Breaking News

ಮಂಗಳಸೂತ್ರ ದೋಚಲು ಯತ್ನ,ಇಬ್ಬರು ಸರಗಳ್ಳರ ಅರೆಸ್ಟ್…

Spread the love

ಬೆಳಗಾವಿ- ಮಹಿಳೆಯೊಬ್ಬಳ ಮಂಗಳಸೂತ್ರ ದೋಚುವ ವಿಫಲ ಪ್ರಯತ್ನ ನಡೆಸಿ ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಕೇವಲ ನಾಲ್ಕು ತಾಸುಗಳಲ್ಲಿ ಪತ್ತೆ ಮಾಡಿ ಅವರನ್ನು ಬಂಧಿಸುವಲ್ಲಿ ಬೆಳಗಾವಿಯ ಕ್ಯಾಂಪ್ ಪೋಲೀಸರು ಯಶಸ್ವಿಯಾಗಿದ್ದಾರೆ

ನಿನ್ನೆ ಸಂಜೆ ಗಣೇಶಪೂರದ ಡಿಫೆನ್ಸ ಕಾಲೋನಿ ಬಳಿ ರಾಜಶ್ರೀ ಏಕನಾಥ ಪಾಟೀಲ ಎಂಬ ಮಹಿಳೆಯ 50 ಗ್ರಾಮ ತೂಕದ ಮಂಗಳಸೂತ್ರ ದೋಚುವ ಪ್ರಯತ್ನ ಮಾಡಿದ್ದರು ರಾಜಶ್ರೀ ಪಾಟೀಲ ಇದಕ್ಕೆ ತೀವ್ರ ವಿರೋಧ ವ್ಯೆಕ್ತ ಪಡಿಸಿ ಸರಗಳ್ಳರಿಂದ ಬಚಾವ್ ಆಗಿದ್ದರು

ಪ್ರಕರಣ ದಾಖಲಿಸಿಕೊಂಡ ಕ್ಯಾಂಪ್ ಪೋಲೀಸರು ಕೇವಲ ನಾಲ್ಕು ತಾಸುಗಳಲ್ಲಿ ಇಬ್ಬರು ಸರಗಳ್ಳರನ್ನು ಪತ್ತೆ ಮಾಡಿದ್ದಾರೆ

ಆರೋಪಿಗಳಾದ ಮಚ್ಛೆ ಗ್ರಾಮದ 19 ವರ್ಷದ ಅಲ್ತಮಷ ಅಯೂಬಖಾನ್ ಪಠಾನ್,ಪ್ರಸಾದ ಚಿಟ್ಟಿಬಾಬು ಪರಸಬೋಬು ಎಂಬಾತರನ್ನು ಬಂಧಿಸಲಾಗಿದೆ ‌

ಸರಗಳ್ಳ ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸಿ ಕ್ಯಾಂಪ್ ಪೋಲೀಸರ ಶ್ರಮ ಪ್ರಶಂಸನೀಯ


Spread the love

About Laxminews 24x7

Check Also

ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ:ಸತೀಶ್‌ ಜಾರಕಿಹೊಳಿ

Spread the love ಹುಕ್ಕೇರಿ: ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ