Breaking News

ಒಳ ಉಡುಪಿನಲ್ಲಿ ಚಿ‌ನ್ನ ಸಾಗಣೆ: ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕ ವಶಕ್ಕೆ

Spread the love

ಮಂಗಳೂರು: ಒಳ ಉಡುಪಿನ ಕಿಸೆಯೊಳಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬುಧವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ‌ಆಗಮಿಸಿದ ಪ್ರಯಾಣಿಕನ ಬಳಿಯಿದ್ದ ಒಳ ಉಡುಪಿನ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕನನ್ನು ತಪಾಸಣೆ ನಡೆಸಿದ ವೇಳೆ, ಆತನ ಬ್ಯಾಗ್​ನಲ್ಲಿದ್ದ ಒಳ ಉಡುಪಿನ ಹೊಲಿಗೆ ಹಾಕಲಾದ ಪಾಕೆಟ್​ನೊಳಗೆ ಚಿನ್ನ ಪತ್ತೆಯಾಗಿದೆ.

24K ನ 831 ಗ್ರಾಂ ಚಿನ್ನ ಈತನ ಬಳಿ ಸಿಕ್ಕಿದ್ದು, ಇದರ ಮೌಲ್ಯ 43,29,510 ರೂ. ಎಂದು ಅಂದಾಜಿಸಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ