Breaking News
Home / ಜಿಲ್ಲೆ (page 1015)

ಜಿಲ್ಲೆ

ಮನೆಯಿಂದ ಹೊರ ಬರ್ತಿದ್ದಂತೆ ಬಿದ್ದ ಮರ- ವ್ಯಕ್ತಿ ಸಾವು

ಕಲಬುರಗಿ: ಮೈ ಮೇಲೆ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಲಬುರಗಿ ಹೊರವಲಯದಲ್ಲಿ ನಡೆದಿದೆ. ಕಲಬುರಗಿ ಹೊರವಲಯದ ಸೆಂಟ್ರಲ್ ಜೈಲು ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ. ಗೋವಿಂದ ಚೌವಾಣ್ (41) ಮೃತ ದುರ್ದೈವಿ. ಮೃತ ಗೋವಿಂದ ಚೌವಾಣ್ ಕಾರಾಗೃಹದ ಡಿ.ಗ್ರೂಪ್ ಮಹಿಳಾ ಸಿಬ್ಬಂದಿ ಪಾರುಬಾಯಿ ಪತಿ ಎಂದು ತಿಳಿದು ಬಂದಿದೆ. ಮೃತ ಗೋವಿಂದ ಚೌವಾಣ್ ಇಂದು ಬೆಳಗ್ಗೆ ಸುಮಾರು 5.30ಕ್ಕೆ ಕಸ ಚೆಲ್ಲಲು ಮನೆ ಹೊರಗೆ ಬಂದಿದ್ದಾರೆ. ಆಗ …

Read More »

ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ- ಶಿಕ್ಷಣ ಇಲಾಖೆಯ 7 ಜನ ಸಿಬ್ಬಂದಿ ಅಮಾನತು

ದಾವಣಗೆರೆ: ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ ಆಡಿದ್ದ ಉತ್ತರ ವಲಯದ ಬಿಇಒ ಕಚೇರಿಯ 7 ಜನ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ಉತ್ತರ ವಲಯದ ಅಧೀಕ್ಷಕ ಎಚ್.ಎಸ್.ಬಸವರಾಜ್, ಪ್ರಥಮ ದರ್ಜೆ ಸಹಾಯಕ ಎಂ.ಸುಧಾಕರ್, ದ್ವಿತೀಯ ದರ್ಜೆ ಸಹಾಯಕ ಕೊಟ್ರೇಶ್, ದ್ವಿತೀಯ ದರ್ಜೆ ಸಹಾಯಕ ಬೆರಳಚ್ಚು ಗಾರ ಮಲ್ಲಿಕಾರ್ಜುನ್ ಮಠದ, ಶಿಕ್ಷಣ ಸಂಯೋಜಕ ಎಸ್.ಸೋಮಶೇಖರಪ್ಪ, ಡಿ.ಗ್ರೂಪ್ ನೌಕರ ಹರ್ಷವರ್ಧನ್, ಗುಮ್ಮನೂರು ಸರ್ಕಾರಿ ಹಿರಿಯ …

Read More »

ನಿಮ್ಮ ವಾಹನಗಳ ಆರ್‌ಸಿ ಹಾಗೂ ಇನ್ಸುರೆನ್ಸ್ ನಕಲಿಯಾಗಿರಬಹುದು ಹುಷಾರ್..!

ಬೆಂಗಳೂರು, ಜೂ.3- ನಿಮ್ಮ ವಾಹನಗಳ ಆರ್‍ಸಿ ಬುಕ್ ಅಸಲಿಯೇ? ನೀವು ಪಾವತಿಸುವ ವಾಹನ ತೆರಿಗೆ ನಕಲಿಯೇ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಏಕೆಂದರೆ, ನಕಲಿ ಆರ್‍ಸಿ ಮತ್ತು ಇನ್ಸುರೆನ್ಸ್ ಮಾಡಿಕೊಡುವ ಖದೀಮರಿದ್ದಾರೆ ಎಚ್ಚರ..! ಕೇವಲ 3000ರೂ.ಗಳಿಗೆ ನಕಲಿ ಆರ್‍ಸಿ ಕಾರ್ಡ್ ಮಾಡಿಕೊಡುವ ಹಾಗೂ 500 ರಿಂದ 1000ರೂ.ಗೆ ನಕಲಿ ಇನ್ಸೂರೆನ್ಸ್ ಮಾಡಿಕೊಡುತ್ತಿದ್ದ ಈ ಖದೀಮರು ಇದೀಗ ಸಿಸಿಬಿ ಪೆÇಲೀಸರ ಬಲೆಗೆ ಬಿದ್ದಿದ್ದಾರೆ. ಆರ್‍ಟಿಒ ಕಚೇರಿಯಲ್ಲಿ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಕೆಪಿ …

Read More »

ಕುವೈತ್‍ನಿಂದ ಬೆಂಗಳೂರಿಗೆ ಬಂದಿಳಿದ 80 ಪ್ರಯಾಣಿಕರು………….

ಬೆಂಗಳೂರು, ಜೂ.3- ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಕುವೈತ್ ನಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 25ನೇ ಏರ್ ಇಂಡಿಯಾ ವಿಮಾನದಲ್ಲಿ 80 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 80 ಮಂದಿ ಪ್ರಯಾಣಿಕರಲ್ಲಿ 64 ಪುರುಷರು ಮತ್ತು 16 ಮಹಿಳೆಯರು ಇದ್ದಾರೆ. ಈ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾರಲ್ಲೂ ಕೊರೋನಾ …

Read More »

ಗೋವಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ತಗ್ಗು ಪ್ರದೇಶಗಳು ಜಲಾವೃತ..!

ಪಣಜಿ, ಜೂ.3-ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಆರ್ಭಟದಿಂದ ವಾಯುಭಾರ ಕುಸಿತವಾಗಿದ್ದು, ಗೋವಾದಲ್ಲಿ ಇಂದು ಮುಂಜಾನೆಯಿಂದಲೇ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ. ಗೋವಾ ಕರಾವಳಿ ಪ್ರದೇಶದ ಸಮುದ್ರ ಭಾಗವು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರರು ಸಾಗರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಪಷ್ಟ ಸೂಚನೆ ನೀಡಿದೆ.ಪ್ರಬಲ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದಾಗಿ ಗೋವಾದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ತೀವ್ರ ತೊಂದರೆಗೆ …

Read More »

ಜೂ.8ರಿಂದ ಬಿಬಿಎಂಪಿ ವ್ಯಾಪ್ತಿಯ ಮಳಿಗೆಗಳು ಓಪನ್………….

ಬೆಂಗಳೂರು, ಜೂ.2- ನಗರದಲ್ಲಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿಯು ಜೂ.8ರಿಂದ ಅನುಮತಿ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೇಯರ್ ಗೌತಮ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ಪ್ರಾರಂಭಿಸುವ ಕುರಿತು ಇಂದು ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾತನಾಡಿದ ಮೇಯರ್, ಈ ವಿಷಯ ಸ್ಪಷ್ಟಪಡಿಸಿದರು. ಕೆ.ಆರ್.ಮಾರುಕಟ್ಟೆಯಲ್ಲಿರುವ 2,000ಕ್ಕೂ ಹೆಚ್ಚು ಮಳಿಗೆಗಳು, ಫ್ರೇಜರ್ ಟೌನ್‍ನಲ್ಲಿರುವ 400 ಮಳಿಗೆಗಳನ್ನು ತೆರೆಯಲು ಅನುಮತಿ …

Read More »

15 ವರ್ಷಗಳ ಹಿಂದಿನ ತಂದೆಯ ಕೊಲೆ ರಹಸ್ಯ ಮಗಳಿಂದ ಬಯಲು_ ತಾಯಿ ಸೇರಿ ಐವರು ಅರೆಸ್ಟ್

ಕೊಪ್ಪಳ: 15 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಂಕರ್‍ಸಿಂಗ್ ಮೃತ ವ್ಯಕ್ತಿ. ಬಂಧಿತ ಆರೋಪಿಗಳನ್ನು ಗಂಗಾವತಿಯ ವಿರುಪಾಪೂರ ನಗರದ ಮೃತನ ಪತ್ನಿ ಲಕ್ಷ್ಮೀಸಿಂಗ್, ರಾಂಪೂರ ಪೇಟೆಯ ಅಮ್ಜದ್‍ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷಾ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ …

Read More »

ಎಣ್ಣೆಗಾಗಿ ಗೆಳೆಯನ ಹತ್ಯೆಗೆ ಯತ್ನಿಸಿದ್ದ ರೌಡಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್

ಬೆಂಗಳೂರು: ಎಣ್ಣೆಗಾಗಿ ಗೆಳೆಯನ ಹತ್ಯೆಗೆ ಯತ್ನಿಸಿದ್ದ ರೌಡಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್ ನಡೆಸಿದ್ದಾರೆ. ಮುನಿಕೃಷ್ಣ ಗುಂಡೇಟು ತಿಂದ ಆರೋಪಿ. ಅಮೃತಹಳ್ಳಿ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಅವರು ಫೈರಿಂಗ್ ನಡೆಸಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಕೊರೊನಾ ಲಾಕ್‍ಡೌನ್ ತೆರುವು ನಂತರ ಎಣ್ಣೆ ಅಂಗಡಿಗಳು ಓಪನ್ ಆಗಿದ್ದವು. ಈ ವೇಳೆ ಮದ್ಯದ ಕೊಡಲಿಲ್ಲ ಅಂತ ಮುನಿಕೃಷ್ಣ ಗೆಳೆಯನ ಜೊತೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಜಾಕು ಇರಿದು ಪರಾರಿಯಾಗಿದ್ದ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ …

Read More »

ಲಾಕ್‍ಡೌನ್ ಸಡಿಲಿಕೆ ಬಳಿಕ ಬೆಂಗಳೂರಿನ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ

ಬೆಂಗಳೂರು: ಲಾಕ್‍ಡೌನ್ ಸಡಿಲಿಕೆ ನಿಜಕ್ಕೂ ಬೆಂಗಳೂರಿಗೆ ಮಾರಕವಾಗ್ತಿದೆಯಾ ಅನ್ನೋ ಅನುಮಾನ ಮೂಡಿದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ಬೆಂಗಳೂರಿನ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಕಳೆದ ವಾರ 20-22 ರಷ್ಟಿದ್ದ ಸಂಖ್ಯೆ 39ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಬಿಬಿಎಂಪಿ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ 39 ಕಂಟೈನ್‍ಮೆಂಟ್ ಝೋನ್ ಗಳನ್ನು ಗುರುತಿಸಿದ್ದಾರೆ. ಗ್ರೀನ್ ಝೋನ್ ಏರಿಯಾಗಳಾದ ನಾಗರಬಾವಿಯ ಸೆಕೆಂಡ್ ಸ್ಟೇಜ್, ನಗರ್ ದ ಪೇಟೆ, ದಾಸಸರಹಳ್ಳಿಯ ಚಿಕ್ಕಲಸಂದ್ರ, …

Read More »

ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾಜ್ಯಕ್ಕೆ

ಮಡಿಕೇರಿ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಇನ್ನು ಮುಂಗಾರು ಚುರುಕುಗೊಳ್ಳಲಿದೆ. ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎನ್‍ಡಿಆರ್‍ಎಫ್ ತಂಡ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ತಂಡ ಆಗಮಿಸಿದ್ದು, 23 ಸಿಬ್ಬಂದಿಯನ್ನೊಳಗೊಂಡ ಬೆಟಾನಿಯನ್ ಮಡಿಕೇರಿಯ ಮೈತ್ರಿ ಹಾಲ್‍ನಲ್ಲಿ ವಾಸ್ತವ್ಯ ಹೂಡಿದೆ. ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆ ಈ …

Read More »