Breaking News
Home / ಜಿಲ್ಲೆ / ಬಿಜಾಪುರ (page 5)

ಬಿಜಾಪುರ

ವಿಜಯಪುರ ಮಹಾನಗರ ‌ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರು ಮಹತ್ವದ ಸಭೆ

ವಿಜಯಪುರ ಮಹಾನಗರ ‌ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರು ಮಹತ್ವದ ಸಭೆ ನಡೆಸಿದರು. ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್. ಪಾಟೀಲ ಕೂಚಬಾಳ್ ನೇತೃತ್ವದಲ್ಲಿ ಸಭೆ ನಡೆಯಿತು. ಇನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಪಿ. ರಾಜೀವ ಮಹತ್ವದ ಸಭೆ ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೇ, ಪಕ್ಷದ ಪದಾಧಿಕಾರಿಗಳು ಹಾಗೂ ಕೆಲವೇ ಕೆಲವು ಮುಖಂಡರು ಮಾತ್ರ ಭಾಗವಹಿಸಿದರು.

Read More »

ಬಸ್ ನಲ್ಲಿ ಪ್ರಾರಂಭವಾದ ಲವ್ ಕೊಲೆಯಲ್ಲಿ ಅಂತ್ಯ

ವಿಜಯಪುರದಲ್ಲೊಂದು ಬಸ್ ನಲ್ಲಿ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜರುಗಿದೆ‌. ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿದ್ದಾರೆ‌. ಪ್ರಿಯತಮನಿಗೋಸ್ಕರ ಪ್ರಿಯತಮೆ‌ ವಿಷ ಕುಡಿದರೆ ಇತ್ತ ತನ್ನ ಮಗಳ ಸಾವಿಗೆ ಕಾರಣನಾದ ಎಂದು ಯುವತಿಯ ಪ್ರೇಮಿಯನ್ನು ತಂದೆ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ. ಸೆಪ್ಟೆಂಬರ್ 22ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ‌. ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತ ಯುವತಿ ಹಾಗೂ ಘೊಣಸಗಿಯ …

Read More »

ಬೈಕ್ ಗೆ ಸರಕಾರಿ ಬಸ್ ಡಿಕ್ಕಿ ಮಹಿಳೆ ಸಾವು

ವಿಜಯಪುರ…  ಬೈಕ್‌‌ಗೆ ಸರ್ಕಾರಿ ಬಸ್ ಹಿಂಬದಿಯಿಂದ ಡಿಕ್ಕಿ, ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಯಕ್ಕುಂಡಿ ರಸ್ತೆಯಲ್ಲಿ ನಡೆದಿದೆ.   ಮುತ್ತವ್ವ ಗಸ್ತಿ ಮೃತಪಟ್ಟಿರುವ ಮಹಿಳೆಯಾಗಿದ್ದು ಅಪಘಾತದ ಬಳಿಕ ಬಸ್ ಸ್ಥಳದಲ್ಲಿಯೇ ಬಿಟ್ಟು ಕಂಡಕ್ಟರ್, ಚಾಲಕ ಪರಾರಿಯಾಗಿದ್ದಾರೆ‌.   ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕಾಂಗ್ರೆಸ್ ಈ‌‌ ದೇಶಕ್ಕೆ ಒಂದು ಶಾಪ, ಇದನ್ನು ಬ್ಯಾನ್​ ಮಾಡಬೇಕು: ಬಸವಗೌಡ ಪಾಟೀಲ

ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕು. ಕಾಂಗ್ರೆಸ್ ಈ‌‌ ದೇಶಕ್ಕೆ ಒಂದು ಶಾಪವಾಗಿದೆ. ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್​ನನ್ನು ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ್​ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಬಾಗಲಕೋಟೆಯಲ್ಲಿ ಗುಡುಗಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪೂರ್ತಿ ಹತಾಶರಾಗಿದ್ದಾರೆ. ಹೀಗಾಗಿ ಆರ್​​ಎಸ್​ಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆರ್​​ಎಸ್​ಎಸ್​ ದೇಶಭಕ್ತ ಸಂಘಟನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. …

Read More »

ಕೋವಿಡ್ ನಂತರ ಬಲಿಷ್ಠ ಭಾರತ ನಿರ್ಮಾಣವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವಿಜಯಪುರ : ಕೋವಿಡ್ ನಂತರದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ, ವಿಶೇಷ ಗುರುತಿಸುವಿಕೆ ಆರಂಭಗೊಂಡಿದೆ. 21ನೇ ಶತಮಾನದಲ್ಲಿ ಬಲಿಷ್ಠ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ನನಸಾಗಿದೆ. ಯುಎನ್ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಾತಿನಿಧ್ಯವಿಲ್ಲದೇ ಯಾವ ಸಭೆಗಳೂ ನಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಭಾರತ ವಿಶ್ವಕ್ಕೆ ಅನಿವಾರ್ಯ ಎನಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಶುಕ್ರವಾರ ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ …

Read More »

ವಿಜಯಪುರ: ಮಕ್ಕಳ ಕಳ್ಳರ ವದಂತಿ; ಮಹಿಳೆಯರು ಸೇರಿ ನಾಲ್ವರಿಗೆ ಸಾರ್ವಜನಿಕರಿಂದ ಥಳಿತ

ವಿಜಯಪುರ: ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿಯ ವದಂತಿ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹಿಡಿದ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದಲ್ಲಿ ನಡೆದಿದೆ.   ನಗರದ ಗ್ಯಾಂಗ್ ಬಾವಡಿ ಪರಿಸರದಲ್ಲಿ ಅಪರಿಚಿತ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಉತ್ತರ ಭಾರತದ ಶೈಲಿಯಲ್ಲಿ ಮಾತನಾಡಿದ್ದು, ಅನುಮಾನದ ಬಂದ ಸ್ಥಳೀಯರು, ಮಕ್ಕಳ ಕಳ್ಳರೆಂದು ಶಂಕಿಸಿ, ಸಾರ್ವಜನಿಕರ ಸಹಕಾರದಿಂದ ನಾಲ್ವರನ್ನೂ ಹಿಡಿದು ಥಳಿಸಿದ್ದಾರೆ. ನಗರಕ್ಕೆ ಉತ್ತರ ಭಾರತದಿಂದ …

Read More »

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿ ಪೊಲೀಸ್​​ ವಶಕ್ಕೆ

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನು ಯುವಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ಹೋಂ ಗಾರ್ಡ್ ಶಾಂತೇಶ್ ಕೊರ್ತಿ ಎಂಬಾತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. ಹಣ ನೀಡುವುದಾಗಿ ಕರೆಸಿದ ಯುವಕರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀಕಾಂತ್​ ಎಂಬುವವರ ಬಳಿ ಹಣ ಪಡೆಯಲು ಶಾಂತೇಶ್ ಕೊರ್ತಿ ಬಂದಿದ್ದ. …

Read More »

ಶಿಕ್ಷಕರ ಅಕ್ರಮ ನೇಮಕಾತಿ: ಮತ್ತೊಬ್ಬ ಶಿಕ್ಷಕನ ಬಂಧನ  

ವಿಜಯಪುರ: ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಕೈಚಳಕ ತೋರಿದ ವಿಜಯಪುರ ಜಿಲ್ಲೆಯ ಶಿಕ್ಷಕರನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡವುತ್ತಿದ್ದಾರೆ. ಇದೀಗ ಮತ್ತೂಬ್ಬ ಶಿಕ್ಷಕ ಅಶೋಕ ಚವ್ಹಾಣ ಎಂಬಾತನನ್ನು ಬಂಧಿ ಸಿ ವಿಚಾರಣೆ ನಡೆಸಿದ್ದಾರೆ. ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ನಂಟು ಗಾಢವಾಗಿರುವುದು ಶಿಕ್ಷಕರ ಸರಣಿ ಬಂಧನ ಇಂಬು ನೀಡುತ್ತಿದೆ. ವಿಜಯಪುರ ಜಿಲ್ಲೆ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿ ಸೇವೆ …

Read More »

ವಿಜಯಪುರ: ಭಕ್ತರ ಭಾರ ತಾಳಲಾರದೇ ನೆಲಕ್ಕುರುಳಿದ ಗಣೇಶ ಮಂಟಪ: ಹಲವರಿಗೆ ಗಾಯ

ವಿಜಯಪುರ: ಗಣಪತಿ ದರ್ಶನಕ್ಕೆಂದು ಹರಿದುಬಂದ ಭಕ್ತರ ಭಾರ ತಾಳಲಾರದೇ ಸಾರ್ವಜನಿಕ ಗಣೇಶ ಮಂಟಪವೊಂದು ಕುಸಿದು ಬಿದ್ದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಗೋಪುರ ಆಕಾರ ಹಾಗೂ ಸ್ವರ್ಣ ವರ್ಣದ ದೇವಾಲಯದ ಮಾದರಿಯಲ್ಲಿ ಈ ಗಣೇಶ ಮಂಟಪವನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಜನ ಸಾಗರವೇ ಹರಿದುಬಂದ ಪರಿಣಾಮ ಭಾರ ತಾಳದೇ ನೆಲಕ್ಕುರುಳಿದೆ. ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಘಟನೆ …

Read More »

ಟಿಪ್ಪುನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗೆ ಈ ಗತಿ ಬಂದಿದೆ: ಯತ್ನಾಳ್

ವಿಜಯಪುರ, ಸೆಪ್ಟೆಂಬರ್ 3: ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಮೇಲೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವ ಮೇಲೆ ಶಿವಮೂರ್ತಿ ಮುರುಘಾ ಶರಣರು ಮತ್ತೆ ಮಠದ ಪೀಠಾಧಿಪತಿಯಾಗಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.   ಈ ಪ್ರಕರಣದ ಬಗ್ಗೆ ನಗರದಲ್ಲಿ ಮಾತನಾಡಿದ ಯತ್ನಾಳ್, “ದೇಶ ಹಾಳಾಗುವುದಕ್ಕೆ ಪ್ರಗತಿಪರರೇ ಕಾರಣ, ಇಂದು ಸ್ವಾಮೀಜಿಯ ಪರಿಸ್ಥಿತಿಗೂ ಅವರೇ ಕಾರಣ, ಮುರುಘಾ ಶರಣರು ಟಿಪ್ಪು ಸುಲ್ತಾನ ಫೋಟೋ ತೆಗೆದುಕೊಂಡು …

Read More »