ಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ ಪೋರವಾಲ 580 (ಶೇಕಡಾ 96.67%) ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಮಹಾವಿದ್ಯಾಲಯದ ಶೇಕಡಾವಾರು ಫಲಿತಾಂಶ 88.10% ಆಗಿದ್ದು, ಒಟ್ಟು 168 ವಿದ್ಯಾರ್ಥಿಗಳಲ್ಲಿ 148 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 34 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ನಮ್ಮ ಮಹಾವಿದ್ಯಾಲಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಮಂಥನ ಮಹಾವೀರ ಪೋರವಾಲ 580/600(96.67%) ಲೆಕ್ಕಶಾಸ್ತ್ರಕ್ಕೆ 100/100, ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಶೃತಿ ರಮೇಶ ಕಂಬಾರ 578/600(96.33%) ದ್ವಿತೀಯ, ಕ್ರಿಷಾ ರಾಜೇಶ ಪಟೇಲ್ 576/600(96.00%)ತೃತೀಯ, ಲಕ್ಷ ಶಿವಕುಮಾರ ಅಗರವಾಲ 576/600(96.00%) ತೃತೀಯ, ರಂಜಿತಾ ತೇಜುನಾಥ ದೊಡಮನಿ 574/600(95.67%) ನಾಲ್ಕು, ಶ್ರಾವಣಿ ಎಂ. ಅಂಗಡಿ 571/600(95.17%) 5 ನೇ ಸ್ಥಾನ ಪಡೆದಿದ್ದಾರೆ,
ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ ಚರಂತಿಮಠ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಶ್ರೀ ಗುರುಬಸವ ಎಸ್. ಸೂಳಿಭಾವಿ, ಸಂಘದ ಗೌರವಾನ್ವಿತ ಸದಸ್ಯರು, ಆಡಳಿತಾಧಿಕಾರಿಗಳು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಗನ್ನಾಥ ವ್ಹಿ. ಚವ್ಹಾಣ, ಪ.ಪೂ. ವಿಭಾಗದ ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
Laxmi News 24×7