Home / ರಾಜಕೀಯ / ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್‌ ಮಾಡುವಾಗ ಮಂಗಳೂರಿನ ಯುವತಿ ಸಾವು

ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್‌ ಮಾಡುವಾಗ ಮಂಗಳೂರಿನ ಯುವತಿ ಸಾವು

Spread the love

ಮಂಗಳೂರು: ನಗರದ ಯುವತಿಯೊಬ್ಬರು ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್‌ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರನ್ನು ನಗರದ ಗೋರಿಗುಡ್ಡೆ ನಿವಾಸಿ ಓಷಿನ್‌ ಪಿರೇರ (28) ಎಂದು ಗುರುತಿಸಲಾಗಿದೆ.

ಗೋರಿಗುಡ್ಡೆ ‘ಹಿಲ್‌ ಸ್ಟೀಕ್‌’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿದ್ದ ಓಷಿನ್‌ ಪಿರೇರ ಅವರು ಒಲಿವಿಯಾ ಪಿರೇರ- ದಿ. ಆಸ್ಕರ ಮಾರ್ಟಿನ್‌ ಪಿರೇರ ದಂಪತಿಯ ಮಗಳು.

ರಜೆ ಕಳೆಯಲು ಎರಡು ದಿನಗಳ ಹಿಂದಷ್ಟೇ ಅವರು ಥಾಯ್ಲೆಂಡ್‌ಗೆ ತೆರಳಿದ್ದರು. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ತಾಯಿ ಒಲಿವಿಯಾ ಪಿರೇರ ಅವರು ಬಂಧುಗಳ ಜೊತೆ ಮಂಗಳವಾರ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದರು.

ನಗರದ ಸೇಂಟ್‌ ಆಗ್ನೆಸ್‌ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್‌ ಕಂಪನಿ’ ರೆಸ್ಟೋರಂಟ್‌ ಒಡತಿಯಾಗಿದ್ದ ಅವರು ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ