Breaking News
Home / ಜಿಲ್ಲೆ (page 1082)

ಜಿಲ್ಲೆ

ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು,ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.

ಹಾವೇರಿ: ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಸೋಂಕಿತ ವಾಸವಾಗಿದ್ದ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಏಪ್ರಿಲ್ 28 ರಂದು ಗೂಡ್ಸ್ ಲಾರಿಯಲ್ಲಿ ಮೂವರು ಮುಂಬೈನಿಂದ ಸವಣೂರು ಪಟ್ಟಣಕ್ಕೆ ಬಂದಿದ್ದರು. ಅವರನ್ನ ತಪಾಸಣೆಗೆ ಒಳಪಡಿಸಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ಕಳಿಸಿದ ನಂತರ ಮೂವರಲ್ಲಿ 32 ವರ್ಷದ ಓರ್ವನಿಗೆ ಕೊರೊನಾ ಸೋಂಕು ಇರೋದು ಸೋಮವಾರ ದೃಢಪಟ್ಟಿತ್ತು. …

Read More »

ಫ್ರೀ ಹಾಲು-ರೇಷನ್ ಗಾಗಿ ಗೋಗರೆಯುತ್ತಿದ್ದವರು ಇಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ..!

ಬೆಂಗಳೂರು, ಮೇ 5- ಇಷ್ಟು ದಿನ ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ, ಬಡತನವಿದೆ, ಒಂದೊತ್ತಿನ ಊಟಕ್ಕೂ ಗತಿಯಿಲ್ಲ. ರೇಷನ್ ಕೊಡಿ, ಮಕ್ಕಳಿಗೆ ಹಾಲು ಕೊಡಿ ಎಂದು ಗೋಗರೆಯುತ್ತಿದ್ದ ಬಹುತೇಕ ಜನ ಇಂದು ದಿಢೀರೆಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದರು! ಸರ್ಕಾರ ಇದುವರಗೆ ಉಚಿತವಾಗಿ ಹಾಲು, ದಿನಸಿ ಕೊಟ್ಟಿದೆ. ಸ್ವಯಂಸೇವಾ ಸಂಸ್ಥೆಗಳವರು ಹಸಿದವರಿಗೆ ಅನ್ನ, ಆಹಾರಗಳನ್ನು ಸಾಧ್ಯವಾದಷ್ಟು ನೀಡಿದ್ದಾರೆ. ಲಾಕ್‍ಡೌನ್ ಸಡಿಲಗೊಂಡು ಮದ್ಯದಂಗಡಿ ಓಪನ್ ಆಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಲಿಂಗಬೇಧ …

Read More »

ವಿಕ್ಟೋರಿಯಾ ಆಸ್ಪತ್ರೆ ಸೇಫ್-ಸೋಂಕಿತ ಪೊಲೀಸ್ ಪೇದೆಯ ಅತ್ತಿಗೆಗೆ ನೆಗೆಟಿವ್

ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯ ಕೊರೊನಾ ಸೋಂಕಿತ ಪೇದೆಯ ಅತ್ತಿಗೆಯ ವೈದ್ಯಕೀಯ ವರದಿ ಕೊರೊನಾ ನೆಗೆಟಿವ್ ಬಂದಿದೆ. ಪೇದೆಯ ಅತ್ತಿಗೆ ವೈದ್ಯೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್-19 ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ರೋಗಿ ನಂ.650ರ ಅತ್ತಿಗೆ ಅಂತಾ ಗೊತ್ತಾದ ತಕ್ಷಣವೇ ವೈದ್ಯಾಧಿಕಾರಿಗಳು ಕೋವಿಡ್ ಟೆಸ್ಟ್ ಮಾಡಿಸಿದ್ದರು. ಇಂದು ವರದಿಯಲ್ಲಿ ಕೋವಿಡ್-19 ನೆಗೆಟಿವ್ ಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ನಿರಾಳರಾಗಿದ್ದಾರೆ. ಒಂದು ವೈದ್ಯೆಗೆ ಕೊರೊನಾ ಪಾಸಿಟಿವ್ ಬಂದಿದ್ರೆ ಇಡೀ ಆಸ್ಪತ್ರೆಯನ್ನ ಕ್ವಾರಂಟೈನ್ ಮಾಡುವ …

Read More »

ಕಾಂಪೌಂಡ್‍ಗೆ ಕಾರು ಡಿಕ್ಕಿಯಾಗಿ ಚಾಲಕ ಸಾವು – ನಜ್ಜುಗುಜ್ಜಾದ ಕಾರ್……..

ಚಿಕ್ಕಬಳ್ಳಾಪುರ: ಕಾಂಪೌಂಡ್‍ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಸೋಮವಾರ ರಾತ್ರಿ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ 32 ವರ್ಷದ ವಿನೋದ್ ಮೃತ ವ್ಯಕ್ತಿ. ಮೃತ ವಿನೋದ್ ಬೆಂಗಳೂರಿನಲ್ಲಿ ಪೈಂಟ್ಸ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ವಿನೋದ್ ಬೆಂಗಳೂರಿನಿಂದ ವಾಪಸ್ ಬಂದು ತನ್ನ ಸ್ವಗ್ರಾಮದಲ್ಲಿದ್ದನು. ಸೋಮವಾರ ರಾತ್ರಿ ಗ್ರಾಮದಲ್ಲೇ ಕಾಂಪೌಂಡ್‍ಗೆ …

Read More »

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತಂತೆ ಇಲ್ಲಿದೆ ಹೊಸ ಅಪ್ಡೇಟ್ ………….

ಬೆಂಗಳೂರು : ಕೊರೊನಾ ಸೋಂಕು ಹೆಚ್ಚಾದ ಪರಿಣಾಮ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾದ ಕಾರಣ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ದತೆಗಳನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ. ಸೋಮವಾರ ಎಲ್ಲ ಶಿಕ್ಷಣ ಉಪನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿದ್ದು, ಈ ಸಂದರ್ಭ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ಮುಗಿದ ತಕ್ಷಣವೇ ಎಸ್ ಎಸ್ ಎಲ್ ಸಿ …

Read More »

ಮೇ 20ರಿಂದ ದೇಶವ್ಯಾಪಿ ಸಾರಿಗೆ, ಜೂ.1ರಿಂದ ಮಾಲ್‍ಗಳು, ಸಭೆ-ಸಮಾರಂಭಗಳಿಗೆ ಅವಕಾಶ..?

ನವದೆಹಲಿ, ಮೇ 5- ಲಾಕ್‍ಡೌನ್‍ನಲ್ಲಿ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರ ಮೇ 20ರಿಂದ ದೇಶವ್ಯಾಪಿ ಸಾರಿಗೆ ಸಂಚಾರ ಮತ್ತು ಜೂ.1ರಿಂದ ಮಾಲ್‍ಗಳು ಮತ್ತು ಸಭೆ, ಸಮಾರಂಭಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಉನ್ನತ ಮೂಲಗಳ ಪ್ರಕಾರ ಮೇ 20ರಿಂದ ದೇಶವ್ಯಾಪಿ ಬಸ್, ರೈಲು, ಟ್ಯಾಕ್ಸಿ, ಆಟೋ ಮತ್ತು ಇತರ ಖಾಸಗಿ ಬಾಡಿಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಜೂ.20ರಿಂದ ಮಾಲ್‍ಗಳು, ಬೃಹತ್ ವಾಣಿಜ್ಯ ಸಂಕೀರ್ಣಗಳು, ಸಿನಿಮಾ …

Read More »

ಲ್ಯಾಪ್‍ಟಾಪ್ ಬಿಟ್ಟು ನೇಗಿಲ ಹೊತ್ತ ಟೆಕ್ಕಿಗಳು..!

ಹುಬ್ಬಳ್ಳಿ, ಮೇ 5ಅವರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಂಡು ಲ್ಯಾಪ್ ಟ್ಯಾಪ್ ಮುಂದಿಸಿಕೊಂಡು ತಾಂತ್ರಿಕ ಲೋಕದಲ್ಲಿ ಸದಾ ಮಗ್ನರಾಗುತ್ತಿದ್ದ ಯುವಕರು ಈಗ ಬದಲಾದ ಸಂದರ್ಭದಲ್ಲಿ ಹೊಲಗಳತ್ತ ಬಂದಿದ್ದಾರೆ. ಅದು ನೇಗಿಲು ಹೊತ್ತುಕೊಂಡು. ತಮ್ಮ ತಂದೆ ,ತಾಯಿ, ಅಣ್ಣ ತಂಗಿ, ತಮ್ಮಂದಿರ, ಆಳು ಕಾಳು ಜೊತೆಗೆ. ಇನ್ನು ಕೇಲವರು ಬೀದಿ ಬದಿಯಲ್ಲಿ ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ. ಹೌದು ಇದು ಕರೋನಾ ವೈರಸ್ ತಂದಿಟ್ಟ ಪರಿಸ್ಥಿತಿ. ಲಂಡನ್, ಕಲ್ಕತ್ತಾ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ …

Read More »

ಕಾರ್ಯಕ್ರಮಕ್ಕೆ ತೆರಳಿ ಸನ್ಮಾನ ಸ್ವೀಕರಿಸಿ ಪಿಎಸ್‍ಐ ಎಡವಟ್ಟು……

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದರೆ ಇನ್ನೊಂದೆಡೆ ಜಿಲ್ಲೆಯ ಚಡಚಣ ಪಿಎಸ್‍ಐ ಮಹಾ ಯಡವಟ್ಟು ಮಾಡಿದ್ದಾರೆ. ಲಾಕ್‍ಡೌನ್ ನಡುವೆ ಚಡಚಣ ಪಿಎಸ್‍ಐ ಮಹಾದೇವ ಯಲಿಗಾರ್ ಭರ್ಜರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ ಸನ್ಮಾನ ಸ್ವೀಕರಿಸಿದ್ದಾರೆ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಕೆಲ ಜನ ಕೊರೊನ ವಾರಿಯರ್ಸ್‍ಗೆಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮ ತಡೆಯುವುದನ್ನು ಬಿಟ್ಟು ಖುದ್ದು ತಾವು ಹಾಗೂ ತಮ್ಮ ಸಿಬ್ಬಂದಿ ಸಮೇತ ಹೋಗಿ ಸನ್ಮಾನ ಸ್ವೀಕರಿಸಿದ್ದಾರೆ. …

Read More »

ಗ್ರೀನ್‍ಝೋನ್ ದಾವಣಗೆರೆ ನಗರದಲ್ಲಿ 14 ದಿನ ಮದ್ಯ ನಿಷೇಧ!………

ದಾವಣಗೆರೆ: ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ನಿನ್ನೆಯಿಂದ ಮದ್ಯದಂಗಡಿಗಳು ಓಪನ್ ಆಗಿವೆ. ಆದರೆ ಗ್ರೀನ್ ಝೋನ್ ದಾವಣಗೆರೆಯಲ್ಲಿ ಮಾತ್ರ ಇನ್ನೂ 14 ದಿನ ಎಣ್ಣೆಗೆ ನಿಷೇಧ ಹೇರಲಾಗಿದೆ. ಹೌದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದಾವಣಗೆರೆ ಮುಕ್ಕಾಲು ಪ್ರಮಾಣದಷ್ಟು ಓಪನ್ ಆಗಬೇಕಿತ್ತು. ಮೊದಲು 2 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅಷ್ಟೇ ಬೇಗ ಗುಣಮುಖರಾಗಿದ್ರು. ಅತ್ಯಂತ ಯಶಸ್ವಿಯಾಗಿ ಕೊರೊನಾ ನಿಭಾಯಿಸಿದ ಕೀರ್ತಿ ದಾವಣಗೆರೆ ಪಡೆದಿತ್ತು. ಆದರೆ ಆ ಎಲ್ಲಾ ಹೆಗ್ಗಳಿಕೆಯನ್ನು ಈಗಿನ …

Read More »

ಮದ್ಯದಂಗಡಿ ಕಳವು ಪ್ರಕರಣದಲ್ಲಿ ಮಾಲೀಕನೇ ಕಳ್ಳ!

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರಿನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಅತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 30ರ ರಾತ್ರಿ ನಗರ ಹೊರವಲಯದ ಗೋಲ್ಡನ್ ಬಾರಿನ ಸಿಸಿಟಿವಿ ಒಡೆದು ಹಾಕಿ, ಬಾರಿನ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮೇ 1ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬಾರ್ ಮಾಲೀಕ, ನಗರಸಭೆ ಸದಸ್ಯ ದೀಪಕ್ ಹಾಗೂ ಆತನ …

Read More »