Breaking News

ಡಿಸೆಂಬರ್‌ ಒಳಗೆ ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರ ಡೆಡ್‌ಲೈನ್‌

Spread the love

ಬೆಂಗಳೂರು: ಸಿಲಿಕಾನ್‌ ಸಿಟಿಯ ಅರೆಬರೆ ರಸ್ತೆ ಕಾಮಗಾರಿಯಿಂದ ಬೇಸತ್ತು ಹೋದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್‌ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಚಿವ ಕೃಷ್ಣಬೈರೇಗೌಡ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2,300 ಕಿ.ಮೀ. ಬಾಕಿ ಇರುವ ರಸ್ತೆಯ ದುರಸ್ತಿ ಡಾಂಬರೀಕರಣಕ್ಕೆ ಜನವರಿ, ಫೆಬ್ರವರಿ ಡೆಡ್‌ಲೈನ್ ಕೊಡಲಾಗಿತ್ತು. ಇದುವರೆಗೆ 4,200 ಕೋಟಿ ಅನುದಾನ ಬಿಡುಗಡೆಯಾಗಿದೆ‌. ಇನ್ನು ವಾರ್ಡ್-1 ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಗುಂಡಿ ಮುಚ್ಚೋಕೆ ವಾರ್ಡ್‌ಗೆ 75 ಲಕ್ಷ ಮೀಸಲಾಗಿಲಾಗಿದೆ.

ಡಿಸೆಂಬರ್ ಒಳಗೆ ಮತ್ತೆ ಗುಂಡಿ ಮುಚ್ಚೋಕೆ ಡೆಡ್‌ಲೈನ್ ಕೊಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತರಾಟೆಯನ್ನು ತೆಗೆದುಕೊಂಡರು.

ಇದರ ಮಧ್ಯೆ, ರಾಜಕಾಲುವೆ ಒತ್ತುವರಿಯೂ ಆಗಿದೆ. ಹಲವೆಡೆ ರಾಜಕಾಲುವೆಯೇ ಇಲ್ಲ ಅಂತಾ ಸ್ವತಃ ಸಚಿವರೇ ಶಾಕ್‌ನಿಂದ ಹೇಳಿದರು. 22 ಎಕರೆ ಒತ್ತುವರಿ ಗಮನಕ್ಕೆ ಬಂದಿದ್ದು, ಈಗಾಗಲೇ ತೆರವಿಗೂ ಸೂಚಿಸಿದ್ದೇನೆ ಎಂದರು.


Spread the love

About Laxminews 24x7

Check Also

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು – 2 ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಸೂಚನೆ

Spread the loveನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ  ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ