Breaking News
Home / ಜಿಲ್ಲೆ (page 844)

ಜಿಲ್ಲೆ

ಈಜಾಡಿ ವಿದ್ಯುತ್ ಕಂಬ ಬಳಿ ತೆರಳಿ ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡಿದ್ದಾರೆ.

ಬೆಳಗಾವಿ: ಕಳೆದ ವರ್ಷವಷ್ಟೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಪಶ್ಚಿಮಘಟ್ಟ ಹಾಗೂ ಖಾನಾಪುರ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಿ 11 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಮುನವಳ್ಳಿ ಪಟ್ಟಣದ ಯಲಿಗಾರ್ ಓಣಿಗೆ ನೀರು ನುಗ್ಗಿದೆ. ಯಲಿಗಾರ್ ಓಣಿಯಲ್ಲಿದ್ದ ವಿದ್ಯುತ್ ಕಂಬಗಳು ಸಹ ಮುಳುಗಡೆಯಾಗಿದ್ದು ವಿದ್ಯುತ್ ದುರಸ್ತಿಗೆ ಲೈನ್ ಮ್ಯಾನ್‍ಗಳು ಪರದಾಡುತ್ತಿದ್ದಾರೆ. ಈ …

Read More »

ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಪವರ್ ಆಫ್ ಪಾಕಿಸ್ತಾನ್ ಎಂಬ ಪೇಜ್ ಲೈಕ್ ಮಾಡಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ಆ ಪೇಜ್ ಲೈಕ್. ಪಾಕ್ ಪರ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತು.

ದಾವಣಗೆರೆ : ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಪವರ್ ಆಫ್ ಪಾಕಿಸ್ತಾನ್ ಎಂಬ ಪೇಜ್ ಲೈಕ್ ಮಾಡಿದ್ದಲ್ಲದೇ, ವಾಟ್ಸ್ ಆಪ್ ಗ್ರೂಪ್ ನಲ್ಲಿ ಆ ಪೇಜ್ ಲೈಕ್ ಮಾಡುವಂತೆ ಶೇರ್ ಮಾಡಿದ್ದರು. ಈ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು. ಇಂತಹ ಪಾಕ್ ಪರ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. 2008ನೇ ಸಾಲಿನಲ್ಲಿ ಕಾನ್ ಸ್ಟೇಬಲ್ ಹುದ್ದೆಗೆ …

Read More »

ಉಡುಪಿ ಆರೋಗ್ಯ ಅಧಿಕಾರಿಗಳ ಯಡವಟ್ಟು ಮೃತಪಟ್ಟ ವ್ಯಕ್ತಿಯೇ ಬೇರೆಯಾಗಿದ್ದರೇ, ತಂದಿದ್ದ ಶವವೇ ಬೇರೆಯವರದ್ದಾಗಿತ್ತು.

ಉಡುಪಿ  : ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬನನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೊರೋನಾ ಸೋಂಕಿತರಾಗಿದ್ದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಕಳುಹಿಸಲಾಗಿತ್ತು. ಇಂತಹ ಶವವನ್ನು ಆಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ಶವಸಂಸ್ಕಾರ ಮಾಡಲು ತರಲಾಗಿತ್ತು. ಶವವನ್ನು ಸ್ಮಾಶನದಲ್ಲಿ ತೆರೆದು ನೋಡಿದವರಿಗೆ ಅಲ್ಲಿ ಶಾಕ್ ಕಾದಿತ್ತು. ಅದೇ ಮೃತಪಟ್ಟ ವ್ಯಕ್ತಿಯೇ ಬೇರೆಯಾಗಿದ್ದರೇ, ತಂದಿದ್ದ ಶವವೇ ಬೇರೆಯವರದ್ದಾಗಿತ್ತು. ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನೇರಂಬಳ್ಳಿ ಮೂಲದ 65 ವರ್ಷದ ವೃದ್ಧರೊಬ್ಬರು …

Read More »

ಕೊರೊನಾ ಠುಸ್ ಪಟಾಕಿ ಎನ್ನುವುದಾದರೆ. ಕೊರೊನಾ ಹೆಸರಲ್ಲಿ ಸಂಗ್ರಹಿಸಿದ್ದ ದುಡ್ಡು ಯಾರ ಖಜಾನೆಗೆ ಎಂದು ತಿಳಿಸಲಿ:ದಿನೇಶ್ ಗುಂಡೂರಾವ್

ಬೆಂಗಳೂರು: ಕೊರೊನಾ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಸ್ಥಾಪಿಸಿದ ‘ಪಿಎಂ ಕೇರ್ಸ್’ ನಿಧಿಗೆ ಅಪ್ಪ ಅಮ್ಮನೆ ಇಲ್ಲವಂತೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ. ಕೊರೊನಾ ಹೆಸರಲ್ಲಿ ಪ್ರಧಾನಿ ಮೋದಿ ಅವರು ಸಂಗ್ರಹಿಸಿದ ಹಣವನ್ನು ತಮ್ಮ ಮನೆಯ ಖರ್ಚಿಗೆ ಬಳಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಪಿಎಂ ಕೇರ್ ಫಂಡ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. “ಕೊರೊನಾ ಪರಿಹಾರಕ್ಕಾಗಿ ಮೋದಿ ಸ್ಥಾಪಿಸಿದ ‘ಪಿಎಂ …

Read More »

ಕೋವಿಡ್ ವಾರ್ಡ್ ಗಳಿಗೆ ವೈದ್ಯರ ಭೇಟಿ ಅಪರೂಪವಾಗಿರುವುದರಿಂದ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡುತ್ತಿದ್ದಾರೆ.

ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ಓಪೆಕ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಹಂದಿಗಳನ್ನ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತು ಹಿಡಿದಿದೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ಕೋವಿಡ್ ಸೋಂಕಿತ ರೋಗಿಗಳಿರುವ ವಾರ್ಡ್ ಪಕ್ಕದಲ್ಲೇ ಹಂದಿಗಳು ಬಂದು ಹೋಗುತ್ತಿದ್ದರೂ ನೋಡುವವರಿರಲಿಲ್ಲ. ಇಡೀ ಆಸ್ಪತ್ರೆಯೇ ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದರೂ ಆಸ್ಪತ್ರೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಈಗ ಕೊನೆಗೂ ಎಚ್ಚೆತ್ತು ಹಂದಿಗಳನ್ನ ಹಿಡಿಯಲಾಗಿದೆ. ಹಂದಿಗಳ ಮಾಲೀಕರ ವಿರುದ್ದ ಕ್ರಮಕ್ಕೆ ಅಧಿಕಾರಿಗಳು …

Read More »

ಆಯುಷ್ ಇಲಾಖೆ ಅಧಿಕಾರಿ ವರ್ತನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಹಿಂದಿ ಮಾತನಾಡಲು ಬಾರದವರು ತರಬೇತಿಯಿಂದ ಹೊರ ನಡೆಯಬಹುದು ಎಂದು ತಾಕೀತು ಮಾಡಿದ್ದ ಆಯುಷ್ ಇಲಾಖೆ ಅಧಿಕಾರಿ ವರ್ತನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆಯುಷ್ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹಿಂದಿ ಮಾತನಾಡಲು ಬಾರದವರು ತರಬೇತಿಯಿಂದ ಹೊರ ನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಹೇಳಿರುವುದು ತಿಳಿಯಿತು. ಇದೇನು ಇಂಗ್ಲಿಷ್ …

Read More »

ಅಂಬ್ಯುಲೆನ್ಸ್ ನಲ್ಲಿ ಚಿನ್ನದ ಗಣಿ ಕಾರ್ಮಿಕರ ಓಡಾಟ

ರಾಯಚೂರು: ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಯಿಂದ ದೇವದುರ್ಗದ ಊಟಿ ಚಿನ್ನದ ಗಣಿಗೆ ಕೆಲಸಕ್ಕಾಗಿ ಕಾರ್ಮಿಕರನ್ನ ಅಂಬ್ಯುಲೆನ್ಸ್‍ನಲ್ಲಿ ನಿತ್ಯ ಕರೆದ್ಯೊಯ್ಯಲಾಗುತ್ತಿದೆ. ಅಂಬ್ಯುಲೆನ್ಸ್ ಪದೇ ಪದೇ ಓಡಾಡುವುದನ್ನ ಗಮನಿಸಿ ಅನುಮಾನಗೊಂಡ ದೇವದುರ್ಗ ತಾಲೂಕಿನ ವಂದಲಿ ಗ್ರಾಮಧ ಜನ ಅಂಬ್ಯುಲೆನ್ಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಗಿಗಳನ್ನ ಸಾಗಿಸಲು ಎಷ್ಟು ಬಾರಿ ನಿಲ್ಲಿಸಲು ಯತ್ನಿಸಿದರು ನಿಲ್ಲದ ಅಂಬ್ಯುಲೆನ್ಸ್ ನಿಯಮ ಬಾಹಿರವಾಗಿ ಕಾರ್ಮಿಕರನ್ನ ಸಾಗಣೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಸೈರನ್ ಹಾಕಿಕೊಂಡು ಅತೀ ವೇಗವಾಗಿ …

Read More »

ಸತೀಶಜಾರಕಿಹೊಳಿ ಪೌಂಡೇಶನ್ ಕೃತಕ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿದೆ.

ಗೋಕಾಕ: ಕೊರೊನಾ ಸೋಂಕಿನಿಂದ ಉಸಿರಾಟ  ತೊಂದರೆ ಅನುಭವಿಸುತ್ತಿವವರಿಗೆ  ಉಚಿತ  ಆಕ್ಸಿಜನ್ ಸಿಲಿಂಡರ್ ವಿತರಿಸುವ ಮೂಲಕ ಸತೀಶ ಜಾರಕಿಹೊಳಿ ಫೌಂಡೇಶನ್  ಗಮನ ಸೆಳೆಯುತ್ತಿದೆ. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪುತ್ರ ರಾಹುಲ್, ಹಾಗೂ ಪುತ್ರಿ ಪ್ರಿಯಾಂಕಾ  ಆಕ್ಸಿಜನ್ ಸಿಲಿಂಡರ್ ವಿತರಿಸಿದರು. ಕೋವಿಡ್ 19 ನಿಂದ ಬಳಲುತ್ತಿರುವ,  ಕೆಲವರು ಹಣವಿಲ್ಲದೇ  ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು,  ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರಿಗೆ  ಗಿ ಸತೀಶ ಜಾರಕಿಹೊಳಿ ಪೌಂಡೇಶನ್ ಕೃತಕ …

Read More »

ಗಣೇಶ  ಹಬ್ಬ ಮುಗಿದ ಬಳಿಕ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಬಗೆಹರಿಸಲಾಗುವುದು

ಬೆಳಗಾವಿ: ಗಣೇಶ  ಹಬ್ಬ ಮುಗಿದ ಬಳಿಕ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಬಗೆಹರಿಸಲಾಗುವುದು  ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ  ಅವರು ಭರವಸೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ವಿಚಾರವಾಗಿ   ಎಂಎಲ್ ಸಿ ವಿವೇಕರಾವ್ ಪಾಟೀಲ್,  ಹಾಗೂ ಹಾಲುಮತದ ಹಲವು ನಾಯಕರು ಇಂದು ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಪ್ರಕರಣ ಇತ್ಯರ್ಥ ಪಡೆಸಿ ಜಿಲ್ಲಾಡಳಿತ ವತಿಯಿಂದಲೇ ಮೂರ್ತಿ ಸ್ಥಾಪನೆ ಮಾಡುವಂತೆ  ಒತ್ತಡ …

Read More »

 ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನ ಮಾಂಸದ ಅಂಗಡಿಗಳ ಮುಂದೆ

ಬೆಂಗಳೂರು: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮಾಂಸ ಖರೀದಿಸುತ್ತಿದ್ದು, ಒಂದು ತಿಂಗಳಿಂದ ಬಿಕೋ ಎನ್ನುತ್ತಿದ್ದ ಮಟನ್ ಅಂಗಡಿಗಳು ಇಂದು ಫುಲ್ ಆಗಿವೆ.ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಲೇ ಸಾಲುಗಟ್ಟಿ ನಿಂತು ಗ್ರಾಹಕರು ಮಾಂಸ ಖರೀದಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೈನಿಟಸರ್ ಬಳಸುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಪಾಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರಾವಣ ಮಾಸ ಹಿನ್ನೆಲೆ ಕಳೆದ ನಾಲ್ಕು ವಾರದಿಂದ ಮಟನ್ ಶಾಪ್ ಗಳು …

Read More »