ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಪೊಲೀಸ್ ತನಿಖೆ ಮಹತ್ವದ ಹಂತ ತಲುಪಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದು, ಸಂಜೆ ಇಬ್ಬರೂ ನಾಯಕರ ನಡುವೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ …
Read More »Yearly Archives: 2026
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ – ಮೂರು ದಿನದಲ್ಲಿ 5 ಕೋಟಿ.ಗೂ ಅಧಿಕ ಆದಾಯ
ಹಾಸನ: ಇಂದು ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ನಾಲ್ಕನೇ ದಿನ. ಇಂದೂ ಕೂಡ ದೇವಿಯ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಎಲ್ಲಾ ಸಾಲುಗಳಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದು, ಧರ್ಮದರ್ಶನ, 1000 ರೂ., 300 ರೂ.ಯ ವಿಶೇಷ ದರ್ಶನದ ಸಾಲಿನಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರಿದಿದ್ದಾರೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್, ನೇರವಾಗಿ ವಿಶೇಷ ದರ್ಶನದ 1000 ರೂ., 300 ರೂ. ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ ಮೂರೇ ದಿನದಲ್ಲಿ …
Read More »ಉಲ್ಟಾ ಹೊಡೆದ ಐ ವಿಟ್ನೆಸ್ ಪುನೀತ್ಗೆ ಇಂದು ಎಸ್ಪಿಪಿ ಪ್ರಶ್ನೆ – ದರ್ಶನ್ಗೆ ಮತ್ತೆ ಸಂಕಷ್ಟ?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಪ್ರಕರಣದ ಐ ವಿಟ್ನೆಸ್ ಪುನೀತ್ ಪ್ರತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಇಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಅವರು ಪುನೀತ್ ಅವರನ್ನು ಪಾಟಿಸವಾಲಿಗೆ ಒಳಪಡಿಸಲಿದ್ದಾರೆ. ಈ ಹಿಂದೆ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಕೇಳಿದ ಪ್ರಶ್ನೆಗಳಿಗೆ ಪುನೀತ್, ʻಗೊತ್ತಿಲ್ಲ, ನೋಡಿಲ್ಲ, ನೆನಪಿಗೆ ಬರುತ್ತಿಲ್ಲʼ ಎಂದು ಉತ್ತರಿಸಿದ್ದ. ಹೀಗಾಗಿ ಅವರನ್ನು ಪ್ರತಿಕೂಲ ಸಾಕ್ಷಿ …
Read More »ಬೆಳಗಾವಿಯ ಕನ್ನಡ ರಾಜ್ಯೋತ್ಸವಕ್ಕೆ ಲಕ್ಷಾಂತರ ಜನ ಸಾಕ್ಷಿ: ಕುಣಿದು ಕುಪ್ಪಳಿಸಿದ ಯುವ ಸಮೂಹ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕನ್ನಡಾಭಿಮಾನಿಗಳ ಅಭೂತಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ಸಾರಲು ಲಕ್ಷಾಂತರ ಕನ್ನಡಾಭಿಮಾನಿಗಳು ನಗರದ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಒಂದಾಗಿ ರಾಜ್ಯೋತ್ಸವದ ವೈಭವವನ್ನು ಮತ್ತಷ್ಟು ಹೆಚ್ಚಿಸಿದರು. ಶನಿವಾರ ಸಂಜೆಯಿಂದಲೇ ಆರಂಭಗೊಂಡಿದ್ದ ರಾಜ್ಯೋತ್ಸವದ ಸಂಭ್ರಮ ಭಾನುವಾರ ಇಡೀ ದಿನ ನಗರಾದ್ಯಂತ ಮನೆಮಾಡಿತ್ತು. ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ …
Read More »Special: ಕನ್ನಡವೇ ನಮ್ಮ ಉಸಿರು, ಕರ್ನಾಟಕವೇ ನಮ್ಮ ಹೆಮ್ಮೆ
ನವೆಂಬರ್ 1, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಅತ್ಯಂತ ಹೆಮ್ಮೆಯ, ಅಭಿಮಾನದ ಹಾಗೂ ಸಂಭ್ರಮದ ದಿನ. ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ಈ ದಿನವನ್ನು ನಾವು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ. ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಪ್ರತೀಕವಾಗಿರುವ ಕರ್ನಾಟಕ ರಾಜ್ಯೋತ್ಸವವು ಕೇವಲ ಸಂಭ್ರಮದ ಆಚರಣೆಯಲ್ಲ; ಅದು ಕನ್ನಡಿಗರ ಒಗ್ಗಟ್ಟು, ಸ್ವಾಭಿಮಾನ ಮತ್ತು ಅಸ್ಮಿತೆಯ ಸಂಕೇತವಾಗಿದೆ. 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ಪುನರ್ರಚನೆಯ ಪರಿಣಾಮವಾಗಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ …
Read More »ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಗೆ ನುಗ್ಗಿ ಮರ ಕಡಿಯುವ ಯಂತ್ರದಿಂದ ದಾಳಿ – 10ನೇ ತರಗತಿ ವಿದ್ಯಾರ್ಥಿನಿ ಸಾವು
ಅಮರಾವತಿ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ 21 ವರ್ಷದ ಯುವಕನೊಬ್ಬ ಶಾಲೆಗೆ ನುಗ್ಗಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮರ ಕಡಿಯುವ ಯಂತ್ರದಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಗೋಪಿಕಾ ಮೃತ ವಿದ್ಯಾರ್ಥಿನಿ. ತರಗತಿಯಲ್ಲಿ ಪಾಠ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಯಂತ್ರದೊಂದಿಗೆ ಒಳನುಗ್ಗಿದ್ದಾನೆ. ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಆರೋಪಿ ಗೋಪಿಕಾಳ ಮುಖದ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟೇ …
Read More »6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ – ಪತಿಗೆ ಮರುಮದುವೆಯಾಗುವಂತೆ ಪತ್ರ
ಪುಣೆ: 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡದ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಏಕ್ತಾ ಬಂಗಾಡ್ (33) ಎಂದು ಗುರುತಿಸಲಾಗಿದೆ. ಅವರ ಆರು ವರ್ಷದ ಮಗ ಮಾಧವ್ ಕೂಡ ಮೃತಪಟ್ಟಿದ್ದಾನೆ. ಶುಕ್ರವಾರ ಸಂಜೆ ಸುಮಾರು 6:30ರ ವೇಳೆಗೆ ಪಿಂಪ್ರಿ-ಚಿಂಚ್ವಾಡ್ನ ಸಿಗ್ನೇಚರ್ ಪಾರ್ಕ್ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಏಕ್ತಾ ಅವರು ಪತಿ ಮನೋಜ್ …
Read More »ಐದೇ ದಿನಗಳಲ್ಲಿ ATM ದರೋಡೆ ಖದೀಮರು ಅರೆಸ್ಟ್ – ಸಿಸಿಟಿವಿ ದೃಶ್ಯಗಳ ಮೂಲಕ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು
ಬೀದರ್: 5 ದಿನದಲ್ಲೇ ಸಿಸಿಟಿವಿ ದೃಶ್ಯಗಳ ಮೂಲಕ ಎಸ್ಬಿಐ ಬ್ಯಾಂಕ್ ಎಟಿಎಂ ದರೋಡೆ ಮಾಡಿದ್ದ ಅಂತರ್ ರಾಜ್ಯ ಖದೀಮರನ್ನು ಕೊನೆಗೂ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ, ಹೈದ್ರಾಬಾದ್ನ ಶಾಹಿನ್ ನಗರದಲ್ಲಿ ನಾಲ್ಕು ಜನ ಖದೀಮರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಮೂವರು ಹರಿಯಾಣ, ಓರ್ವ ರಾಜಸ್ಥಾನ ಮೂಲದ ಖದೀಮರಾಗಿದ್ದಾರೆ. ಆಸು ಎಂಡಿ ಶೋಹರಬ್ ಖಾನ್, ಆಸೀಪ್ ಚೇತರಖಾನ್, ಅನೀಷ್ ಇಂದ್ರಿಷ್, ರಾಹುಲ್ ಪಾಪುಖಾನ್ …
Read More »ಸಕ್ಕರೆ ಮೇಲೆ 50 ರೂ. ಬೆಂಬಲ ಬೆಲೆ ನಿಗದಿ ಮಾಡಿ – ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆಶಿ ಒತ್ತಾಯ
ಬೆಂಗಳೂರು: ಸಕ್ಕರೆ ಮೇಲೆ 50 ರೂ. MSP (ಕನಿಷ್ಠ ಬೆಂಬಲ ಬೆಲೆ) ದರ ನಿಗದಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದರು. ಕಬ್ಬು ಬೆಳೆಗಾರರ ಹೋರಾಟ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ ಸಿಎಂ, ಕೇಂದ್ರ ಸರ್ಕಾರದಿಂದ ಕಬ್ಬಿಗೆ ದರ ಫಿಕ್ಸ್ ಮಾಡ್ತೇವೆ ಎಂದು ಜೋಶಿ ಅವರು ಮಾತು ಕೊಟ್ಟಿದ್ದಾರೆ. ಅವರು ಎಷ್ಟು ಫಿಕ್ಸ್ ಮಾಡ್ತಾರೋ ಅದನ್ನು ಪಾಸ್ ಆನ್ ಮಾಡಬೇಕು ಎಂದು ನಮಗೂ ಫ್ಯಾಕ್ಟರಿ ಅವರಿಗೂ ಮಾತುಕತೆ …
Read More »ಬರದ ನಡುವೆ ಕೇಂದ್ರದಿಂದ ಬಂಪರ್ ಕೊಡುಗೆ – ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು ಬಿಡುಗಡೆ
ನವದೆಹಲಿ: ಬರದ ನಡುವೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಹೌದು. ಕೇಂದ್ರ ಸರ್ಕಾರವು ಶನಿವಾರ (ಇಂದು) ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿಯಾಗಿ 1.09 ಲಕ್ಷ ಕೋಟಿ ರೂ.ಗೂ ಅಧಿಕ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ನೀಡುವ ತೆರಿಗೆ ಪಾಲಿನ ಜೊತೆಗೆ ಬಿಡುಗಡೆಯಾಗಿರುವ ಹೆಚ್ಚುವರಿ ಮೊತ್ತವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ …
Read More »
Laxmi News 24×7