Breaking News
Home / ರಾಜಕೀಯ / ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿ?: ಕಾಂಗ್ರೆಸ್

ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿ?: ಕಾಂಗ್ರೆಸ್

Spread the love

ಬೆಂಗಳೂರು: ವಿದ್ಯಾರ್ಥಿಗಳ (Students) ಸಮವಸ್ತ್ರದಲ್ಲೂ (Uniform) 40% ಲೂಟಿ ಮಾಡಿಲಾಗಿದೆಯೇ ಬಿ.ಸಿ ನಾಗೇಶ್ (B.C Nagesh) ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, ಅದರಲ್ಲೂ ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಇದರಲ್ಲೂ ಮೊಟ್ಟೆಯ ಕಮಿಷನ್‍ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ವಿರುದ್ಧ ಚಾಟಿ ಬೀಸಿದೆ.

ಟ್ವೀಟ್‍ನಲ್ಲಿ ಏನಿದೆ?
ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ ಬಿ.ಸಿ ನಾಗೇಶ್ ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, ಅದರಲ್ಲೂ ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಅರ್ಧ ವರ್ಷ ಕಳೆದಿದೆ, ಇನ್ನರ್ಧ ವರ್ಷ ಬಾಳಿಕೆ ಬಂದರೆ ಸಾಕು ಎಂಬ ಸರ್ಕಾರದ ಆಲೋಚನೆಯೇ? ಮೊಟ್ಟೆಯ ಕಮಿಷನ್‍ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ ಸರ್ಕಾರ? ಆಸ್ಪತ್ರೆಗಳಿಗೆ ವಿದ್ಯುತ್ ಕಡಿತಗೊಳ್ಳುತ್ತದೆ, ಕಳಪೆ ವೆಂಟಿಲೇಟರ್‌ಗಳು ಕೈಕೊಡುತ್ತಿವೆ, ಈಗ ಔಷಧ ಪೂರೈಕೆಯೂ ನಿಂತಿದೆ. ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆದಾರರಿಗೆ ಹಣ ಬಿಡುಗಡೆ ಮಾಡದ ಪರಿಣಾಮವಿದು. 40% ಕಮಿಷನ್ ಸರ್ಕಾರ ಇಷ್ಟೊಂದು ದಿವಳಿಯಾಗಿದೆಯೇ? ಸುಧಾಕರ್ ಎಂಬ ಅಸಮರ್ಥ ಸಚಿವರ ದುರಾಡಳಿತದಲ್ಲಿ ಜನ ಸಾವಿನ ಮನೆ ಸೇರುವಂತಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ