Breaking News

ಕೆಲವರು ರಾಜಕೀಯ ಮಾಡ್ತಿದ್ದಾರೆ, ಲಿಖಿತ ಭರವಸೆ ಕೊಡಲು ಸಾಧ್ಯವಿಲ್ಲ – ಸಿಎಂ ಡಿಕೆಶಿ ಖಡಕ್‌ ಹೇಳಿಕೆ

Spread the love

ಬೆಂಗಳೂರು: ನಾನು ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ  ಭರವಸೆ ಕೊಟ್ಟಿದ್ದೇನೆ. ನಮ್ಮನ್ನ ನಂಬಿ ಅಂತಾ ಹೇಳಿದ್ದೇನೆ. ಅದನ್ನು ಬಿಟ್ಟು ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೆ ಸಾಧ್ಯ ಇಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌  ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಆಶಾ ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೇ ನಾನು‌ ಕೊಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ನಾನು ಈಗಾಗಲೇ ಭರವಸೆ ಕೊಟ್ಟಿದ್ದೀನಿ, ನಮ್ಮ ಸರ್ಕಾರದ ಮೇಲೆ ನಂಬಿಕೆಯಿಡಿ ಅಂತಾ ಹೇಳಿದ್ದೇನೆ. ನೀವು ಪ್ರತಿಭಟನೆ, ಹೋರಾಟ ಮಾಡೋದಲ್ಲ. ಇಂತಹ ವಿಷಯಗಳಲ್ಲಿ ನೀವು ಹೋರಾಟ ಮಾಡಬಾರದು. ಹೋಗಿ ನಿಮ್ಮ ಕೆಲಸಗಳನ್ನ ಮಾಡಿ. ಕೇಂದ್ರ ಸರ್ಕಾರವೇ ಇನ್ನೂ ಹೆಚ್ಚು ಮಾಡಿಲ್ಲ. ನೀವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಹಲವು ಆಶಾ ಕಾರ್ಯಕರ್ತೆಯರು ನನಗೆ ಕರೆ ಮಾಡಿದ್ರು. ತುಂಬಾ ಜನ ಪ್ರತಿಭಟನೆ ವಾಪಸ್ ತಗೋತೀವಿ, ಅಣ್ಣಾ ನಮ್ಮನ್ನ ಕಳಿಸಿಕೊಡಿ, ನಿಮ್ಮ ಮೇಲೆ ನಂಬಿಕೆಯಿದೆ. ನಾವು ಸೇವೆ ಮಾಡಲು ರೆಡಿ ಇದ್ದೇವೆ ಅಂತಾ ಹೇಳಿದ್ದಾರೆ. ನಾನು ಅವರ ನಡುವೆ ಭಿನ್ನಾಭಿಪ್ರಾಯ ಬರಬಾರದು ಅಂತ ನಾನು ಹೇಳಿಲ್ಲ ಎಂದಿದ್ದಾರೆ.

ಪ್ರಣಾಳಿಕೆಯಲ್ಲಿ ಹಾಕಿದ್ದೀವಿ ಅಂತ ಹೆಚ್‌ಡಿ ಕುಮಾರಸ್ವಾಮಿ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಪ್ರಣಾಳಿಕೆಯಲ್ಲಿ ಹಾಕಿದ್ರೇ ನೇರವೇರಿಸುತ್ತೇವೆ. ಅವರಿಂದ ನಾವು‌ ಕಲಿಯಬೇಕಿಲ್ಲ. ನಾನು ಹೇಳೋದೇಲ್ಲ ಹೇಳಿದ್ದೀನಿ. ನನ್ನನ್ನ‌, ನಮ್ಮ‌ ಸರ್ಕಾರವನ್ನ ನಂಬಿ‌ ಅಂತ ಹೇಳಿದ್ದೀನಿ. ಹಲವರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ನಾನು ಯಾವುದಕ್ಕೂ, ಯಾರಿಗೂ ಪ್ರತಿಕ್ರಿಯೆ ಕೊಡಲ್ಲ. ಕೂಡಲೇ ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.


Spread the love

About Laxminews 24x7

Check Also

ಮಾತುಕತೆಗಾಗಿ ಮಸ್ತಾನ್‌ ದರ್ಗಾ ಬಳಿಯ ಲಾಡ್ಜ್‌ಗೆ ಬಂದಿದ್ದ ಜೋಡಿ – ಇಂದು ಚೆಕ್‌ಔಟ್‌ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ

Spread the loveಬೆಂಗಳೂರು: ಇಲ್ಲಿನ ಕಾಟನ್‌ಪೇಟೆಯ  ಮಸ್ತಾನ್‌ ದರ್ಗಾ ಬಳಿಯಿರುವ ರಿಜೆನ್ಸಿ ಇನ್‌ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ