Breaking News

25 ಕುಟುಂಬಗಳಿಗೆ ಅಕ್ಕಿ,ತೊಗರೆ ಬೇಳೆ,ಎಣ್ಣೆ,ಬಟ್ಟೆ ತೊಳೆಯಲು ಹಾಗೂ ಸ್ನಾನದ ಸಾಬೂನು ,ಸಾಸಿವೆ ಜೀರಿಗೆನೀಡಿದ ಅಶೋಕ್ ಚಂದರಗಿ:

Spread the love

ಬೆಳಗಾವಿ:ಕೊರೋನಾ ಲಾಕ್ ಔಟ್ ನಿಂದಾಗಿ
ಉಂಟಾಗಿರುವ ಅನೇಕ ಸಮಸ್ಯೆಗಳಲ್ಲಿ ಇವರದೂ ಒಂದು.ಬೆಳಗಾವಿ,ಬಾಗಲಕೋಟೆ,
ವಿಜಯಪುರ ಜಿಲ್ಲೆಗಳ ಅನೇಕ ಲಂಬಾಣಿ ತಾಂಡಾಗಳಿಂದ ಬೆಳಗಾವಿಗೆ ದುಡಿಯಲು ಬಂದಿರುವ ನೂರಾರು ಪುರುಷರು,ಮಹಿಳೆಯರು,ಮಕ್ಕಳು ಎದುರಿಸುತ್ತಿರುವ ಸಮಸ್ಯೆಯತ್ತಲೂ ಸ್ವಲ್ಪ ಗಮನ ಹರಿಸಿದೆ .
ಶಾಹೂನಗರ,ಅಜಮ್ ನಗರ ಮತ್ತು ನೆಹರೂ ನಗರ,ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದು ಕಳೆದ 15 ದಿನಗಳಿಂದ ಕೆಲಸವಿಲ್ಲ.ಕೈಗೆ ಸಂಬಳವಿಲ್ಲ.ಮನೆ ನಡೆಸಲು ಕಾಳು,ಕಡಿ ಇಲ್ಲ.ನನ್ನನ್ನು ಮೂರ್ನಾಲ್ಕು ದಿನಗಳಿಂದ ಸಂಪರ್ಕಿಸಿದ ಸುಮಾರು 25 ಕುಟುಂಬಗಳಿಗೆ ಅಕ್ಕಿ,ತೊಗರೆ ಬೇಳೆ,ಎಣ್ಣೆ,ಬಟ್ಟೆ ತೊಳೆಯಲು ಹಾಗೂ ಸ್ನಾನದ ಸಾಬೂನು ,ಸಾಸಿವೆ ಜೀರಿಗೆ ಕೊಟ್ಟಿದ್ದೇನೆ.ಅವರ ಪ್ರಕಾರ 15 ದಿನಗಳವರೆಗೆ ಸಾಕಾಗಬಹುದು

.
ಬಿಪಿಎಲ್ ಕಾರ್ಡು ಹೊಂದಿದವರಿಗೆ ಸರಕಾರವೇ ಉಚಿತವಾಗಿ ಅಕ್ಕಿ ಅಥವಾ ಗೋಧಿ ಕೊಡಲಿದೆ.ಆದರೆ ನಾನು ಹಂಚಿದ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡುಗಳಿಲ್ಲ.ಅವರ ತಾಂಡಾಗಳಲ್ಲಿವೆ.ಇವರು ಅಲ್ಲಿಗೆ ಹೋಗುವ ಸ್ಥಿತಿ ಇಲ್ಲ.ಸವದತ್ತಿಯ ಹಂಚಿನಾಳ,ರಾಮದುರ್ಗದ ಕಲ್ಮಡ ಮತ್ತು ಆರಿಬೆಂಚಿ,ಬಾಗಲಕೋಟೆ ಯ ಶಿರೂರು ತಾಂಡಾ ಗಳಿಗೆ ಸೇರಿದ ಈ ಕುಟುಂಬಗಳು ತಮ್ಮ ಭವಿಷ್ಯದ ಬಗ್ಗೆ ಚಿಂತೆಗೀಡಾಗಿವೆ.
” ನೀವು ಕೊಟ್ಟಿದ್ದು 15 ದಿನಕ್ಕೆ ಸಾಕಾಗುತ್ತದೆ .ನೀವು ದೇವರು ಬಂದಾಂಗ ಬಂದ್ರಿ.ಮುಂದೇನು? ಎಂದು ಕೇಳಿದಳು ಮಹಿಳೆ ಗೀತಾ.
ಇಂದು ಬೆಳಗಾವಿ ಉತ್ತರ ಶಾಸಕ ಮಿತ್ರ ಶ್ರೀ ಅನೀಲ ಬೆನಕೆ ಅವರಿಗೆ ಫೋನ್ ಮಾಡಿ ತಿಳಿಸಿದೆ.ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಅವರು ಕಲ್ಯಾಣ ಮಂಟಪದಲ್ಲಿ ಅಡುಗೆ ತಯಾರಿಸಿ ಹಸಿದವರಿಗೆ ಊಟ ಹಾಕುತ್ತಿದ್ದಾರೆ ಎಂದು ಹೇಳಿದೆ.ತಾವೂ ಸಹ ಆಹಾರ ಪೊಟ್ಟಣ ತಯಾರಿಸಿ ಪೋಲೀಸರ ಮೂಲಕ ವಿತರಿಸಲು ಉದ್ದೇಶಿಸಿದ್ದಾಗಿ ಬೆನಕೆ ತಿಳಿಸಿದರು.( ಬೆನಕೆ ಅವರ ಮೊ:9448453733)
ಬೆಳಗಾವಿಯ ಕಿಲ್ಲಾ ಕೆರೆಯ ಬಳಿ ಬೀಸುಕಲ್ಲು,ಒರಳು ತಯಾರಿಸುವ ಕುಟುಂಬಗಳಿಗೆ ಎಂಠತ್ತು ದಿನಗಳ ಹಿಂದೆ ಹಂಚಿದ್ದೆ.ಕಳೆದ ಮೂರು ದಿನಗಳಿಂದ ತಾಂಡಾಗಳ ಮೂಲದ ಜನರಿಗೆ ಹಂಚಿ ಮುಗಿಸಿದ್ದೇನೆ.
ಹಗಲಿರುಳು ಲಾಕ್ ಔಟ್ ಬಂದೋಬಸ್ತಿಯಲ್ಲಿರುವ ಪೋಲೀಸರಿಗೆ ನೀರಿನ ಬಾಟಲ್ ಮತ್ತು ಪ್ರತಿಯೊಬ್ಬರಿಗೂ ಅರ್ಧ ಲೀಟರ್ ತಂಪು ಪಾನಿಯ ವಿತರಿಸುವ ವಿಚಾರ ನಡೆದಿದೆ.
ಮೂರು ದಿನಗಳಿಂದ ನನ್ನ ಜೊತೆಗೆ ಅಳಿಯ ಶ್ರೀ ಹರೀಶ ಕರಿಗಣ್ಣವರ ಇದ್ದಾರೆ.ನಮ್ಮ ಸಂಘಟನೆಯ ಕಾರ್ಯಕರ್ತರು ” ಲಾಕ್ ಔಟ್” ಆಗಿದ್ದರಿಂದ ಎಲ್ಲರನ್ನೂ ಕರೆಯುವಂತಿಲ್ಲ,ಸೇರಿಸಿ ಜಾತ್ರೆ ಮಾಡುವಂತಿಲ್ಲ!( ಅಶೋಕ ಚಂದರಗಿ,ಅಧ್ಯಕ್ಷರು,ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ.ಮೊ,9620114466,9448114466)


Spread the love

About Laxminews 24x7

Check Also

ಮುನಿರತ್ನಗೆ ಜಾಮೀನು ನೀಡದಿರಲು ಮನವಿ

Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ