Breaking News

ಗೂಡ್ಸ್ ವಾಹನ, ಬೈಕ್ ಮಧ್ಯೆ ಭೀಕರ ಅಪಘಾತ; ತಂದೆ – ಮಗಳು ದುರ್ಮರಣ

Spread the love

ದಾವಣಗೆರೆ: ಗೂಡ್ಸ್ ವಾಹನ ಹಾಗೂ ಬೈಕ್  ನಡುವೆ ಡಿಕ್ಕಿ ಸಂಭವಿಸಿ 3 ವರ್ಷದ ಮಗಳ ಜೊತೆ ತಂದೆ ಮೃತಪಟ್ಟ ಘಟನೆ ದಾವಣಗೆರೆ  ಜಿಲ್ಲೆಯ ಹರಿಹರ  ತಾಲೂಕಿನ ದೀಟೂರು ಗ್ರಾಮದ ಗಂಗನರಸಿ ಕ್ರಾಸ್ ಬಳಿ ನಡೆದಿದೆ.

ಹರಿಹರ ನಗರದ ಆಶ್ರಯ ಕಾಲೊನಿ ನಿವಾಸಿ, ಟ್ಯಾಕ್ಸಿ ಚಾಲಕ ಮನೋಜ್ (35) ಮತ್ತು ಅವರ ಪುತ್ರಿ ಧೃತಿ (3) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಮನೋಜ್ ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹೆಚ್ ಕಲ್ಪನಹಳ್ಳಿಯಲ್ಲಿ ಹಬ್ಬ ಮುಗಿಸಿಕೊಂಡು ಬೈಕ್‌ನಲ್ಲಿ ಹರಿಹರಕ್ಕೆ ವಾಪಸಾಗುತ್ತಿದ್ದರು. ಗಂಗನರಸಿ ದೀಟೂರು ರಸ್ತೆಯ ಕ್ರಾಸ್ ಬಳಿ ಎದುರಿನಿಂದ ಬಂದ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ಐವರೂ ಗಾಯಗೊಂಡಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ಹಾಗೂ ಧೃತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನದ ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

Spread the love ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ