Breaking News

ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲಿನ ಉಟದಲ್ಲಿ ಬೋಲ್ಟ್ ಪತ್ತೆ

Spread the love

ಬೆಳಗಾವಿ: ಐಷಾರಾಮಿ ರೈಲು ಎಂದೇ ಗುರುತಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆ ಎದ್ದಿದೆ. ರೈಲಿನಲ್ಲಿ ಖರೀದಿಸಿದ ವಡಾದೊಳಗೆ ಬೋಲ್ಟ್ ಪತ್ತೆಯಾಗಿರುವ ಘಟನೆ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಿನ್ನೆ ಪ್ರಯಾಣಿಸುತ್ತಿದ್ದ ಸಮರ್ಥ ಕೋಡಿಯಾಳ ಎಂಬುವವರು ಉಪಾಹಾರಕ್ಕಾಗಿ ವಡಾ ಖರೀದಿಸಿದ್ದರು. ಆದರೆ, ಅದನ್ನು ತಿನ್ನುವ ಸಂದರ್ಭದಲ್ಲಿ ಒಳಭಾಗದಲ್ಲಿ ಬೋಲ್ಟ್ ಇರುವುದು ಕಂಡುಬಂದಿದೆ.

ಅನಿರೀಕ್ಷಿತವಾಗಿ ವಡಾದಲ್ಲಿ ಬೋಲ್ಟ್ ಪತ್ತೆಯಾಗಿದ್ದರಿಂದ ಆಘಾತಕ್ಕೊಳಗಾದ ಸಮರ್ಥ ಕೋಡಿಯಾಳ ಅವರು ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ರೈಲ್ವೆ ಆಹಾರ ಸೇವೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಿಗೆ ಪೂರೈಸುವ ಆಹಾರದ ತಯಾರಿಕೆ, ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸುರಕ್ಷಿತ ಹಾಗೂ ಗುಣಮಟ್ಟದ ಪ್ರಯಾಣದ ಭರವಸೆ ನೀಡುವ ವಂದೇ ಭಾರತ್ ರೈಲಿನಲ್ಲೇ ಇಂತಹ ಘಟನೆ ನಡೆದಿರುವುದು ರೈಲ್ವೆ ಆಹಾರ ಸೇವೆಯ ನಿರ್ವಹಣೆಯ ಬಗ್ಗೆ ಅನುಮಾನ ಮೂಡಿಸಿದೆ. ಈ ಘಟನೆಗೆ ರೈಲ್ವೆ ಇಲಾಖೆ ಯಾವ ರೀತಿ ಸ್ಪಂದಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಪಾರ್ಕ್ ಜಾಗವನ್ನೇ ಸೈಟ್‌ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದ ಪಿಡಿಒ ಸಸ್ಪೆಂಡ್‌!

Spread the loveಚಿಕ್ಕಬಳ್ಳಾಪುರ: ಪಾರ್ಕ್ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ  ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ