Enಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಆರಂಭಿಸಲಾಗಿರುವ ಕೋವಿಡ್ -19 (ಕೊರೋನಾ) ವಾರ್ ರೂಂ ಇಂದು ಉದ್ಘಾಟನೆಯಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಧ್ಯಾಹ್ನ 12.30ಕ್ಕೆ ವಾರ್ ರೂಂ ಉದ್ಘಾಟಿಸುವರು.
ಕೊರೋನಾಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು, ವಿವರಗಳು ಈ ವಾರ್ ರೂಂ ನಲ್ಲಿ ಲಭ್ಯವಾಗಲಿದೆ. ಇಡೀ ನಗರದ ಪರಿಸ್ಥಿತಿಯ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತದೆ. ಇದಕ್ಕಾಗಿ 14 ಡ್ರೋಣ್ ಕ್ಯಾಮೆರಾ ನೆರವು ಪಡೆಯಲಾಗುತ್ತಿದೆ