Breaking News

ಜಿಲ್ಲೆ

ಗೋಟೂರ ಗ್ರಾಮ ಪಂಚಾಯತಿ: ಅಧ್ಶಕ್ಷರಾಗಿ ಅಶೋಕ ಗಂಗನ್ನವರ, ಉಪಾಧ್ಶಕ್ಷರಾಗಿ ಲತಾ ಪಾಟೀಲ ಆಯ್ಕೆ

ಬೆಳಗಾವಿ: ಗೋಟೂರ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಶಕ್ಷರಾಗಿ ಅಶೋಕ ಗಂಗನ್ನವರ ಹಾಗೂ ಉಪಾಧ್ಶಕ್ಷರಾಗಿ ಲತಾ ನಿಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಇವರನ್ನು ಆಯ್ಕೆ ಮಾಡಲಾಗಿದೆ.   ಮುಖಂಡರಾದ ಬಸು ಜತ್ತಿ, ಪ್ರಕಾಶ ಬಸ್ಸಾಪುರಿ, ಪಪ್ಪುಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಿಂಗನಗೌಡ ಪಾಟೀಲ, ರವಿಂದ್ರ ಮಾಸೇವಾಡಿ, ಗುರುನಾಥ ಶಿಂದೆ, ಹನುಮಂತ ಶೇಖನವರ, ರಾಜು ನಾಯಿಕ, ಸುಭಾಸ ಘಸ್ತಿ, …

Read More »

ಶಾಸಕರ ಅಸಮಾಧಾನ ಶಮನಕ್ಕೆ ಇಂದು ಮುಖ್ಯಮಂತ್ರಿಗಳಿಂದ “ಭೋಜನ’ ಕೂಟ

ಬೆಂಗಳೂರು: ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಬಿಜೆಪಿಯ ಪಕ್ಷ ನಿಷ್ಠ ಶಾಸಕರು ಖಾಸಗಿ ಹೋಟೆಲ್‌ ಸಭೆ ನಡೆಸುವ ಬದಲು ಮಧ್ಯಾಹ್ನ ವಿಧಾನಸೌಧದಲ್ಲಿಯೇ ಭೋಜನದ ನೆಪದಲ್ಲಿ ಸಭೆ ನಡೆಸಿದ್ದಾರೆ. ಅಸಮಾಧಾನಿತರ ವಿಶ್ವಾಸಗಳಿಸಲು ಸಿಎಂ ಯಡಿಯೂರಪ್ಪ ಇಂದು ಭೋಜನ ಕೂಟ ಏರ್ಪಡಿಸಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಅವರ ಕಚೇರಿಯಲ್ಲಿ ಭೋಜನದ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿ.ಎಚ್‌.ತಿಪ್ಪಾರೆಡ್ಡಿ, ಸಿದ್ದು ಸವದಿ, ಅಪ್ಪಚ್ಚು ರಂಜನ್‌ …

Read More »

ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು ಇನ್ನೂ ಎರಡು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ. …

Read More »

ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಮಾಡಿದ್ದೇಕೆ ? ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದೇ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಜೆಟ್ ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಯಾಕೆ ಮಾಡಿದ್ದೇವೆ ಎಂಬುದನ್ನೇ ಸರ್ಕಾರ ಮರೆತಿದೆ. ಹೀಗಾಗಿ ಅಲ್ಲಿಯೇ ಬಜೆಟ್ ಅಧಿವೇಶ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ ಬಜೆಟ್ ಅಧಿವೇಶನ ಬಳಿಕ ಮುಂದಿನ ಅಧಿವೇಶನ ಬೆಳಗಾವಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು. ಇನ್ನು ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ …

Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 684 ಮದ್ಯದ ಬಾಟಲ ವಶಕ್ಕೆ

ಬೆಳಗಾವಿ: ಬಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 684 ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಟ ಬಳಿ ನಡೆದಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಅಶೋಕಾ ಲೈಲ್ಯಾಂಡ್ ಕಂಪನಿಯ ಎಸಿ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಪ್ರಕರಣ …

Read More »

ಶಿವಾಜಿ ಮಹಾರಾಜರ ಮೂಲವೇ ಕನ್ನಡ: ಕಾರಜೋಳ

ಬೆಳಗಾವಿ-ಮುಂಬೈ ನಮ್ಮದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಡಿಸಿಎಂ ಗೋವೀಂದ್ ಕಾರಜೋಳ ಅವರು ಶಿವಾಜಿ ಮೂಲ ಕನ್ನಡ ಎಂದು ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದು ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ, ಮಹಾರಾಷ್ಟ್ರದ ಲ್ಲಿ ಉದ್ಧವ್ ಠಾಕ್ರೆ ನೇತೃತ್ವದ್ದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಪಕ್ಷದವರು …

Read More »

ಪೊಲೀಸ್​​ ಪೇದೆ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಅಂದರ್​

ಬೆಂಗಳೂರು: ಪೊಲೀಸ್​ ಪೇದೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಬಗಲುಗುಂಟೆ ಪೊಲೀಸರು ಬಂಧಿಸಿದ್ದಾರೆ. ಫಕೀರಪ್ಪ ಬಂಧಿತ ಆರೋಪಿ. ಮೂಲತಃ ಕೊಪ್ಪಳ ಮೂಲದ ಆರೋಪಿ ಬಗಲುಗುಂಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪೊಲೀಸ್​ ಆಗುವ ಕನಸು ಕಂಡಿದ್ದ ಆತ ಎರಡು ಬಾರಿ ಪರೀಕ್ಷೆ ಬರೆದು ಅದರಲ್ಲಿ ಫೇಲಾಗಿದ್ದ ಎನ್ನಲಾಗಿದೆ. ಆದರೆ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕರಿಗೂ ಸೇರಿದಂತೆ ಎಲ್ಲರಿಗೂ ತಾನು ಸಶಸ್ತ್ರ ಮೀಸಲು ಪಡೆಯ ಪೊಲೀಸ್​ ಪೇದೆ ಎಂದು ಸುಳ್ಳು …

Read More »

ಬೇಡಿಕೆ ಈಡೇರದಿದ್ದರೆ 4500 ಶಾಲೆಗಳು ಬಂದ್..!

ಬೆಂಗಳೂರು, ಜ.31- ಖಾಸಗಿ ಶಾಲಾ ಶುಲ್ಕ ಕಡಿತ ಮಾಡಿರುವ ಸರ್ಕಾರಕ್ಕೆ ಇದೀಗ ಮತ್ತೊಂದು ಗೊಂದಲ ಶುರುವಾಗಿದೆ.ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇದೀಗ ಕಲ್ಯಾಣ ಕರ್ನಾಟಕ ಭಾಗದ 4,500 ಶಾಲೆಗಳು ಬಂದ್ ಆಗುವ ಸಾಧ್ಯತೆ ಇದ್ದು, ಇದರಿಂದ 4.5 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಸುಮಾರು 7 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಿಕೊಳ್ಳದೆ ಇರುವುದೇ ಕಾರಣ ಎನ್ನಲಾಗುತ್ತಿದೆ. ಕಳೆದ 7 ವರ್ಷಗಳಿಂದ ಅನುದಾನವನ್ನೇ ನಂಬಿದ್ದ ಸುಮಾರು 4,500 …

Read More »

ಮತ್ತೆ ಶುರು ಸಖತ್; ಸದ್ಯದಲ್ಲೇ ಯುರೋಪ್​ಗೆ ಪ್ರಯಾಣ..

ಬೆಂಗಳೂರು: ಲಾಕ್​ಡೌನ್ ನಂತರ ‘ಥ್ರಿಬ್ಬಲ್ ರೈಡಿಂಗ್’ ಚಿತ್ರವನ್ನು ಮುಗಿಸಿರುವ ಗಣೇಶ್, ಇದೀಗ ‘ಸಖತ್’ ಚಿತ್ರೀಕರಣಕ್ಕೆ ವಾಪಸಾಗಿದ್ದಾರೆ. ಕಳೆದ ವರ್ಷದ ಆರಂಭದಲ್ಲಿಯೇ, ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಪ್ರಾರಂಭವಾಗಿ ಒಂದು ಹಂತದ ಚಿತ್ರೀಕರಣ ಮುಗಿದಿತ್ತು. ಆದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಂತಿದ್ದ ಚಿತ್ರೀಕರಣ ಇದೀಗ ಪುನಃ ಶುರುವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಗಣೇಶ್, ‘ಪ್ರತಿ ಚಿತ್ರವೂ ನನಗೆ ಹೊಸತನ. ಮೊದಲ ಬಾರಿಗೆ ಮಾಡುತ್ತಿರುವ ಈ ರೀತಿಯ ಪಾತ್ರ ನಾ. ಚಿತ್ರಕಥೆ- ಸಂಭಾಷಣೆ …

Read More »

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಸಂತೋಷ್ ಜಾರಕಿಹೊಳಿ…

ಗೋಕಾಕ: ಇಂದಿನ ಮಕ್ಕಳು ಮುಂದಿನ ಭವಿಷ್ಯ ಹಾಗೂ ಎಂದು ರಾಜ್ಯಾದ್ಯಂತ ಪಲ್ಸ ಪೋಲಿಯೋ ದಿನಾಚರಣೆ ಸದಾ ಸಾಮಾಜಿಕ ಕಳಕಳಿ ಹಾಗೂ ಕಾಳಜಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಯಾವತ್ತೂ ಪ್ರಚಾರ ಬೇಡ ಎಂದು ಹೇಳುತ್ತಾರೆ ಆದರೆ ಅವರ ಗೆಳೆಯರ ಬಳಗ ಸಾಹುಕಾರರು ಮಾಡುವ ಚಿಕ್ಕ ಚಿಕ್ಕ ಕೆಲಸ ಗಳು ಸಮಾಜಕ್ಕೆ ತಿಳಿಯಲಿ ಎಂದು ಅವರು ಮಾಡುವ ಎಲ್ಲ ಕೆಲಸ ಕಾರ್ಯ ಗಳನ್ನ ಸೇರಿ ಹಿಡಿದು ವಾಹಿನಿಗೆ ಸಂದೇಶ ರವಾನೆ …

Read More »