Breaking News

ಜಿಲ್ಲೆ

ಅಪಹರಣವಾದ ಮಗುವನ್ನು 48 ಗಂಟೆಯೊಳಗೆ ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ನೆಲಮಂಗಲ: 18 ತಿಂಗಳ ಮಗುವನ್ನು ಹಣಕ್ಕಾಗಿ ಅಪಹರಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ದಿನದ ಹಿಂದೆ ಮನೆ ಮುಂದೆ ಇದ್ದ ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿದ್ದರು. ಇಂದು ಪ್ರಕರಣ ಭೇದಿಸಿದ ಪೊಲೀಸರು ಪೋಷಕರಿಗೆ ಮಗುವನ್ನು ಹಸ್ತಾಂತರಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಕಡಬಗೆರೆ ಬಳಿ ಮಗು ಅಪಹರಣವಾಗಿತ್ತು. ಮಾಚೋಹಳ್ಳಿಯ ರವಿ ದಂಪತಿಯ 18 ತಿಂಗಳ ಹೆಣ್ಣು ಮಗುವನ್ನು ಅಪಹರಣ ಮಾಡಿದ್ದರು. ಅಪಹರಣವಾದ ಮಗುವನ್ನು 48 …

Read More »

ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: d.c…

ಧಾರವಾಡ: ಅಗಸ್ಟ್ 22ರಿಂದ ಸೆಪ್ಟಂಬರ್ 4ರವರೆಗೆ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನಾ ನಡೆಯುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಕಾಯ್ದೆಯಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಸಮಾರಂಭ, …

Read More »

ಭರ್ಜರಿ ಮಳೆಯಲ್ಲೇ ಗೌರಿ ಪೂಜೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ, ಇಂದು ಬೆಳಗ್ಗೆಯಿಂದ ಮತ್ತೆ ಶುರುವಿಟ್ಟಿದ್ದಾನೆ. ವಾರದ ನಂತರ ಇದ್ದಕ್ಕಿದ್ದಂತೆ ಮಳೆಯಾಗಿರುವುದು ಜನರನ್ನು ಪರದಾಡುವಂತೆ ಮಾಡಿದೆ. ಇದು ಗೌರಿ ಹಬ್ಬಕ್ಕೂ ತಟ್ಟಿದ್ದು, ಮಹಿಳೆಯರು ಮಳೆಯನ್ನೂ ಲೆಕ್ಕಿಸದೆ ಪೂಜೆ ನೆರವೇರಿಸಿದ್ದಾರೆ.ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಸುರಿಯುತ್ತಿರೋ ಮಳೆಯಲ್ಲೇ ಗೌರಿ ಹಬ್ಬಕ್ಕೆ ಮುಂದಾಗಿರೋ ಮಲೆನಾಡಿಗರು, ವರುಣನ ಅಬ್ಬರದ ನಡುವೆಯೇ ಗೌರಿಯನ್ನು ಪೂಜೆ ಮಾಡಿ ಮನೆಗೆ …

Read More »

ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ

ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ ಈ ಬಾರಿ ಸಾರ್ವಜನಿಕವಾಗಿ ಅದ್ಧೂರಿ ಗಣೇಶೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆ ಬಹುತೇಕರು ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸುತ್ತಾರೆ. ಹೀಗಾಗಿ ರಾಯಚೂರಿನ ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ ಬಂದಿದೆ. ನಗರದ ಜಯತೀರ್ಥದಾಸರ ಕುಟುಂಬ ಗೋಪಿ ಚಂದನದಿಂದ ಪರಿಸರ ಸ್ನೇಹಿ, ಸಾಂಪ್ರದಾಯಿಕ ಗಣೇಶನನ್ನ ಮಾಡಿ ಮಾರಾಟ ಮಾಡುತ್ತಿದ್ದಾರೆ. …

Read More »

ಹೋರಿ ಎಲ್ಲಿ ಎಷ್ಟು ಮೇಯ್ದರೇನು, ನಮ್ಮ ಮನೆಗೆ ಬರಬೇಕು:ಕಿಡಿಕಾರಿದ ಹೊರಟ್ಟಿ

ಧಾರವಾಡ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೋರಿಗೆ ಹೋಲಿಸಿ ಮಾತನಾಡಿದ್ದಾರೆ. ಧಾರವಾಡದಲ್ಲಿ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ಹಾಗೂ ಹಲವು ವಿಷಯಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ತಾಳ ಇಲ್ಲ, ತಂತಿಯೂ ಇಲ್ಲ. ವಲಸಿಗರು ಮತ್ತು ಮೂಲರ ಮಧ್ಯೆ ಇದ್ದಾರೆ ಎಂದು ಹೇಳಿದರು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ …

Read More »

2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮ ಪಂಚಾಯತಿಗೆ 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾ. ಪಂ. ಮಾಜಿ ಸದಸ್ಯ ವಿಕ್ರಮ ಬಣಗೆ ಆರೋಪಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಟ್ಟಿ  ಸರ್ಕಾರ ಪ್ರಕಟಿಸುವ 20 ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ …

Read More »

ಹಳೆ ವೈಷಮ್ಯಕ್ಕೆ ಕಲಬುರಗಿಯಲ್ಲಿ ಯುವಕ ಬಲಿಯಾದ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ 23 ವರ್ಷ ವಯಸ್ಸಿನ ಯುವಕನೊಬ್ಬನನ್ನು ಹಾಡುಹಗಲೇ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಕೃತ್ಯ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ . ಯುವಕನನ್ನು ನಗರದ ರಾಣೇಶ್ ಪೀರ್ ದರ್ಗಾ ಬಡಾವಣೆ ನಿವಾಸಿ ವಿರೇಶ್ ಕಡಗಂಚಿ ಎಂದು ಗುರುತಿಸಲಾಗಿದೆ . ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ಹಂತಕರು ಕೃತ್ಯವೆಸಗಿ ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ . ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿರೇಶ್​ನನ್ನು ಅಂಬ್ಯಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ …

Read More »

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ: ಕುಟುಂಬಕ್ಕೆ 30 ಲಕ್ಷ ಪರಿಹಾರ, ಉದ್ಯೋಗ ಘೋಷಿಸಿದ CM

ಬೆಂಗಳೂರು: ಮೈಸೂರಿನ ನಂಜನಗೂಡು THO ಡಾ‌.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ B.S.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. THO ಡಾ. SR ನಾಗೇಂದ್ರ, ತಾಲ್ಲೂಕು ಆರೋಗ್ಯ ಅಧಿಕಾರಿರವರು ಇಂದು ನಿಧನರಾದ ವಿಷಯನ್ನು ಕೇಳಿ ಅತೀವ ದುಃಖವಾಗಿದ್ದು ಈ ಘಟನೆಯ ಬಗ್ಗೆ ವಿಷಾದಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ …

Read More »

ಬಾಲಕಿ ಬಾಣಲೆಯಿಂದ ಬೆಂಕಿಗೆ. ಕಣ್ಣೀರುಕ್ಕಿಸುವ ಕತೆ ಇದು

ಗುಂಟೂರು: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಆಘಾತಗೊಂಡು ತಾಯಿಯ ಮನೆಗೆ ಹೋಗದೆ ಗೆಳತಿಯ ಮನೆಗೆ ಹೊರಟಾಗ ಮಾರ್ಗ ಮಧ್ಯೆ ದುರುಳನ ಕೈಗೆ ಸಿಕ್ಕು ಮತ್ತೆ ಮತ್ತೆ ಅತ್ಯಾಚಾರಕ್ಕೀಡಾದ ಘಟನೆ ಗುಂಟೂರು ಜಿಲ್ಲೆಯಿಂದ ವರದಿಯಾಗಿದೆ. ಆಕೆ 14 ವರ್ಷದ ಬಾಲಕಿ. ಆಕೆಗೆ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಲಾಗಿದೆ. ಪತಿ ಬೇರೆ ಕಡೆ ವಾಸಿಸುತ್ತಿದ್ದಾನೆ. ಈಕೆ ತಾಯಿಯ ಮನೆಯಲ್ಲಿದ್ದಾಳೆ. ಪತಿಗೆ ಪರಿಚಿತನಾದ ತನ್ನ ನೆರೆಮನೆಯಾತನಿಂದಾಗಿ ಅತ್ಯಾಚಾರಕ್ಕೊಳಗಾದ ಆಕೆ ತನಗೇನಾಯಿತು ಎಂದು ಆಘಾತಕ್ಕೊಳಗಾಗಿ ತಾಯಿಯ ಮನೆಗೆ ಹೋಗುವ …

Read More »

ಗಲಭೆ: ಮತ್ತೆ ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ಜಾಡನ್ನ ಹಿಡಿದು ಹೊರಟಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳ ಬೆಂಡೆತ್ತುತ್ತಿದ್ದಾರೆ. ಹೀಗಿದ್ದೂ ಕೆಲವು ಆರೋಪಿಗಳಿಗೆ ಇರುವ ಕೊಬ್ಬು, ಧಿಮಾಕು ಕಡಿಮೆ ಆಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅಳಿಯ ಹಾಗೂ ಗಲಭೆಯ ಪ್ರಮುಖ ಆರೋಪಿ ನವೀನ್ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನ ಸಿಸಿಬಿ ಇಂದು ಬಂಧಿಸಿದೆ. ಯೂಸುಫ್ ಬಂಧಿತ ಆರೋಪಿ. ಈತ ಗಲಾಟೆ ನಡೆದ ದಿನ ನವೀನ್ ಮನೆಗೆ ನುಗ್ಗಿ ದಾಂಧಲೆ …

Read More »