Breaking News

ಬೆಳಗ್ಗೆಯೇ ನಡುರಸ್ತೆಯಲ್ಲೇ ಕೈಕೊಟ್ಟ ಬಸ್; ಕಂಡಕ್ಟರ್ ಜೊತೆಗೂಡಿ ಬಸ್ ತಳ್ಳಿದ ವಿದ್ಯಾರ್ಥಿಗಳು

Spread the love

ಬಳ್ಳಾರಿ: ನಡುರಸ್ತೆಯಲ್ಲೇ ಕೆಟ್ಟು ನಿಂತ ಸಾರಿಗೆ ಬಸ್ ಅನ್ನು ಕಂಡಕ್ಟರ್ ಜೊತೆಗೂಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತಳ್ಳಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಹೊರವಲಯದ ಶುಗರ್ ಫ್ಯಾಕ್ಟರಿ ಬಳಿ ನಡೆದಿದೆ.

ಬಳ್ಳಾರಿಯಿಂದ ಕಂಪ್ಲಿ ಕಡೆಗೆ ಪ್ರಯಾಣಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಬೆಳಿಗ್ಗೆ ಕಂಪ್ಲಿ ಸಮೀಪದ ಶುಗರ್ ಫ್ಯಾಕ್ಟರಿ ಬಳಿ ಬರುತ್ತಿದ್ದಂತೆಯೇ ತಾಂತ್ರಿಕ ದೋಷದಿಂದ ಸ್ಟಾರ್ಟ್ ಆಗದೆ ನಡುರಸ್ತೆಯಲ್ಲೇ ನಿಂತಿದೆ.

ಬೆಳಗಿನ ಸಮಯವಾಗಿದ್ದರಿಂದ ಬಸ್‌ನಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಸ್ ಕೆಟ್ಟು ನಿಂತಿದ್ದರಿಂದ ತರಗತಿಗಳಿಗೆ ತಡವಾಗುತ್ತದೆ ಎಂಬ ಆತಂಕಕ್ಕೊಳಗಾದ ವಿದ್ಯಾರ್ಥಿಗಳು, ಕಂಡಕ್ಟರ್ ಜೊತೆ ಸೇರಿ ಬಸ್ ಅನ್ನು ಹಿಂದಿನಿಂದ ತಳ್ಳಿ ಸ್ಟಾರ್ಟ್ ಮಾಡಲು ಹರಸಾಹಸ ಪಟ್ಟಿದ್ದಾರೆ. ವಿದ್ಯಾರ್ಥಿಗಳು ಬಸ್ ತಳ್ಳುತ್ತಿರುವ ದೃಶ್ಯಗಳು ಇದೀಗ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿವೆ.

ಸಾರಿಗೆ ಇಲಾಖೆಯ ಈ ಅವ್ಯವಸ್ಥೆಯ ವಿರುದ್ಧ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡುವ ಮಾರ್ಗದಲ್ಲಿ ಸುಸ್ಥಿತಿಯಲ್ಲಿಲ್ಲದ ಡಕೋಟಾ ಬಸ್‌ಗಳನ್ನು ಬಿಡಲಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು ಹಾಗೂ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ” ಎಂದು ಕಿಡಿಕಾರಿರುವ ಪ್ರಯಾಣಿಕರು, ಕೆಕೆಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು – 2 ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಸೂಚನೆ

Spread the loveನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ  ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ