Breaking News

ಮೋಡಿ ಲಿಪಿಯ ಅಪರೂಪದ ಐತಿಹಾಸಿಕ ದಾಖಲೆಗಳ ಸಂರಕ್ಷಣೆಗೆ ಗೋವಾ ಸರ್ಕಾರ–ಸಂಕೇಶ್ವರ ಮಠ ಒಪ್ಪಂದ

Spread the love

ಬೆಳಗಾವಿ: ಪ್ರಾಚೀನ ಮೋಡಿ ಲಿಪಿಯಲ್ಲಿರುವ ಅಮೂಲ್ಯ ಐತಿಹಾಸಿಕ ಹಸ್ತಪ್ರತಿಗಳು ಹಾಗೂ ದಾಖಲೆಗಳನ್ನು ಭಾಷಾಂತರಿಸಿ, ವೈಜ್ಞಾನಿಕವಾಗಿ ಸಂರಕ್ಷಿಸುವ ಮಹತ್ವದ ಕಾರ್ಯಕ್ಕೆ ಗೋವಾ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಮತ್ತು ಸಂಕೇಶ್ವರದ ಶಂಕರಾಚಾರ್ಯ ಸಂಸ್ಥಾನ ಮಠದ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.

ಗೋವಾ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಸಂಕೇಶ್ವರ ಶ್ರೀಮಠದ ಪೀಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಶ್ರೀಮಠಕ್ಕೆ ಸಂಬಂಧಿಸಿದಂತೆ ಮೋಡಿ ಲಿಪಿಯಲ್ಲಿ ದಾಖಲಾಗಿರುವ ಅಪಾರ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಾಹಿತಿಯನ್ನು ಭಾಷಾಂತರಿಸಿ ಜನರಿಗೆ ತಲುಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಇದುವರೆಗೆ ಬೆಳಕಿಗೆ ಬಾರದ ಅನೇಕ ಐತಿಹಾಸಿಕ ಸಂಗತಿಗಳು ಸಂಶೋಧಕರಿಗೆ ಲಭ್ಯವಾಗಲಿದ್ದು, ಮುಂದಿನ ಪೀಳಿಗೆಗೂ ಈ ಅಮೂಲ್ಯ ಪರಂಪರೆಯನ್ನು ಪರಿಚಯಿಸಲು ಸಾಧ್ಯವಾಗಲಿದೆ.

ಅಲ್ಲದೆ, ಕಾಲದ ಪ್ರಭಾವದಿಂದ ಹಾಳಾಗುವ ಸಾಧ್ಯತೆಯಿರುವ ಅಪರೂಪದ ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ವೈಜ್ಞಾನಿಕ ವಿಧಾನದಲ್ಲಿ ಸಂರಕ್ಷಿಸಲು ಈ ಯೋಜನೆ ನೆರವಾಗಲಿದೆ. ಇತಿಹಾಸ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯ ಅಧ್ಯಯನಕ್ಕೆ ಈ ಒಪ್ಪಂದ ಹೊಸ ಅವಕಾಶಗಳನ್ನು ಕಲ್ಪಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಶಂಕರ ಭಾರತಿ ಸ್ವಾಮೀಜಿ, ಗೋವಾ ಸಚಿವಾಲಯದ ಹಿರಿಯ ಅಧಿಕಾರಿಗಳು, ನಾರು ವಡೇರ, ಗಜಾನನ ಪಾಟೀಲ, ಸಂಜಯ ಜರಳಿ, ಸಂಜು ಶಿಂಧೆ, ಗೋಪಾಲ ಕುಲಕರ್ಣಿ, ಸುಹಾಸ ಕುಲಕರ್ಣಿ, ಅಥರ್ವ ಪನಶೀಕರ ಸೇರಿದಂತೆ ಮಠದ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಪಾರ್ಕ್ ಜಾಗವನ್ನೇ ಸೈಟ್‌ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದ ಪಿಡಿಒ ಸಸ್ಪೆಂಡ್‌!

Spread the loveಚಿಕ್ಕಬಳ್ಳಾಪುರ: ಪಾರ್ಕ್ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ  ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ