Breaking News

Yearly Archives: 2026

ಪ್ರಜ್ವಲ್‌ ಕೇಸಲ್ಲಿ ಅಮಿತ್‌ ಶಾ ಅವ್ರೇ ಅವಾರ್ಡ್‌ ಕೊಟ್ಟಿದ್ರು, ಸ್ಟಿಂಗ್‌ ಕೇಸಲ್ಲೂ ಅವಾರ್ಡ್‌ ಸಿಗುತ್ತೆ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರವೇ ಕರ್ನಾಟಕ ಪೊಲೀಸರಿಗೆ ಅವಾರ್ಡ್‌ ಕೊಟ್ಟಿದೆ. ಅದೇ ರೀತಿ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲೂ ಅವಾರ್ಡ್‌ ಸಿಗುತ್ತೆ ನೋಡಿ ಅಂತಾ ರಾಜ್ಯ ಗೃಹಸಚಿವ ಪ್ರಿಯಾಂಕ್‌ ಖರ್ಗೆ  ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ರು. ಪ್ರಜ್ವಲ್ ರೇವಣ್ಣ ಕೇಸಲ್ಲಿ ಕೇಂದ್ರ ಸರ್ಕಾರವೇ ಕರ್ನಾಟಕ ಪೊಲೀಸರಿಗೆ ಅವಾರ್ಡ್ ನೀಡಿದೆ. ಅಮಿತ್ ಶಾ ಅವರೇ ಕರ್ನಾಟಕ ಪೊಲೀಸರ …

Read More »

ವಾಟರ್ ಹೀಟರ್ ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ದುರ್ಮರಣ

ಚಿಕ್ಕಮಗಳೂರು: ವಾಟರ್ ಹೀಟರ್  ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ  ನಡೆದಿದೆ. ಈತ 2ನೇ ತರಗತಿ ಬಾಲಕ ನೀಲಾಂಶ್ (8) ಮೃತ ದುರ್ದೈವಿ. ಭಾನುವಾರ (ನ.1) ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲಿ ಒಬ್ಬನೇ ಇದ್ದ. ಸ್ನಾನಕ್ಕೆ ನೀರು ಕಾಯಿಸಲು ಕರೆಂಟ್ ವಾಟರ್ ಹೀಟರ್ ಹಾಕಿ, ಬಕೆಟ್‌ನಲ್ಲಿದ್ದ ನೀರಿಗೆ ಕೈ ಹಾಕಿದಾಗ ಬಾಲಕ ವಿದ್ಯುತ್ ಶಾಕ್‌ನಿಂದ  ಸಾವನ್ನಪ್ಪಿದ್ದಾನೆ. ಮನೆಗೆ ಪೋಷಕರು ಬಂದು ನೋಡಿದಾಗ ಈ ಘಟನೆ …

Read More »

ಸಿದ್ರಾಮಯ್ಯ ವಿರುದ್ಧದ ಸ್ಟಿಂಗ್‌ ಕೇಸ್‌ – ಕೃಪಾ ಆಳ್ವಾ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛಾಟಿತ ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ಕೋರ್ಟ್‌ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇಂದು ಅರ್ಜಿ ವಿಚಾರಣೆ 66ನೇ ಸೇಷನ್ಸ್ ಕೋರ್ಟ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೃಪಾ ಆಳ್ವಾ , ವಿನೋದ್ ಕುಮಾರ್, ಪ್ರಶಾಂತ್ ಕುಮಾರ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು  ಮಂಜೂರು ಮಾಡಿ …

Read More »

ವಧು-ವರನಿಗೆ ನಂದಿನಿ ಹಾಲು – ಮೊಸರು ಗಿಫ್ಟ್‌ ಕೊಟ್ಟು ಸರ್ಕಾರದ ವಿರುದ್ಧ ಆಕ್ರೋಶ

ಮೈಸೂರು: ರಾಜ್ಯಾದ್ಯಂತ ನಂದಿನಿ ಹಾಲು-ಮೊಸರಿನ ದರ ಏರಿಕೆ ವಿರುದ್ಧ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ  ನಡೆದ ಮಂಜು ಮತ್ತು ಅನನ್ಯ ಅವರ ಮದುವೆಯಲ್ಲಿ ವಧು – ವರನಿಗೆ ಹಾಲು-ಮೊಸರು  ಉಡುಗೊರೆಯಾಗಿ ನೀಡಿ ಶುಭಕೋರಿದ್ದಾರೆ. ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪ ವಿವಾಹ ನಡೆಯಿತು. ಬೆಲೆ ಏರಿಕೆಯಿಂದ ಬಡವರು ಹಾಗೂ ಮಧ್ಯಮ ವರ್ಗದ ಜನರ ಮೇಲಾಗುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಕಾರ್ಯಕರ್ತರು …

Read More »

ಸಿದ್ದರಾಮಯ್ಯ ತಣಿಸಲು ಕುಮಾರಸ್ವಾಮಿ ಮೇಲೆ ಸ್ಟಿಂಗ್ ಆರೋಪ: ಶ್ರೀರಾಮುಲು

ಬೆಂಗಳೂರು: ಸ್ಟಿಂಗ್ ಆಪರೇಷನ್ ಕೇಸ್‌ನಲ್ಲಿ  ಸಿದ್ದರಾಮಯ್ಯ  ತಣಿಸಲು ಕೇಂದ್ರ ಸಚಿವ ಕುಮಾರಸ್ವಾಮಿ  ಮೇಲೆ ಕಮೀಷನರ್ ಕೈಯಲ್ಲಿ ಆರೋಪ ಮಾಡಿಸಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಕಾಫಿ ಲೋಟದಲ್ಲಿ ಚಂಡ ಮಾರುತ ರೀತಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಅವರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ಟಿಂಗ್ ಪ್ರಕರಣ ಬೇರೆ ಕಡೆ ತಿರುಗಿಸುವ …

Read More »

38 ಸಾವಿರ ಕೋಟಿ ರೂ. ಬಾಕಿ ಬಿಡುಗಡೆಗೆ ಗಡುವು – ಸಿಎಂ ಜೊತೆ ಗುತ್ತಿಗೆದಾರರ ನಿಯೋಗ ಚರ್ಚೆ

ಬೆಂಗಳೂರು: 38 ಸಾವಿರ ಕೋಟಿ ರೂ. ಬಾಕಿ ಬಿಡುಗಡೆಗೆ ಗಡುವು ನೀಡಿದ ಬೆನ್ನಲ್ಲೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಬಾಕಿ ಹಣ ಬಿಡುಗಡೆಗೆ ಗುತ್ತಿಗೆದಾರರ ಪಟ್ಟು ಹಿಡಿದಿದ್ದು, ಈಗಾಗಲೇ ಡಿಸೆಂಬರ್‌ವರೆಗೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ. ಗಡುವು ನೀಡಿದ ಬೆನ್ನಲ್ಲೇ ಸಿಎಂ ಜೊತೆ ಗುತ್ತಿಗೆದಾರರು ಸಭೆ ನಡೆಸಿದ್ದಾರೆ. ಇತ್ತೀಚೆಗೆ ಗುತ್ತಿಗೆದಾರರು ಶಾಸಕರ …

Read More »

ಅಡ್ಡಂಡ ಕಾರ್ಯಪ್ಪ ಪತ್ರಿಕಾಗೋಷ್ಠಿ ವೇಳೆ ಗಲಾಟೆ – ಚಪ್ಪಲಿ ಎಸೆತ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಬೆಂಗಳೂರು: ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಗಲಾಟೆ ನಡೆದಿದ್ದು, ನಾಟಕಕಾರ ಅಡ್ಡಂಡ ಕಾರ್ಯಪ್ಪ  ಅವರತ್ತ ಕಾಂಗ್ರೆಸ್  ಕಾರ್ಯಕರ್ತರು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಗಾಂಧಿ ಹತ್ಯೆಯ ಸತ್ಯ’ ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಪಿಸಿಸಿ ಮುಖಂಡರಾದ ಲಕ್ಷ್ಮಣ್ ಮತ್ತು ಮನೋಹರ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಈ …

Read More »

ನಂದಿನಿ ಮೊಸರು ಪ್ರತಿ ಲೀಟರ್‌ಗೆ 2 ರೂ. ಇಳಿಸಲು ಸಿಎಂ ಸೂಚನೆ

ಬೆಂಗಳೂರು: ಹಾಲು – ಮೊಸರಿನ ದರ ಏರಿಕೆಗೆ ರಾಜ್ಯಾದ್ಯಂತ ಜಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್‌ (DK Shivakumar) ನಂದಿನಿ ಮೊಸರಿನ ದರ ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಲು ಸೂಚನೆ ಕೊಟ್ಟಿದ್ದಾರೆ. ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಅರ್ಧ ಲೀಟ‌ರ್ ಮೊಸರಿನ ದರವನ್ನ 28 ರೂ. ನಿಂದ 34 ರೂ.ಗೆ ಹಾಗೂ 1 ಲೀಟರ್ ಮೊಸರಿನ ದರವನ್ನ 54 ರೂ. ನಿಂದ 68 …

Read More »

ಶಿವಮೊಗ್ಗದಲ್ಲಿ ನ.5 ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ: ಎಸ್ಐಆರ್  ಪ್ರಕ್ರಿಯೆಯನ್ನ ವಿರೋಧಿಸುವ ನೆಪದಲ್ಲಿ ಕಾಂಗ್ರೆಸ್  ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದು, ಜನರಿಗೆ ಸತ್ಯವನ್ನ ತಿಳಿಸುವ ಉದ್ದೇಶದಿಂದ ನ.5 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ  ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶವು ಅನೇಕ ಸಮಸ್ಯೆಗೆ ಪರಿಹಾರ ಸೂಚಿಸಿ, ಇತರೆ ದೇಶಗಳಿಗೆ ಬೆನ್ನೆಲುಬಾಗಿ ನಿಂತಿದೆ. ಜೊತೆಗೆ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಭಾರತವು ಇತರೆ ರಾಷ್ಟ್ರಗಳಿಗೂ ಸಹಕಾರ ನೀಡುತ್ತಿದೆ. ಆದರೆ, …

Read More »

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಸರ್ಕಾರಿ ಗೌರವದೊಂದಿಗೆ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಅಂತ್ಯಕ್ರಿಯೆ

ಗ್ರಾಮದಲ್ಲಿರುವ ಅರುಣ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಪುತ್ರ ವಲ್ಲಭ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ವತಿಯಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಗೋವಾದಿಂದ ಅಥಣಿ ಮಾರ್ಗವಾಗಿ ಅರುಣ್ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿತು. ಸಾವಿರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಮೃತದೇಹವನ್ನು ಸ್ವಾಗತಿಸಿ ಗ್ರಾಮಕ್ಕೆ …

Read More »