Breaking News

ಸೈಬರ್​ ವಂಚಕರಿಗೆ ಬೆಂಗಳೂರು ಪೊಲೀಸರ ಮಾಸ್ಟರ್​ ಸ್ಟ್ರೋಕ್

Spread the love

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸೈಬರ್​ ಕ್ರೈಂ ಪ್ರಕರಣಗಳ ಸಂಖ್ಯೆ ಮತ್ತು ಹೊಸ ಹೊಸ ವಿಧದಲ್ಲಿ ಸೈಬರ್​ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

 

ಕೇವಲ ಮೊಬೈಲ್ ಸಂವಹನದಿಂದಲೇ ಸಾರ್ವಜನಿಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದ ವಂಚಕರು ಬಳಸುತ್ತಿದ್ದ ಸಿಮ್ ಕಾರ್ಡ್ಸ್ ಹಾಗೂ ಫೋನ್‌ಗಳನ್ನೆ ನಿಷ್ಕ್ರಿಯ (ಬ್ಲಾಕ್) ಮಾಡಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಲಾರಂಭಿಸಿದ್ದಾರೆ.

ಜನವರಿಯಿಂದ ಇದುವರೆಗಿನ ಸೈಬರ್ ವಂಚನೆ ಪ್ರಕರಣಗಳ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್ ಪಡೆದಿದ್ದು, ನಗರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ‌. ಎಲ್ಲಾ ಠಾಣೆಗಳಿಂದ ಸೈಬರ್ ವಂಚನೆ ಪ್ರಕರಣಗಳ ಮಾಹಿತಿ ಪಡೆದು, ಆ ವಂಚನೆಗೆ ಬಳಕೆಯಾದ ಸಿಮ್ ಕಾರ್ಡ್‌ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಿಸಲಾರಂಭಿಸಿದ್ದಾರೆ.

ಕೇಂದ್ರ ದೂರಸಂಪರ್ಕ ಇಲಾಖೆ ಮತ್ತು ಟೆಲಿಕಾಂ ಕಂಪನಿಗಳ ಜೊತೆ ಮಾತನಾಡಿ, ಸೈಬರ್ ಕ್ರೈಂಗೆ ಬಳಕೆಯಾದ ಸಿಮ್ ಕಾರ್ಡ್ಸ್ ನಿಷ್ಕ್ರಿಯಗೊಳಿಸಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಕೇವಲ ಹದಿನೈದೇ ದಿನದಲ್ಲೇ ಸರಿಸುಮಾರು ಹನ್ನೆರಡು ಸಾವಿರ ಸಿಮ್ ಕಾರ್ಡ್ಸ್ ಬ್ಲಾಕ್ ಮಾಡಿಸಲಾಗಿದೆ.

ಕೇವಲ ಸಿಮ್ ಕಾರ್ಡ್ಸ್ ಮಾತ್ರವಲ್ಲದೇ ಕೃತ್ಯಕ್ಕೆ ಬಳಕೆಯಾಗುವ ಮೊಬೈಲ್ ಫೋನ್‌ಗಳನ್ನೂ ಸಹ ಬ್ಲಾಕ್ ಮಾಡಿಸಲಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಸಿಮ್ ಕಾರ್ಡ್ ಮಾತ್ರವಲ್ಲದೇ, ಕೃತ್ಯಕ್ಕೆ ಬಳಕೆಯಾದ ಹ್ಯಾಂಡ್ ಸೆಟ್ ಮಾಹಿತಿಯೂ ಲಭ್ಯವಾಗುವುದರಿಂದ ಅಂಥಹ ಹ್ಯಾಂಡ್ ಸೆಟ್​ಗಳನ್ನು ಸಹ ಬ್ಲಾಕ್ ಮಾಡಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್​ ಗುಪ್ತಾ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ