Breaking News
Home / ಜಿಲ್ಲೆ (page 1099)

ಜಿಲ್ಲೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ‌ನೀಡಿದ ಸುಮಾರು 5 ಲಕ್ಷ ರೂ. ಚೆಕ್  ಗಳನ್ನು ಹಸ್ತಾಂತರಿಸಿದರು. ಇಲ್ಲಿನ ಸದಾಶಿವ ನಗರದಲ್ಲಿರುವ ಡಿಕೆಶಿ ಅವರ ಮನೆಗೆ ಭೇಟಿ‌ ನೀಡಿದ ಕಾರ್ಯಾಧ್ಯಕ್ಷರು ಚೆಕ್ ಗಳನ್ನು ಹಸ್ತಾಂತರಿಸಿ ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡಜನರಿಗೆ ನೆರವಾಗುವ ಕುರಿತು ಚರ್ಚೆ …

Read More »

ಎಪಿಎಂಸಿಯ 50 ಕೋಟಿ ವಂಚನೆ ಪ್ರಕರಣ : 12 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು, ಏ.30- ಎಪಿಎಂಸಿಯ 50 ಕೋಟಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿರುವ ಸಿಸಿಬಿ ಪೆÇಲೀಸರು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಆರೋಪಿಗಳ ವಿರುದ್ಧ ಸುಮಾರು 1400 ಪುಟಗಳ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಮುಖ ಆರೋಪಿ ಸಿಂಡಿಕೆಟ್ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕ ಸಿದ್ದಲಿಂಗಯ್ಯ ಹಾಗೂ ನಿವೃತ್ತ ಖಜಾನೆ ಅಧಿಕಾರಿ ಲಕ್ಷ್ಮಯ್ಯ ಸೇರಿದಂತೆ 12 ಮಂದಿ ಆರೋಪಿಗಳಲ್ಲಿ ಕೆಲವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ ಕೃಷಿ ಉತ್ಪನ್ನ ಮಾರುಕಟ್ಟೆ …

Read More »

ಬ್ರೇಕಿಂಗ್ : ರಾಜ್ಯದಲ್ಲಿ ನಿಂತಿಲ್ಲ ಕೊರೋನಾ ಅಟ್ಟಹಾಸ, ಇಂದು 22 ಮಂದಿಯಲ್ಲಿ ಸೋಂಕು ಪತ್ತೆ..!

ಬೆಂಗಳೂರು, ಏ.30- ಮತ್ತೊಮ್ಮೆ ರಾಜ್ಯದಲ್ಲಿ ಕೊರೊನಾ ಸೋಂಕು ಅಬ್ಬರಿಸಿದೆ. ಇಂದು ಮಧ್ಯಾಹ್ನದವರೆಗೂ ನಡೆದ ಪರೀಕ್ಷೆಯಲ್ಲಿ 22 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 557ಕ್ಕೇರಿದೆ. 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 223 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈವರೆಗೂ ಹಸಿರು ವಲಯವಾಗಿದ್ದ ತುಮಕೂರಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಹಿರೇಬಾಗವಾಡಿಯಲ್ಲಿ 12, ಹುಕ್ಕೇರಿಯಲ್ಲಿ ಎರಡು, ಬೆಂಗಳೂರು ನಗರದಲ್ಲಿ ಮೂರು ಮಂದಿಗೆ, ವಿಜಯಪುರದಲ್ಲಿ ಎರಡು, ದಕ್ಷಿಣ ಕನ್ನಡ, ತುಮಕೂರು, …

Read More »

ಮದ್ಯದಂಗಡಿ ಸದ್ಯ ಓಪನ್ ಆಗಲ್ಲ : ಆರ್.ಅಶೋಕ್

ಬೆಂಗಳೂರು, ಏ.30- ಮದ್ಯದಂಗಡಿಗಳನ್ನು ಸದ್ಯಕ್ಕೆ ತೆರೆಯುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದರೂ ಸದ್ಯಕ್ಕೆ ಮದ್ಯದಂಗಡಿ ತೆರೆಯುವ ಯಾವುದೇ ಉದ್ದೇಶ ಇಲ್ಲ ಎಂದರು. ಒಂದು ವೇಳೆ ಮದ್ಯದಂಗಡಿಗಳನ್ನು ತೆರೆದರೆ ಬಡವರಿಗೆ ಮತ್ತು ಕಾರ್ಮಿಕರಿಗೆ ಹಂಚಿಕೆಯಾಗಿರುವ ಆಹಾರ ಸಾಮಗ್ರಿಗಳು, ಎಣ್ಣೆಗಾಗಿ ಖಾಲಿಯಾಗುವ ಸಾಧ್ಯತೆಯಿದ್ದು, ಕುಟುಂಬದವರು ಉಪವಾಸ ಬೀಳಲಿದ್ದಾರೆ. ಹೀಗಾಗಿ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಅವರು …

Read More »

ಪೊಲೀಸ್ ವರಿಷ್ಠಾಧಿಕಾರಿ-ಅಪರ ಜಿಲ್ಲಾಧಿಕಾರಿ ನಗರ ಸಂಚಾರ

ಹಾವೇರಿ:  ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಬಟ್ಟೆ-ಬಂಗಾರ ಮಾರಾಟದ ಅಂಗಡಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆಯೇ ಹಾಗೂ ನಿಯಮ ಪಾಲಿಸಲಾಗತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇಂದು ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ನಗರ ಸಂಚಾರ ಕೈಗೊಂಡು ಜಾಗೃತಿ ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, …

Read More »

ಬಾಳೇಕುಂದ್ರಿ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಕಾಯಿಪಲ್ಯೆ,ಮತ್ತು ರೇಷನ ಕಿಟ್ ವಿತರಣೆ.

ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಕಾಯಿಪಲ್ಯೆ,ಮತ್ತು ರೇಷನ ಕಿಟ್ ವಿತರಣೆ. ದೇಶಾದ್ಯಂತ ಮಹಾಮಾರಿ ಕೊರೋನ ಸೋಂಕು ಹರಡಿರುವ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ನಿರಾಶ್ರಿತರು, ಕೂಲಿ ಕಾರ್ಮಿಕರು, ಬಡ ಕುಟುಂಬಗಳು ತೊಂದರೆ ಗೀಡಾಗಿದ್ದರಿಂದ ದಿನ ಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುವಂತಾಗಿದೆ. ನೆರವಿಗೆ ನಿಂತ ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ …

Read More »

ಕೋವಿಡ್-೧೯: ಇಬ್ಬರು ಮಹಿಳೆಯರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಏ.30(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಇಬ್ಬರು ಮಹಿಳೆಯರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ 67 ವರ್ಷದ (ಪಿ-149) ಮತ್ತು 36 ವರ್ಷದ(ಪಿ-147) ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಕ್ರಮವಾಗಿ ಏ.1 ಹಾಗೂ ಮಾ.31 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ …

Read More »

ಬೆಳಗಾವಿ ಇಂದು ಬೆಳಗಾವಿ ಯಲ್ಲಿ ಮತ್ತೆ 14ಪಾಸಿಟಿವ್

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೋರೊನಾ ಸೋಂಕು *ಗಡಿನಾಡು ಬೆಳಗಾವಿ ಹೆಬ್ಬಾಗಿಲಲ್ಲಿ ಕೋರೊನಾ ಮೃದಂಗ* *ಬೆಳಗಾವಿಯಲ್ಲಿ ಇಂದು ಇಂದು ಒಂದೇ ದಿನ ಪತ್ತೆಯಾದ 14 ಕೋರೊನಾ ಪ್ರಕರಣ* ಕುಂದಾನಗರಿಗೆ ಮತ್ತೆ ಕಂಟಕವಾದ ಕಿಲ್ಲರ್ ಕೋರೊನಾ ವೈರಸ್ *ಬೆಳಗಾವಿ ಜಿಲ್ಲೆಯಲ್ಲಿ ಹತೋಟಿಗೆ ಬರುತ್ತಿಲ್ಲ ಕೋರೊನಾ* *ಹಿರೇಬಾಗೇವಾಡಿಯಲ್ಲಿ 11 ಹಾಗೂ ಸಂಕೇಶ್ವರದಲ್ಲಿ 3 ಕೋರೊನಾ ಪಾಸಿಟಿವ್ ಕೇಸ್* .

Read More »

ಅರಷಣಗಿ ಗ್ರಾಮದಲ್ಲಿ ಸಂಪೂರ್ಣವಾಗಿ ಜಾತ್ರೆಯನ್ನು ಮಾಡದೆ ಮಾನವಿತೆ ಮೆರೆದ ಅರಷಣಗಿ ಗ್ರಾಮಸ್ಥರು

ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಬರುವ ಅರಷಣಗಿ ಗ್ರಾಮದಲ್ಲಿ ವರ್ಷಕೊಮ್ಮ ಬಸವ ಜಯಂತಿ ಆದ ದಿನದಲ್ಲಿ ಶ್ರೀ ಮಾರುತ್ತೇಶ್ವರ ಜಾತ್ರೆ ಹಾಗೂ ನೀರೋಕಳಿ ಕಾರ್ಯಕ್ರಮ ಐದು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಮಾಡಲಾಗುತ್ತಿತ್ತು ಈ ಜಾತ್ರಗೆ ರಾಜ್ಯ ಹಾಗೂ ಬೇರೆ ಕಡೆಗಳಿಂದ ಸಾಕಷ್ಟು ಅಪಾರ ಭಕ್ತ ವೃಂದ ಹರಿದು ಬರುತ್ತಿತ್ತು ಆದರೆ ಇಡೀ ದೇಶಕ್ಕೆ ಮಾರಕವಾದ ಕೋವಿಡ್ 19 ಕರೋನಾ ಏಂಬ ರೋಗದಿಂದಾಗಿ ಇಡೀ ದೇಶವೆ ತತ್ತರಿಸುತ್ತಿದ್ದು ಕೇಂದ್ರ ಹಾಗೂ …

Read More »

ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ……

ಬೆಂಗಳೂರು(ಏ. 29): ಲಾಕ್​ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್​ಗಳಿವೆ. ಈಗ ಈ ಮಾಸ್ಕ್​ಗಳಿಂದಲೇ ಹೊಸದೊಂದು ಸಮಸ್ಯೆ ಎದುರಾಗಿದೆ. ಜನರು ಮಾಸ್ಕ್​ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್​ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. …

Read More »