Breaking News
Home / ಜಿಲ್ಲೆ / ಮೈಸೂರ್ / ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್……

ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್……

Spread the love

ಮೈಸೂರು: ಜಿಲ್ಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ ಆಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ.

ಮೈಸೂರಿನ ದೇವರಾಜ ಠಾಣಾ ವ್ಯಾಪ್ತಿಯಲ್ಲಿರುವ ಟ್ರೂ ಸ್ಪಿರಿಟ್ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಾಲ್ಕೈದು ಬಾರಿ ವಾರ್ನ್ ಮಾಡಿದ್ದರು. ಇನ್ಸ್‌ಪೆಕ್ಟರ್ ಮಾತಿಗೂ ಲೆಕ್ಕಿಸದೆ ಮಾಲೀಕರು ಮದ್ಯ ಮಾರಾಟ ಮಾಡುತ್ತಿದ್ದರು. ಹೀಗಾಗಿ ಪೊಲೀಸರು ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

ಮದ್ಯದಂಗಡಿಯಲ್ಲಿ ಸಿಬ್ಬಂದಿಯಿಲ್ಲದೆ ಕೇವಲ ಇಬ್ಬರಿಂದ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಆಗ ಪೊಲೀಸರು ಸಿಬ್ಬಂದಿಯನ್ನ ಕರೆಸಿಕೊಳ್ಳುವಂತೆ ಮಾಲೀಕರಿಗೆ ಹೇಳಿದ್ದರು. ಮಾಲೀಕ ಟೀಗೆ ಹೋಗಿದ್ದಾರೆಂದು ಬರುತ್ತಾರೆ ಎಂದು ಸುಳ್ಳು ನೆಪ ಹೇಳಿದ್ದನು. ಈ ವೇಳೆ ಪೊಲೀಸರು ಖಡಕ್ ವಾರ್ನ್ ಮಾಡಿ ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

ಇವತ್ತಿಗೆ ವ್ಯಾಪಾರ ಸಾಕು, ಲೆಕ್ಕ ಹಾಕಿಕೊಂಡು ಮನೆಗೆ ಹೋಗಿ ಎಂದು ವಾರ್ನ್ ಮಾಡಿ ಕಳುಹಿಸಿದ್ದಾರೆ. ಅಲ್ಲದೇ ಮಳಿಗೆ ಮಾಲೀಕರಿಗೆ ಠಾಣೆಗೆ ಬಂದು ಅನುಮತಿ ಪಡೆಯುವಂತೆ ಎಚ್ಚರಿಸಿ ಹೋಗಿದ್ದಾರೆ. ಪದೇ ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.


Spread the love

About Laxminews 24x7

Check Also

ಮೈಸೂರು ದಸರಾಕ್ಕೆ ಮುನ್ನುಡಿ : ಸಾಂಪ್ರದಾಯಿಕ ಪೂಜೆ ಮೂಲಕ ಅರಮನೆ ಪ್ರವೇಶಿಸಿದ ಗಜಪಡೆ

Spread the love ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ರೂವಾರಿಗಳಾದ ಗಜಪಡೆಗೆ ಅರಮನೆಯ ಜಯಮಾರ್ತಾಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ