Breaking News

ಖಾಸಗಿ ಇಂಧನ‌ ಕಂಪನಿಗಳ‌ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಆಹಾರ ಸಚಿವ:- ಮುನಿಯಪ್ಪ.

Spread the love

ವಸಂತನಗರ: ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ‌ ರವರು ಇಂದು ವಸಂತನಗರದ ಆಹಾರ ಭವನದಲ್ಲಿ ಖಾಸಗಿ ಇಂಧನ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆಯನ್ನು ನಡೆಸಿದರು.
ಮಾರುಕಟ್ಟೆಯಲ್ಲಿ ಗ್ರಾಹಕರು ನಿಮಗೆ ಅತ್ಯವಶ್ಯಕ ವಾಗಿದ್ದು ಈ ಕಷ್ಟದ ಸಂದರ್ಭದಲ್ಲಿ ಗ್ರಾಹಕರಿಗಾಗಿ ಧರ ಹೆಚ್ಚಿಸದೆ ಒಂದೆ ದರವನ್ನು ವಿಧಿಸಲು ನಿಮ್ಮ ಮಾಲಿಕರೊಂದಿಗೆ ಚರ್ಚಿಸಿ ಸರ್ಕಾರದ ದರವನ್ನು ಪಾಲಿಸುವಂತೆ ಮನವರಿಕೆ ಮಾಡಲು ಸಲಹೆ ನೀಡಿದರು

ಖಾಸಗಿ ಕಂಪನಿಗಳ ಹೆಚ್ಚನ ಧರದಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿದ್ದು ಆದಷ್ಟು ಕಡಿಮೆ ಮಾಡಿದರೆ ಗ್ರಾಹಕರಿಗೆ ಸಹಕಾರಿಯಾಗಲಿದೆ ತಾವು ನಿರ್ಧಾರ ಮಾಡಬೇಕು ಎಂದರು

ಸಭೆಯಲ್ಲಿ ಇಂಧನ ಕಂಪನಿಗಳ ನೊಡಲ್ ಅಧಿಕಾರಿ ರುತ್ವಿಕ್ ರಂಜನ್ ಪಾಂಡೆ , ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಕಾನೂನು‌ ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕ ರಾದ ಎಂ.ಎಸ್.ಎನ್.ಬಾಬು,ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ರಮ್ಯ, ರಿಲಯನ್ಸ್ ಗ್ಯಾಸ್ ನ ಲಕ್ಷ್ಮಿ ನಾಯ್ಡು, ಆಟೀ ಸ್ಟೆಪ್ ಗ್ಯಾಸ್ ನ ಶುಬುದ್ದಿಬ್,ಟೊಟಲ್ ಗ್ಯಾಸ್ ನ ಆಸಿಫ್ ಪಾಷ,ಯುನಿ ಗ್ಯಾಸ್ ನ ವಿಘ್ನೇಶ್ವ್,ನಿಕೊ ಗ್ಯಾಸ್ ನ ಶಶಿಧರ್, ಗೊ ಗ್ಯಾಸ್ ನ ವರ್ದನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ – ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು

Spread the loveಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ  ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ