Breaking News

38 ಕಾಡಾನೆಗಳ ಹಿಂಡು ಬೇಲೂರಿಗೆ ವಾಪಸ್ – ಜನರಲ್ಲಿ ಆತಂಕ

Spread the love

ಹಾಸನ: ಕಾಡಾನೆ ಹಾವಳಿ ಹಾಸನ, ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದೆ. ಹಾಸನದಿಂದ ಚಿಕ್ಕಮಗಳೂರಿಗೆ ಓಡಿಸಲಾಗಿದ್ದ 38 ಕಾಡಾನೆಗಳನ್ನ ಮತ್ತೆ ಬೇಲೂರು ತಾಲೂಕಿಗೆ ವಾಪಸ್ ಕಳುಹಿಸಲಾಗಿದೆ.

ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್, ಡಿಎಫ್‌ಓ ನೇತೃತ್ವದಲ್ಲಿ ಚಿಕ್ಕಮಗಳೂರು ಭಾಗದಲ್ಲಿದ್ದ ಕಾಡಾನೆಗಳನ್ನ ಬೇಲೂರು ಭಾಗಕ್ಕೆ ಓಡಿಸಲಾಗಿದೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ.

BHIMA

ವಿರೋಧದ ನಡುವೆಯೂ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಓಡಿಸಿದ್ದಾರೆ. ಬೇಲೂರು ತಾಲ್ಲೂಕಿನ, ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ, ಮಲ್ಲಾಪುರ ಕಾನಳ್ಳಿ ಅರಣ್ಯ ಬಳಿ 38 ಕಾಡಾನೆಗಳು ಬೀಡುಬಿಟ್ಟಿವೆ.

ಇನ್ನು, ಕಾಫಿನಾಡಲ್ಲಿ ಆಪರೇಷನ್ ಒಂಟಿ ಸಲಗ ಕಾರ್ಯಾಚರಣೆಯೂ ಮುಂದುವರಿದಿದೆ. ಬೇಲೂರಿಂದ ಬಂದ ಹಿಂಡಿನಲ್ಲಿ ಬೇರೆಯಾಗಿ ಚಿಕ್ಕಮಗಳೂರು ನಗರದ ಸುತ್ತಮುತ್ತ ಓಡಾಡುತ್ತಿರುವ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ ನಡೆಸಲಾಗ್ತಿದೆ. ಕುಮ್ಕಿ ಆನೆ ಸುಗ್ರೀವ, ಅಯ್ಯಪ್ಪ, ಮಾಣಿಕ್ಯಾ, ಸಾಗರ್, ಭೀಷ್ಮ ಹಾಗೂ ಜ್ಯೂ.ಅರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗ್ತಿದೆ.


Spread the love

About Laxminews 24x7

Check Also

ಮಾತುಕತೆಗಾಗಿ ಮಸ್ತಾನ್‌ ದರ್ಗಾ ಬಳಿಯ ಲಾಡ್ಜ್‌ಗೆ ಬಂದಿದ್ದ ಜೋಡಿ – ಇಂದು ಚೆಕ್‌ಔಟ್‌ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ

Spread the loveಬೆಂಗಳೂರು: ಇಲ್ಲಿನ ಕಾಟನ್‌ಪೇಟೆಯ  ಮಸ್ತಾನ್‌ ದರ್ಗಾ ಬಳಿಯಿರುವ ರಿಜೆನ್ಸಿ ಇನ್‌ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ