Breaking News

ರೇಣುಕಾಸ್ವಾಮಿ ಕೇಸ್ – ಸುಪ್ರೀಂ ಕೋರ್ಟ್‌ನಿಂದ ಐವರು ಆರೋಪಿಗಳಿಗೆ ರಿಲೀಫ್

Spread the love

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಐವರು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್  ವಜಾಗೊಳಿಸಿದೆ.

ಎ-3 ಪವನ್, ಎ5 ನಂದೀಶ್, ಎ9 ಧನರಾಜ್, ಎ10 ವಿನಯ್ ಹಾಗೂ ರಾಘವೇಂದ್ರಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪ್ರರ್ದಿವಾಲ್ ಹಾಗೂ ವಿನೋದ್ ಚಂದ್ರನ್ ಪೀಠವು, ಒಂದೂವರೆ ವರ್ಷದ ಬಳಿಕ ಅರ್ಜಿ ಸಲ್ಲಿಸಿದೆ ಎಂದು ಅರ್ಜಿಯನ್ನು ವಜಾಗೊಳಿಸಿ, ಆದೇಶ ಹೊರಡಿಸಿದೆ.

ಈ ಹಿಂದೆ ಐವರ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.


Spread the love

About Laxminews 24x7

Check Also

ಮಾತುಕತೆಗಾಗಿ ಮಸ್ತಾನ್‌ ದರ್ಗಾ ಬಳಿಯ ಲಾಡ್ಜ್‌ಗೆ ಬಂದಿದ್ದ ಜೋಡಿ – ಇಂದು ಚೆಕ್‌ಔಟ್‌ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ

Spread the loveಬೆಂಗಳೂರು: ಇಲ್ಲಿನ ಕಾಟನ್‌ಪೇಟೆಯ  ಮಸ್ತಾನ್‌ ದರ್ಗಾ ಬಳಿಯಿರುವ ರಿಜೆನ್ಸಿ ಇನ್‌ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ