Breaking News

ಬೈಲ್ ಹೊಂಗಲ್

ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿರುವ ರಾಕ್ ಗಾರ್ಡನ್ ಲೋಕಾರ್ಪಣೆ ಮಲತಾಯಿ ಧೋರಣೆ

ಬೈಲಹೊಂಗಲ: ವೀರವನಿತೆ ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿರುವ ರಾಕ್ ಗಾರ್ಡನ್ ಯಾರಿಗೂ ಹೇಳದೆ ಉದ್ಘಾಟನೆ ಮಾಡಿ, ಶಾಸಕರು ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಅದ್ದೂರಿ ಕಾರ್ಯಕ್ರಮದೊಂದಿಗೆ ಮುಖ್ಯಮಂತ್ರಿಗಳನ್ನು ಕರೆಸಿ ರಾಕ್ ಗಾರ್ಡನ್ ಉದ್ಘಾಟಿಸಬೇಕು,  ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. ರಾಕ್ ಗಾರ್ಡನ್ ಉದ್ಘಾಟನೆ ವೇಳೆ ರಾಣಿ ಚನ್ನಮ್ಮಾಜಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಕನ್ನಡ, ರೈತ ಪರ ಸಂಘಟನೆ ಹಾಗೂ ಹಲವು ಸಂಘ ಸಂಸ್ಥೆಗಳು, …

Read More »

ಚನ್ನಮ್ಮ ಸಮಾಧಿ ಉದ್ಘಾಟನೆ ವಿವಾದ: ಮಾ.9ರಂದು ಬೈಲಹೊಂಗಲ ಬಂದ್

ಬೈಲಹೊಂಗಲ: ‘ವೀರರಾಣಿ ಕಿತ್ತೂರು ಚನ್ನಮ್ಮ ನವಿಕೃತ ಸಮಾಧಿ ಸ್ಥಳ ಹಾಗೂ ಉದ್ಯಾನವನ್ನು ಯಾರಿಗೂ ತಿಳಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವ ಶಾಸಕ ಮಹಾಂತೇಶ ಕೌಜಲಗಿ ಅವರ ನಡೆ ಖಂಡಿಸಿ ವಿವಿಧ ಕನ್ನಡಪರ ಸಂಘಟನೆ, ರೈತ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಡಿನ ಹಿರಿಯರು, ಮುಖಂಡರ ನೇತೃತ್ವದಲ್ಲಿ ಮಾ.9ರಂದು ಬೈಲಹೊಂಗಲ ಸಂಪೂರ್ಣ ಬಂದ್ ಕರೆ ನೀಡಲಾಗಿದೆ’ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. ನಗರದ ವಿದ್ಯಾನಗರದ ಅವರ ಗೃಹ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ …

Read More »

ಇತಿಹಾಸ ನೆನಪಿಸಿದ ಜಾನಪದ ಕಲಾಮೇಳ

ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ 2026ರ ಜಾನಪದ ಕಲಾವಾಹಿನಿಗೆ ಶನಿವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಶಾಸಕ ಮಹಾಂತೇಶ ಕೌಜಲಗಿ ಬೆಳವಡಿ ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ …

Read More »

ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಪತ್ತೆ ; ಹೆಚ್ಚಿದ ಅನುಮಾನ

ಬೈಲಹೊಂಗಲ:ತಾಲೂಕಿನ ನಯಾನಗರ ಸಮೀಪದ ಮಲಪ್ರಭಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ಮೂರು ದ್ವಿಚಕ್ರ ವಾಹನಗಳು ಪತ್ತೆಯಾಗಿರುವ ಘಟನೆ ಸಂಶಯಕ್ಕೆ ಕಾರಣವಾಗಿದೆ. ಯಾರೋ ದುಷ್ಕರ್ಮಿಗಳು ಮೂರು ಬೈಕ್‌ಗಳನ್ನು ತಂದು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಮಾಜಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಅವರ ಗೆಳೆಯರ ಬಳಗ ನದಿಗೆ ಇಳಿದು ಸುಮಾರು ಎರಡು ಗಂಟೆಗಳ …

Read More »

ಮಲ್ಲಮ್ಮಳ ಉತ್ಸವಕ್ಕೆ 75 ಲಕ್ಷ ರೂ.

ಬೈಲಹೊಂಗಲ: ಶಿವಾಜಿ ಮಹಾರಾಜರೊಂದಿಗೆ ಸಹೋದರತ್ವ ಬಾಂಧವ್ಯ ಬೆಸೆದು ಕನ್ನಡ, ಮರಾಠಿಗರ ಮಧ್ಯೆ ಸಮನ್ವಯತೆ ಹೊಂದಲು 16ನೇ ಶತಮಾನದಲ್ಲಿಯೇ ಕಾರಣೀಕರ್ತಳಾದ ವೀರವನಿತೆ ಬೆಳವಡಿ ಮಲ್ಲಮ್ಮಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರದಿಂದ 75 ಲ ರೂ. ಅನುದಾನ ಮಂಜೂರಾಗಿದೆ.ಇನ್ನು 25 ಲ ರೂ. ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳವಡಿ …

Read More »

ಬೈಲಹೊಂಗಲದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸುಮಾರು 5 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸ್ವಯಂಚಾಲಿತ ಚಲನಾ ಪರೀಕ್ಷಾ ಪಥವನ್ನು ಕರ್ನಾಟಕ ಸರ್ಕಾರದ ಮುಜರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಅವರ ಜೊತೆಗೂಡಿ ಉದ್ಘಾಟಿಸಲಾಯಿತು.

ಇಂದು ಬೈಲಹೊಂಗಲದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸುಮಾರು 5 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸ್ವಯಂಚಾಲಿತ ಚಲನಾ ಪರೀಕ್ಷಾ ಪಥವನ್ನು ಕರ್ನಾಟಕ ಸರ್ಕಾರದ ಮುಜರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಅವರ ಜೊತೆಗೂಡಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬೈಲಹೊಂಗಲ ಪುರಸಭೆಯ ಅಧ್ಯಕ್ಷರು ಮತ್ತು ಚುನಾಯಿತ ಪ್ರತಿನಿಧಿಗಳು, ಸಾರಿಗೆ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು ಪಟ್ಟಣದ ಗುರು ಹಿರಿಯರು ಉಪಸ್ಥಿತರಿದ್ದರು.

Read More »

ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು..

ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು…. ಬೈಲಹೊಂಗಲ ತಾಲೂಕಿನಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಗೋಕಾಕ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ 27 ಅಡಿವಪ್ಪ ಲಕ್ಷ್ಮಣ್ ಸಿಂತಮನಿ 28 ರಾಜು ಶೆಟ್ಟಿಪ್ಪ ನಾಯ್ಕ 26 ಸಿದ್ದಪ್ಪ ಶಿವಪ್ಪ ಚಿಕ್ಕೊಪ್ಪದವರ 20 ಪರಪ್ಪ ಬಸಪ್ಪ ಕಡ್ಲಿ 21 ಬಂಧಿತ ಆರೋಪಿಗಳು ಬಂದಿತ …

Read More »

ಬೈಲಹೊಂಗಲ ತಾ.ನವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನ….

ಬೈಲಹೊಂಗಲ ತಾ.ನವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನ…. 50 ವರ್ಷಗಳಿಂದ ಬಾಡದ ಹೂ…… ಭಕ್ತಾದಿಗಳಲ್ಲಿ ಮೂಡಿದ ವಿಸ್ಮಯ…… ಸಾಮಾನ್ಯವಾಗಿ ಹೂವುಗಳು ಎರಡು ಅಥವಾ ಮೂರು ದಿನಗಳಲ್ಲಿ ಬಾಡಿ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಸುಮಾರು ಐವತ್ತು ವರ್ಷಗಳ ಹಿಂದಿನ ಹೂವು ಬಾಡದಿರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿ ಪಡುವಂತಾಗಿದೆ. ಹೌದು ಇಂತಹ ವಿಸ್ಮಯ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ದೇವಸ್ಥಾನದಲ್ಲಿ ಕಂಡು ಬಂದಿದೆ. ಬಹಳ ಹಳೆಯದಾಗಿರುವ ದೇವಸ್ಥಾನವನ್ನು …

Read More »

ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು

ಬೈಲಹೊಂಗಲ : ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು ನಾಯಿ ಕಡಿದು ಆರು ತಿಂಗಳ ಬಳಿಕ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ತಿಗಡಿ ಗ್ರಾಮದಲ್ಲಿ ನಡೆದಿದೆ ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ ಎಂಬ ವ್ಯಕ್ತಿ ಮನೆಯಲ್ಲಿ ಸಾಕಿದ್ದ ನಾಯಿಗೆ ಹುಚ್ಚುನಾಯಿಯೊಂದು ಕಚ್ಚಿತ್ತು . ನಂತರ ಆ ಸಾಕು ನಾಯಿಯು ಶಿವಶಂಕರ ಅವರನ್ನು ಕಚ್ಚಿತ್ತು ಚಿಕಿತ್ಸೆ ಪಡೆದುಕೊಳ್ಳದೆ ಅವರು ನಿರ್ಲಕ್ಷ ತೋರಿದ್ದರು. ಆರು ತಿಂಗಳ ನಂತರ …

Read More »

ಬೈಲಹೊಂಗಲ | ಬೆಂಕಿ ಅವಘಡ: ಸುಟ್ಟು ಕರಕಲಾದ ಬಣವೆ

ಬೈಲಹೊಂಗಲ: ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸೋಯಾಬೀನ್ ಕಾಳಿನ ಬಣವೆ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ದೊಡವಾಡ ಗ್ರಾಮದ ಬುಧವಾರ ತಡರಾತ್ರಿ ಸಂಭವಿಸಿದೆ. ರೈತ ಸಿದ್ದಪ್ಪ ವೀರಭದ್ರಪ್ಪ ಹುದಲಿ ಅವರಿಗೆ ಸೇರಿದ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಬೈಲಹೊಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು.   ’11 ಎಕರೆಯಲ್ಲಿ ಬೆಳೆದಿದ್ದ ಸೋಯಾಬೀನ್‌ ಕಾಯಿಗಳನ್ನು ಒಂದೆಡೆ ರಾಶಿ ಮಾಡಿ ಇಟ್ಟಿದ್ದೆವು. ಇದರಿಂದ ಸುಮಾರು ₹5 ಲಕ್ಷ ಕೈಗೆಟುಕಬಹುದು ಎಂದು ಅಂದಾಜಿಸಿದ್ದೆವು. ಆದರೆ, …

Read More »