Home / ಜಿಲ್ಲೆ / ಬಿಬಿಎಂಪಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ, ಇಲ್ಲಿದೆ ಹೈಲೈಟ್ಸ್

ಬಿಬಿಎಂಪಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ, ಇಲ್ಲಿದೆ ಹೈಲೈಟ್ಸ್

Spread the love

ಬೆಂಗಳೂರು, ಏ.20- ಬಿ ಖಾತಾ ಆಸ್ತಿಗಳನ್ನು ಎ ಖಾತಾಗಳಾಗಿ ಪರಿವರ್ತಿಸುವುದು, ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾ ನಕಲು ಮತ್ತು ಖಾತಾ ದೃಢೀಕರಣ ಪತ್ರಗಳ ಗಣಕೀಕರಣ, ಶುಲ್ಕ ದ್ವಿಗುಣ, ಉದ್ಯಮ ಪರವಾನಗಿ ವ್ಯವಸ್ಥೆ ಸರಳೀಕರಣ, ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ಹೊಸದಾಗಿ ಶಾಲೆ ನಿರ್ಮಾಣ, ಸ್ಮಾರ್ಟ್ ಶಿಕ್ಷಣ ವ್ಯವಸ್ಥೆ, ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹಲವು ಕಾರ್ಯಕ್ರಮಗಳು ಸೇರಿದಂತೆ ಬಿಬಿಎಂಪಿ 2020-21ನೆ ಸಾಲಿನ 10,899.23 ಕೋಟಿ ಆಯವ್ಯಯವನ್ನು ಇಂದು ಮಂಡಿಸಿತು.

ಮೇಯರ್ ಗೌತಮ್‍ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು ಬಜೆಟ್ ಮಂಡನೆ ಮಾಡಿದರು.ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಾಲಿಕೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಲಾಯಿತು. ಬಜೆಟ್ ಬಿಡುಗಡೆ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು

ಬಜೆಟ್ ಮಂಡಿಸಿದ ಎಲ್.ಶ್ರೀನಿವಾಸ್ ಅವರು ರಾಜ್ಯ ಸರ್ಕಾರದಿಂದ 3780.99 ಕೋಟಿ ಅನುದಾನ, ಕೇಂದ್ರ ಸರ್ಕಾರದಿಂದ 558 ಕೋಟಿ ರೂ.ಗಳ ಅನುದಾನ ದೊರೆಯಲಿದೆ ಎಂದು ತಿಳಿಸಿದರು.ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ವೃಂದದ 938 ಹುದ್ದೆಗಳನ್ನು ನೇಮಕ ಮಾಡಲಾಗುವುದು.

ಪಾಲಿಕೆಯ ಖಾಯಂ ಹಾಗೂ ನಿವೃತ್ತ ಅಧಿಕಾರಿಗಳ ಕುಟುಂಬದವರ ಆರೋಗ್ಯ ರಕ್ಷಣೆಗೆ ಆರೋಗ್ಯ ವಿಮೆ ಜಾರಿಗೆ ತರಲಾಗುವುದು. ಬಿ ವಲಯ ಆಸ್ತಿಗಳನ್ನು ಎ ಖಾತಾಗಳಾಗಿ ಪರಿವರ್ತನೆಗೆ ಸರ್ಕಾರದ ಅನುಮೋದನೆ ನಿರೀಕ್ಷೆ ಮಾಡಲಾಗಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು 49.50 ಕೋಟಿ ಅನುದಾನ ಮೀಸಲಿರಿಸುವುದಾಗಿ ತಿಳಿಸಿದರು.

ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು 300 ಕೋಟಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು. ಉದ್ಯಮ ಪರವಾನಗಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು ಎಂದು ಹೇಳಿದರು. ಶೇ.24.10 ಅನುದಾನದ ಕಾರ್ಯಕ್ರಮಗಳಿಗೆ 361.34 ಕೋಟಿ ಮೀಸಲಿರಿಸಲಾಗಿದೆ.

ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ 108.42 ಕೋಟಿ, ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ 9.90, ವಿಶೇಷ ಚೇತನ ಕಾರ್ಯಕ್ರಮಗಳಿಗೆ 74.90 ಕೋಟಿ ಮೀಸಲಿಡಲಾಗಿದೆ.

10 ಸಾವಿರ ಲೀಟರ್‍ವರೆಗೆ ಉಚಿತ ಕಾವೇರಿ ನೀರು ಒದಗಿಸುವ ಕಾರ್ಯಕ್ರಮಕ್ಕೆ 43 ಕೋಟಿ ರೂ. ಒದಗಿಸಲಾಗಿದೆ. ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 1.5 ಕೋಟಿ, ಹಿರಿಯ ನಾಗರಿಕರ ಕಲ್ಯಾಣಕ್ಕೆ 5 ಕೋಟಿ, ಅನಂತಕುಮಾರ್ ಅವರ ಅರ್ಹ ಬಡ ವಿದ್ಯಾರ್ಥಿಗಳ ಲ್ಯಾಪ್‍ಟಾಪ್ ವಿತರಣೆಗೆ 15 ಕೋಟಿ, ನಿರಾಶ್ರಿತರ ತಂಗುದಾಣಕ್ಕೆ 5 ಕೋಟಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪತ್ರಕರ್ತರ ಅಪಘಾತ ವಿಮೆ ಜಾರಿಗೆ 15 ಲಕ್ಷ ಅನುದಾನ, ಕನ್ನಡ ಪತ್ರಿಕೋದ್ಯಮ ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿ ವಾರ್ಡ್‍ಗಳಲ್ಲಿ ಪತ್ರಿಕಾ ಮಾರಾಟ ಮಳಿಗೆ ಸ್ಥಾಪಿಸಲು 1 ಕೋಟಿ, ದಿನಪತ್ರಿಕೆ ಮತ್ತು ಹಾಲು ಮಾರಾಟ ಮಾಡುವವರಿಗೆ ಗುಂಪು ಆರೋಗ್ಯ ವಿಮೆಗೆ 70 ಲಕ್ಷ ಅನುದಾನ ಮೀಸಲಿರಿಸಲಾಗಿದೆ ಎಂದು ಹೇಳಿದರು.

ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್ ಶಿಕ್ಷಣ ಪ್ರಾರಂಭಿಸಲು 7 ಕೋಟಿ, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಹೊಸದಾಗಿ ಶಾಲೆ ನಿರ್ಮಿಸಲು 10 ಕೋಟಿ, ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಬಸ್ ಪಾಸ್ ಒದಗಿಸಲು 75 ಲಕ್ಷ ರೂ., ಪ್ರತಿ ವಾರ್ಡ್‍ಗೆ 50 ಟೈಲರಿಂಗ್ ಮೆಷಿನ್ ಒದಗಿಸಲು 4 ಕೋಟಿ ರೂ., ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ 1.97 ಕೋಟಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಸಿಸಿ ಕ್ಯಾಮೆರಾ ಅಳವಡಿಕೆಗೆ 5 ಕೋಟಿ, ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ 2 ಕೋಟಿ, ಸಮವಸ್ತ್ರ ವಿತರಣೆಗೆ 30 ಲಕ್ಷ ರೂ. ಮೀಸಲಿರಿಸಲಾಗಿದೆ. ಜನನ-ಮರಣ ಪತ್ರಗಳನ್ನು ಉಚಿತವಾಗಿ ನೀಡುವುದು, ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 20 ಕೋಟಿ ರೂ., ಉಚಿತ ಡಯಾಲಿಸಿಸ್ ಸೇವೆ, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ 16 ಕೋಟಿ ಮೀಸಲು, ಘನತ್ಯಾಜ್ಯ ಘಟಕಗಳ ಸುತ್ತಮುತ್ತಲ ಅಭಿವೃದ್ಧಿಗೆ 75 ಕೋಟಿ ಮೀಸಲಿರಿಸುವುದಾಗಿ ಹೇಳಿದರು.

ಪಾಲಿಕೆ ಆಸ್ತಿ ರಕ್ಷಣೆಗೆ ತಂತಿಬೇಲಿ ಅಳವಡಿಕೆಗೆ 20 ಕೋಟಿ, 8 ವಾಟರ್‍ಟ್ಯಾಂಕ್‍ಗಳ ಖರೀದಿಗೆ 1.5 ಕೋಟಿ ಅನುದಾನ ಮೀಸಲು, ಹೊಸ ವಲಯಗಳಲ್ಲಿ ಉದ್ಯಾನವನಗಳ ಅಭಿವೃದ್ದಿಗೆ 10 ಕೋಟಿ ಅನುದಾನ, ಪಾಲಿಕೆಯ ಸ್ಮಶಾನಗಳನ್ನು ಸೌಂದರ್ಯೀಕರಣಗೊಳಿಸಲು 3 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.

ನಗರ ಪ್ರವೇಶಿಸುವ ಎಂಟು ಮಾರ್ಗಗಳಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲು 10 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಪಾಲಿಕೆ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜುಗಳ ಮುಂದೆ ಡಿಜಿಟಲ್ ಡಿಸ್‍ಪ್ಲೇ, ನಾಮಫಲಕ ಅಳವಡಿಕೆಗೆ 5 ಕೋಟಿ ರೂ., ವಾಹನ ಚಾಲಕರ ವಾಸಕ್ಕಾಗಿ ಪಾಲಿಕೆಯ ವಸತಿ ಗೃಹ ನಿರ್ಮಾಣಕ್ಕೆ 5 ಕೋಟಿ , ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಹೊಟೇಲ್ ಕಟ್ಟಡ ನಿರ್ಮಾಣಕ್ಕೆ 2 ಕೋಟಿ, ದೋಭಿಘಾಟ್‍ಗಳಲ್ಲಿ ವಾಷಿಂಗ್‍ಮೆಷಿನ್ ಒದಗಿಸಲು 3 ಕೋಟಿ, ಹೊಸ ವಲಯದ 110 ಹಳ್ಳಿ ಪ್ರದೇಶಗಳಲ್ಲಿ ಹೊಸದಾಗಿ ವಿದ್ಯುತ್ ಫಿಟಿಂಗ್‍ಗಳನ್ನು ಅಳವಡಿಸಲು 10 ಕೋಟಿ, ಸಿಸಿ ಕ್ಯಾಮೆರಾ ಅಳವಡಿಕೆಗೆ 10 ಕೋಟಿ, ಅಪಾಯಕಾರಿ ಸ್ಥಳಗಳಲ್ಲಿ ಮಳೆ ನೀರುಕಾಲುವೆಗಳಿಗೆ ತಂತಿಬೇಲಿ ಅಳವಡಿಕೆಗೆ 10 ಕೋಟಿ ಅನುದಾನ ನಿಗದಿ ಮಾಡಲಾಗಿದೆ.

ಪಿಪಿಎ ಯೋಜನೆಯಡಿ ಸರ್.ಎಂ.ವಿಶ್ವೇಶ್ವರಯ್ಯ ಹೆಸರಿನಲ್ಲಿ ಪಾಲಿಕೆಯ ಆಯ್ದ ಕಡೆಗಳಲ್ಲಿ ಬಹುವಾಹನ ನಿಲ್ದಾಣ ನಿರ್ಮಾಣ, ವೃತ್ತ ಮತ್ತು ಜಂಕ್ಷನ್‍ಗಳ ಉನ್ನತೀಕರಣಕ್ಕೆ 40 ಕೋಟಿ, ರಸ್ತೆ ಮೇಲ್ಸೇತುವೆ, ಕೆಳಸೇತುವೆ ದುರಸ್ತಿಗೆ 40 ಕೋಟಿ, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗೆ 105 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.

ಸಚಿವರಾದ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಆಡಳಿತ ಮತ್ತು ವಿಪಕ್ಷ ನಾಯಕರು ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು, ಹಲವು ಶಾಸಕರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ಇನ್ನುಳಿದಂತೆ ಪಾಲಿಕೆ ಸದಸ್ಯರು ಹಾಗೂ ಜಂಟಿ ಆಯುಕ್ತರು, ವಲಯ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ವೀಕ್ಷಣೆ ಮಾಡಿದರು.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ