ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸೇನಾ ನೇಮಕಾತಿ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಸತತ ಮಳೆಯ ಕಾರಣ ಸೇನಾ ನೇಮಕಾತಿ ರ್ಯಾಲಿ …
Read More »
Laxmi News 24×7