Breaking News

ಸ್ಕೂಟರ್‌ ನಲ್ಲಿ ಅಪ್ಪಿಕೊಂಡು, ಮುದ್ದಾಡಿದ ಜೋಡಿ; ವಿಡಿಯೋ ವೈರಲ್

Spread the love

ದೆಹಲಿ: ದಿಲ್ಲಿ ಮೆಟ್ರೋದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜೋಡಿಯೊಂದು ಲಿಪ್‌ ಲಾಕ್‌ ಮಾಡಿದ ವಿಡಿಯೋ ವೈರಲ್‌ ಆಗಿತ್ತು. ಇದೀಗ ದಿಲ್ಲಿ ಮತ್ತೊಂದು ಅಂಥದ್ದೇ ವಿಚಾರದಲ್ಲಿ ಸುದ್ದಿಯಾಗಿದೆ. ಆದರೆ ಈ ಬಾರಿ ಸ್ಕೂಟರ್‌ ನಲ್ಲಿ ಪ್ರಯಾಣಿಸಿದ ಜೋಡಿಯಿಂದಾಗಿ.

 

ದಿಲ್ಲಿಯ ರಸ್ತೆಯಲ್ಲಿ ಸ್ಕೂಟರ್‌ ನಲ್ಲಿ ಜೋಡಿಯೊಂದು ಹೋಗುವಾಗ ಹುಡುಗ ಒಂದು ಕೈಯಲ್ಲಿ ಸ್ಕೂಟರ್‌ ಚಲಾಯಿಸುತ್ತ ಇನ್ನೊಂದು ಕೈಯಲ್ಲಿ ಯುವತಿಯನ್ನು ಅಪ್ಪಿಕೊಂಡು ಮುದ್ದಾಡಿದ್ದಾನೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿದ್ದಾರೆ.

ಶಾಲು ಕಶ್ಯಪ್ ತನೇಜಾ ಎನ್ನುವವರು ವಿಡಿಯೋ ಶೇರ್‌ ಮಾಡಿದ್ದು, ಈಗಾಗಲೇ ವಿಡಿಯೊ 6 ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆ ಕಂಡು ವೈರಲ್‌ ಆಗಿದೆ.

“ಯಮರಾಜ ಹಾಗೂ ದಿಲ್ಲಿ ಪೊಲೀಸರು ರಜೆಯಲ್ಲಿದ್ದಾಗ ಪ್ರೀತಿ ಈ ರೀತಿ ಅರಳುತ್ತದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇಬ್ಬರ ಪ್ರೀತಿಯನ್ನು ನಮ್ಮ ಸಮಾಜ ನೋಡುವುದಿಲ್ಲ ಯಾಕೆ?” ಎಂದು ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ.

ಸದ್ಯ ಪೊಲೀಸರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ