Home / ಜಿಲ್ಲೆ (page 1087)

ಜಿಲ್ಲೆ

ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮದ್ಯ ಮಾರಾಟವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕನ್ನಡ ಸೇನೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

    ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಕಚೇರಿಗೆ ತೆರಳಿದ ಕನ್ನಡ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿ ಮದ್ಯ ಮಾರಾಟ ಸ್ಥಗಿತಕ್ಕೆ ಆಗ್ರಹಿಸಿದರು. ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು. ಮದ್ಯ ಮಾರಾಟದ ಜತೆಗೆ ಗುಟ್ಕಾ ಮಾರಾಟಕ್ಕೂ ಸರ್ಕಾರ ಆದೇಶ ಮಾಡಿರುವುದು ಸರಿಯಲ್ಲ. ತಕ್ಷಣ ಮಾರಾಟ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. …

Read More »

ಮದ್ಯಪಾನ ಅಂಗಡಿಗಳ ಮುಂದೆ ಕುಡುಕರ ಸಂತಸ ಎದ್ದು ಕಾಣುತ್ತಿತ್ತು.

ಘಟಪ್ರಭಾ- 40 ದಿನಗಳಿಂದ ಮದ್ಯವಿಲ್ಲದೆ ಚಡಿಪಡಿಸುತ್ತಿರುವ ಕುಡುಕರಿಗೆ ಇಂದ ಸ್ವರ್ಗ ಸಿಕ್ಕಂತಾಗಿದೆ. ಮದ್ಯ ಪ್ರೀಯರಿಗೆ ಹಬ್ಬದ ವಾತಾವರಣವಿದ್ದು ಎಲ್ಲ ಮದ್ಯಪಾನ ಅಂಗಡಿಗಳ ಮುಂದೆ ಕುಡುಕರ ಸಂತಸ ಎದ್ದು ಕಾಣುತ್ತಿತ್ತು. ಸರಕಾರದ ಆದೇಶದಂತೆ ಇಂದು ಮುಂಜಾನೆ ಮದ್ಯದ ಅಂಗಡಿ ಆರಂಭ ಗೊಳ್ಳುವ ಮುಂಚೆ ಜನರು ಮದ್ಯ ಖರೀದಿಸಲು ಸಾಲುಗಟ್ಟಿ ನಿಂತಿರುವ ದೃಶ್ಯ ಬಹುತೇಕ ಕಡೆಗಳಲ್ಲಿ ಗೋಚರಿಸಿತ್ತು.ಕೆಲವು ಕಡೆ ಮದ್ಯದ ಅಂಗಡಿಗಳಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡು ಬಂದರೆ …

Read More »

ಕೋವಿಡ್-೧೯: 11 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಮೇ 4 (ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಒಬ್ಬ ಮಹಿಳೆಯು ಸೇರಿದಂತೆ ಹನ್ನೊಂದು ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ನಗರ ಕ್ಯಾಂಪ್ ಪ್ರದೇಶದ 4 ಜನರು; ರಾಯಬಾಗ ತಾಲ್ಲೂಕು ಕುಡಚಿಯ 4 ಜನರು ಮತ್ತು ಸಂಕೇಶ್ವರ, ಯಳ್ಳೂರ ಹಾಗೂ ಹಿರೇಬಾಗೇವಾಡಿಯ ತಲಾ …

Read More »

ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ……

ಧಾರವಾಡ/ರಾಯಚೂರು: ಇಂದು ಎಣ್ಣೆ ಅಂಗಡಿ ಮುಂದೆ ಎಲ್ಲಿ ನೋಡಿದರೂ ಉದ್ದದ್ದೂ ಕ್ಯೂ ಕಂಡುಬರುತ್ತಿದೆ. ಆದ್ರೆ ಧಾರವಾಡದಲ್ಲಿ ಒಂದೆಡೆ ಮದ್ಯದಂಗಡಿ ಇನ್ನೊಂದೆಡೆ ರೇಷನ್ ಅಂಗಡಿಗೆ ಕ್ಯೂ ಹಚ್ಚಿದ ಅಪರೂಪದ ದೃಶ್ಯಗಳು ಕಂಡುಬಂದಿವೆ. ಧಾರವಾಡದ ತೇಜಸ್ವಿ ನಗರದಲ್ಲಿರುವ ಖಾಸಗಿ ವೈನ್ ಶಾಪ್ ಪಕ್ಕವೇ ರೇಷನ್ ಅಂಗಡಿ ಸಹ ಇರುವುದರಿಂದ ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ನಿಂತಿದ್ದರೆ, ರೇಷನ್ ಅಂಗಡಿ ಮುಂದೆ ಮಹಿಳೆಯರು ಕ್ಯೂ ಹಚ್ಚಿದ್ದಾರೆ. ಎರಡು ಅಂಗಡಿಗಳು ಅಕ್ಕಪಕ್ಕದಲ್ಲಿರುವುದರಿಂದ ಈ ಅಪರೂಪ …

Read More »

ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ ಪೊಲೀಸರು ಮಾಡುವ ಕೆಲಸವನ್ನು ತಾನು ಮಾಡಿದ್ದಾನೆ. 

ಧಾರವಾಡ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಓಪನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಫುಲ್ ಖುಷಿಯಲ್ಲಿರುವ ಎಣ್ಣೆಪ್ರಿಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಆರಂಭಿಸಿದ್ದಾರೆ. ಹೌದು. ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಅನೇಕ ಪ್ರತಿಭೆಗಳು ಮಾಯವಾಗುತ್ತವೆ ಎಂದು ಕುಡುಕರ ಬಗೆಗಿನ ಕಾಮಿಡಿ ದೃಶ್ಯಗಳನ್ನು ನಾವು ಈಗಾಗಲೇ ಟಿಕ್ ಟಾಕ್ ನಲ್ಲಿ ನೋಡಿದ್ದೇವೆ. ಅಂತೆಯೇ ಧಾರವಾಡದಲ್ಲೊಬ್ಬ ವ್ಯಕ್ತಿಯೊಬ್ಬನ ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ …

Read More »

ಅಂಗಡಿ ಓಪನ್ ಮಾಡಿದ ಮೊದಲ ದಿನವೇ ಮದ್ಯಪ್ರಿಯರಿಗೆ ಸರ್ಕಾರ ಬೆಲೆ ಏರಿಕೆಯ ಶಾಕ್

ಬೆಂಗಳೂರು: ಅಂಗಡಿ ಓಪನ್ ಮಾಡಿದ ಮೊದಲ ದಿನವೇ ಮದ್ಯಪ್ರಿಯರಿಗೆ ಸರ್ಕಾರ ಬೆಲೆ ಏರಿಕೆಯ ಶಾಕ್ ನೀಡಿದೆ. ಒಣಗಿದ ತುಟಿಗೆ ಎಣ್ಣೆ ಸೇರಿ ನಶೆ ಏರುವ ಮೊದಲೇ ಕಿಕ್ ಇಳಿಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇವತ್ತು ಮದ್ಯ ಖರೀದಿ ಮಾಡೋರಿಗೆ ಬೆಲೆ ಏರಿಕೆಯ ಬಿಸಿ ತಾಗಲ್ಲ. ಅಂಗಡಿಯಲ್ಲಿ ಹಳೆ ಸ್ಟಾರ್ ಇರೋದರಿಂದ ಮೊದಲ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಾಳೆಯಿಂದ ಬಜೆಟ್ ನಲ್ಲಿ ಸೆಸ್ ಶೇ.6 ಅನ್ವಯವಾಗಲಿದೆ. ಏಪ್ರಿಲ್ ಮೊದಲ ದಿನದಿಂದಲೇ ಮದ್ಯದ …

Read More »

ಮದ್ಯ’ವಿಲ್ಲದೆ ‘ಮಧ್ಯ’ರಾತ್ರಿ ಎದ್ದು ಕೂರ್ತಿದ್ದೆ: ಎಣ್ಣೆಪ್ರಿಯನ ಮನದಾಳದ ಮಾತು,ಮೊದಲು ಬಂದ ಗ್ರಾಹಕನಿಗೆ ವೈನ್ ಶಾಪ್ ಮಾಲೀಕರು ಹಾರ ಹಾಕಿ ಸನ್ಮಾನ

ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಕರ್ನಾಟದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಣ್ಣೆ ಪ್ರಿಯರು ಫುಲ್ ಖುಷಿಯಾಗಿದ್ದಾರೆ. ಈ ಸಂಬಂಧ ವ್ಯಕ್ತಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಾರ್ ಓಪನ್ ಮಾಡಿರೋದು ತುಂಬಾ ಖುಷಿಯಾಗುತ್ತಿದೆ. ನಿನ್ನೆ ಟಿವಿಯಲ್ಲಿ ಮೇ 4ರಂದು ಮದ್ಯದಂಗಡಿಗಳು ಓಪನ್ ಅಂದಾಗ ತುಂಬಾನೇ ಖುಷಿಯಾಯ್ತು. ಹೀಗಾಗಿ ಇಂದು ಬೆಳಗ್ಗೆನೇ ಬಂದು ಟೋಕನ್ ತೆಗೆದುಕೊಂಡು ಕ್ಯೂನಲ್ಲಿ …

Read More »

ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ

ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಉಡುಪಿ: ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ. ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಅಂತ ಎದ್ದು ಬಿದ್ದು ಮದ್ಯ ಖರೀದಿ ಮಾಡಿದರು. ರೂಲ್ಸ್ & ರೆಗ್ಯುಲೇಶನ್ ಅನ್ನು ಉಡುಪಿಯ ಮಣಿಪಾಲದಲ್ಲಿ ಗಾಳಿಗೆ ತೂರಿ, ಬಿಸಿಲ ದಾಹ ತೀರಿಸಲು ಬಿಯರ್ ಗಾಗಿ ಬಿಸಿಲಿನಲ್ಲೇ ಯುವತಿಯರು ಒಣಗಿದರು. ಮಣಿಪಾಲದಲ್ಲಿ ಮದ್ಯಕ್ಕಾಗಿ ಯುವತಿಯರು ಸರತಿ ಸಾಲು ಕಟ್ಟಿದ್ದರು. ಬಿಸಿಲ …

Read More »

ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್……

ಮೈಸೂರು: ಜಿಲ್ಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ ಆಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ. ಮೈಸೂರಿನ ದೇವರಾಜ ಠಾಣಾ ವ್ಯಾಪ್ತಿಯಲ್ಲಿರುವ ಟ್ರೂ ಸ್ಪಿರಿಟ್ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಾಲ್ಕೈದು ಬಾರಿ ವಾರ್ನ್ ಮಾಡಿದ್ದರು. ಇನ್ಸ್‌ಪೆಕ್ಟರ್ ಮಾತಿಗೂ ಲೆಕ್ಕಿಸದೆ ಮಾಲೀಕರು ಮದ್ಯ ಮಾರಾಟ ಮಾಡುತ್ತಿದ್ದರು. ಹೀಗಾಗಿ ಪೊಲೀಸರು ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ. ಮದ್ಯದಂಗಡಿಯಲ್ಲಿ ಸಿಬ್ಬಂದಿಯಿಲ್ಲದೆ …

Read More »

ಬೆಳಗಾವಿ ಜಿಲ್ಲೆಯ 10 ಪ್ರದೇಶಗಳಲ್ಲಿ ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ

ಬೆಳಗಾವಿ: ರಾಜ್ಯದಲ್ಲಿ ಇಂದಿನಿಂದ ಮೂರನೇ ಹಂತದ ಲಾಕ್ ಡೌನ್ ಮುಂದುವರೆದಿದ್ದು, ಈ ಹಂತದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದೆ. ಕಳೆದ ಒಂದುವರೆ ತಿಂಗಳ ಬಳಿಕ ಇಂದಿನಿಂದ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಬೆಳಗಾವಿ ಜಿಲ್ಲೆಯ 10 ಪ್ರದೇಶಗಳಲ್ಲಿ ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಇಲ್ಲಿನ 10 ಪ್ರದೇಶಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಈ ಕಂಟೈನ್ಮೆಂಟ್ ಝೋನ್ ಗಳಲ್ಲಿ ಮದ್ಯ ಸಿಗಲಾರದು. ಬೆಳಗಾವಿ …

Read More »