ಶಿವಮೊಗ್ಗ: ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದೆ. ಇದರಿಂದ ಕೋಪಗೊಂಡು ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ನಗರದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಒಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಶಾಸಕರು ವೇದಿಕೆ ಮೇಲೆ ಎದ್ದು ನಿಂತು ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವ ದೇಶಕ್ಕೊಂದು, ರಾಜ್ಯಕ್ಕೊಂದು ಬೇರೆ ಇದೆಯಾ? ಕೇಂದ್ರದ ಕಾನೂನಿನ ವಿರುದ್ಧ ರಾಜ್ಯ ನಡೆದುಕೊಳ್ಳಲು ಬರಲ್ಲ. ಕಾನೂನು …
Read More »Yearly Archives: 2026
ಕರ್ನಾಟಕದ ಗಣಿ ಬ್ಲಾಕ್‌ಗಳ ಹರಾಜಿಗೆ ಸುಪ್ರೀಂ ಅಸ್ತು
ನವದೆಹಲಿ: ಕರ್ನಾಟಕದ ವಿವಿಧ ವರ್ಗಗಳ ಗಣಿಗಾರಿಕೆ ಬ್ಲಾಕ್‌ಗಳನ್ನು, ಕಚ್ಚಾ ಅರಣ್ಯ ಪ್ರದೇಶ ಸೇರಿದಂತೆ, ಒಂದೇ ಸಮಗ್ರ ಬ್ಲಾಕ್‌ಗಳಾಗಿ ವಿಲೀನಗೊಳಿಸಿ ಹರಾಜು ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ, ಅರಣ್ಯ ಪ್ರದೇಶವನ್ನು ಹರಾಜು ಬ್ಲಾಕ್‌ಗೆ ಸೇರಿಸಿರುವುದನ್ನೇ ಗಣಿಗಾರಿಕೆಗೆ ಅನುಮತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ವಿವಿಧ ಗಣಿಗಾರಿಕೆ ಪ್ರದೇಶಗಳನ್ನು ದೊಡ್ಡ ಮತ್ತು …
Read More »2 ವರ್ಷದಿಂದ ಆ ಹುಡುಗ ಜೈಲಲ್ಲಿದ್ದಾನೆ, KPSC, ನೈಸ್ ವಿಷಯ ಬಂದಾಗ ಮೊಬೈಲ್ ಸಿಕ್ಕಿದ್ದು ಹೇಗೆ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಹಾಸನ: ಎರಡು ವರ್ಷದಿಂದ ಆ ಹುಡುಗ (ಪ್ರಜ್ವಲ್ ರೇವಣ್ಣ) ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್‌ಸಿ , ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್ ಸಿಕ್ಕಿದೆ. ಈಗ ಹೊಸ ಕತೆ ಕಟ್ಟುತ್ತಿದ್ದಾರೆ ಎಂದು ಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೊಳೆನರಸೀಪುರ ತಾಲೂಕಿನ, ಮಾವಿನಕೆರೆಯಲ್ಲಿ ಅವರು ತಮ್ಮ ತಾಯಿ ಸಮಾಧಿಗೆ ನಮಿಸಿ, ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ …
Read More »ಅಧಿಕಾರ ಅನ್ನೋದು ವಿಷವಿದ್ದಂತೆ – ಮತ್ತೆ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ರಾಜಣ್ಣ
ಬೆಂಗಳೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಡಾ. ಜಿ. ಪರಮೇಶ್ವರ್ ನಿವಾಸದಲ್ಲಿ ಚರ್ಚೆ ನಡೆಸಿದ ಬಳಿಕ, ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ …
Read More »ಗೃಹಪ್ರವೇಶದಂದು ಗೋ ಪೂಜೆ ನೇರವೇರಿಸಿದ ಸಿದ್ದರಾಮಯ್ಯ ಪತ್ನಿ – ಲಕ್ಷ್ಮಿ ಫೋಟೋವನ್ನು ಹಿಡಿದು ನಿಂತ ಯತೀಂದ್ರ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಗಣೇಶ ಚತುರ್ಥಿಯ ಶುಭದಿನದಂದು ನಡೆದಿದ್ದು ಈಗ ಫೋಟೋಗಳು ಲಭ್ಯವಾಗಿದೆ. ಹೊಸ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ ಸಂಪ್ರದಾಯದಂತೆ ಗೋಪೂಜೆ ಮಾಡಲಾಗಿದೆ. ಮನೆಯ ಒಳಗಡೆ ಹಸು ಮತ್ತು ಕರುವನ್ನು ಕರೆದುಕೊಂಡು ಹೋಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಯತೀಂದ್ರ ಅವರು ಲಕ್ಷ್ಮಿದೇವಿಯ ಫೋಟೋವನ್ನು ಹಿಡಿದು ನಿಂತಿದ್ದರು. ಸಾಂಸ್ಕೃತಿಕ ನಗರಿ …
Read More »ಅರಸಾಳು ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು
ಶಿವಮೊಗ್ಗ: ಅರಸಾಳು ಬಳಿ ರೈಲ್ವೇ ವಿದ್ಯುತ್ ಲೈನ್ ಹಾಗೂ ಹಳಿ ಮೇಲೆ ಮರವೊಂದು ಮುರಿದು ಬಿದ್ದಿದೆ. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಮಾರ್ಗ ಮಧ್ಯೆ ನಿಂತಿದೆ. ಇದರಿಂದಾಗಿ ಹಬ್ಬವನ್ನು ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಬೆಳಿಗ್ಗೆ 5:20ಕ್ಕೆ ಸರಿಯಾಗಿ ತಾಳಗುಪ್ಪದಿಂದ ಹೊರಟಿದ್ದ ರೈಲು, ನಿಗದಿಯಂತೆ ಬೆಳಿಗ್ಗೆ 07 ಗಂಟೆಗೆ ಶಿವಮೊಗ್ಗ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರವನ್ನು ತಲುಪಬೇಕಾಗಿತ್ತು. ಆದರೆ, ಅರಸಾಳು ಬಳಿ …
Read More »ವಿಡಿಯೋ ಡಿಲೀಟ್ ಮಾಡುವಂತೆ ಸ್ಥಳೀಯ ವಾಹಿನಿಗಳಿಗೆ ಧನಂಜಯ ಧಮ್ಕಿ ಆರೋಪ!
ಮೈಸೂರು: ಸ್ಥಳೀಯ ವಾಹಿನಿಗಳ ಪತ್ರಕರ್ತರಿಗೆ ಧಮ್ಕಿ ಹಾಕಿ, ಈಗಾಗಲೇ ಅಪ್ಲೋಡ್ ಮಾಡಲಾಗಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿಸಿರುವ ಆರೋಪ ಇನ್ಸ್‌ಪೆಕ್ಟರ್ ಧನಂಜಯ ಅವರ ವಿರುದ್ಧ ಕೇಳಿಬಂದಿದೆ. ಇತ್ತೀಚೆಗೆ ನಡೆದ ಶಾಂತಿ ಸಭೆಯ ವೇಳೆ ಸ್ಥಳೀಯ ವಾಹಿನಿಗಳನ್ನ ಸ್ವತಃ ಕರೆಸಿಕೊಂಡಿದ್ದ ಧನಂಜಯ ಅವರು, ಮಾಧ್ಯಮಗಳ ಮುಂದೆ ಹೀರೋಯಿಸಂ ತೋರಿಸಿದ್ದರು. ಆದರೆ ಇದೀಗ ಅದೇ ಹೀರೋಯಿಸಂ ಎಡವಟ್ಟಾಗಿ ಪರಿಣಮಿಸಿದ ಬೆನ್ನಲ್ಲೇ, ವಿಡಿಯೋಗಳನ್ನ ಪ್ರಸಾರ ಮಾಡಿದ ಸ್ಥಳೀಯ ವಾಹಿನಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ …
Read More »ಸಿದ್ದರಾಮಯ್ಯ ಶಾಶ್ವತ ಮುಖ್ಯಮಂತ್ರಿ – ಅಭಿಮಾನಿಗಳಿಂದ ಘೋಷಣೆ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಗರದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಅಭಿಮಾನಿಗಳು ಸಿದ್ದರಾಮಯ್ಯ ಶಾಶ್ವತ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ್ದಾರೆ. ಮೈಸೂರು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಜೆ ವಿಜಯಕುಮಾರ್ ಅವರು ಘೋಷಣೆ ಕೂಗಿದ್ದಾರೆ. ಸನ್ಮಾನ ಮಾಡುವ ವೇಳೆ ಶಾಶ್ವತ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಅವರು ಘೋಷಣೆ ಕೂಗಿದರು. ಈ ವೇಳೆ 2028 ಕ್ಕೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. …
Read More »ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗಿದೆ: ಸಿಎಂ ಬಹಿರಂಗ ಹೇಳಿಕೆ
ಬೆಂಗಳೂರು: ಗ್ಯಾರಂಟಿ ಸೇರಿ ವಿವಿಧ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ SCSP-TSP ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ ಅಂತ ಸಿಎಂ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಹಣ ಬೇರೆ ಇಲಾಖೆ, ಯೋಜನೆಗಳಿಗೆ ಬಳಕೆ ಮಾಡಿದ್ದೇವೆ ಅಂತ ಒಪ್ಪಿಕೊಂಡರು. ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ ಅವರು, ಕೇಂದ್ರ ಸರ್ಕಾರವೂ ನಾವು ಮಾಡಿದಂತೆ …
Read More »15 ದಿನ ಅಷ್ಟೇ ಬಾಕಿ – ಇ-ಕೆವೈಸಿ ಕೊಡದಿದ್ರೆ ರೇಷನ್ ಕಾರ್ಡ್ ರದ್ದಾಗೋದು ಗ್ಯಾರಂಟಿ
ಬೆಂಗಳೂರು: ರೇಷನ್ ಕಾರ್ಡ್ ಇ ಕೆವೈಸಿ ಮುಕ್ತಾಯಕ್ಕೆ ಕೇವಲ 15 ದಿನ ಅಷ್ಟೇ ಬಾಕಿ ಇದೆ. ಇ-ಕೆವೈಸಿ ಆಗದಿದ್ರೆ ರೇಷನ್ ಕಾರ್ಡ್ ರದ್ದಾಗಲಿದೆ. ಆದರೆ ಇ ಕೆವೈಸಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದುವರೆಗೂ ಕೇವಲ 36.44% ಅಷ್ಟೇ ಇ ಕೆವೈಸಿ ಆಗಿದೆ. ಒಂದು ಕಡೆ ಸರ್ವರ್ ಕಾಟ ಮತ್ತೊಂದು ಕಡೆ ಡೆಡ್ ಲೈನ್ ಆತಂಕ ನಡುವೆ ಇದುವರೆಗೂ 36.44% ಅಷ್ಟೇ ಇ ಕೈವೈಸಿ ಆಗಿದೆ. ಒಟ್ಟು 2.67 ಕೋಟಿ ರೇಷನ್ …
Read More »
Laxmi News 24×7