Breaking News

Yearly Archives: 2026

ತಡರಾತ್ರಿ ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು

ಧಾರವಾಡ: ತಡರಾತ್ರಿ ಹುಬ್ಬಳ್ಳಿ–ಗದಗ  ಬೈಪಾಸ್‌ನಲ್ಲಿ ಕೊರಿಯರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತರನ್ನು ಜಯರಾಜನಗರ ನಿವಾಸಿಗಳಾದ ರಜನಿ ತಿಕಲಾ ಹಾಗೂ ಸುಕುಮಾರ ತಿಕಲಾ ಎಂದು ಗುರುತಿಸಲಾಗಿದೆ. ರಜನಿ ತಿಕಲಾ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ರಜನಿಯನ್ನು ಪತಿ ಸುಕುಮಾರ ಬೈಕ್‌ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಎದುರಿನಿಂದ …

Read More »

ಸಾಮೂಹಿಕ ರಾಜೀನಾಮೆಗೆ ʻ108ʼ ಸಿಬ್ಬಂದಿ ನಿರ್ಧಾರ – ಇಂದಿನಿಂದಲೇ ರಾಜ್ಯದಲ್ಲಿ ಸೃಷ್ಟಿಯಾಗುತ್ತಾ ಹೆಲ್ತ್ ಎಮೆರ್ಜೆನ್ಸಿ?

ಬೆಂಗಳೂರು: ನಗರ ಸೇರಿ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಸೃಷ್ಠಿಯಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇಂದು ಜಿವಿಕೆ ಸಂಸ್ಥೆ ಜೊತೆ 108 ನೌಕರರ  ಮಹತ್ವದ ಸಭೆ ನಡೆಯಲಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದ ನೌಕರರು, ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬೇಡಿಕೆ ಈಡೇರದೇ ಇದ್ರೆ ಇಂದು ರಾತ್ರಿಯಿಂದಲೇ 108 ಅಂಬುಲೆನ್ಸ್‌ ಸೇವೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಸಾಮೂಹಿಕ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿದ್ಧತೆ ನಡೆದಿದೆ. …

Read More »

ಬರದ ಬಗ್ಗೆ ಚರ್ಚೆಗೆ ಸಚಿವರ ʻಬರʼ; ಕಾಂಗ್ರೆಸ್‌ – ಬಿಜೆಪಿ ಮಧ್ಯೆ ತೀವ್ರ ಜಟಾಪಟಿ

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ  ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಬರದ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಚರ್ಚೆ ಆರಂಭಕ್ಕೂ ಮುನ್ನವೇ ಸದನದಲ್ಲಿ ಸಚಿವರ ಗೈರುಹಾಜರಿ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಬರದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸಚಿವರು ಸದನದಲ್ಲಿ ಹಾಜರಿ ಇಲ್ಲದಿರುವುದನ್ನ ವಿಪಕ್ಷ ಸದಸ್ಯರು ಪ್ರಶ್ನಿಸಿದರು. ʻʻಬರದ ಬಗ್ಗೆ ಚರ್ಚೆಗೆ ಸಚಿವರ ಬರ ಇದೆ. ಮಂತ್ರಿಗಳಿಗೆ …

Read More »

ಶಾಲಾ ಮಕ್ಕಳಿಗೆ ಉಪಾಹಾರ ಯೋಜನೆ ವಿಸ್ತರಿಸಿದ ಸಿಎಂ ವಿಜಯ್‌

ಚೆನ್ನೈ: ಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಬೆಳಗಿನ ಉಪಾಹಾರ (ಬ್ರೇಕ್‌ಫಾಸ್ಟ್) ಯೋಜನೆಯನ್ನು 6ರಿಂದ 8ನೇ ತರಗತಿ ವರೆಗೆ ತಮಿಳುನಾಡು ) ಸರ್ಕಾರ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಮಂಗಳವಾರ ಚೆನ್ನೈನ ತಿರುವನ್ಮಿಯೂರ್‌ನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವಿಸ್ತರಿತ ‘ಪೆರುಂತಲೈವರ್ ಕಾಮರಾಜರ್ ಉಚಿತ ಉಪಹಾರ ಯೋಜನೆ’ಗೆ  ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಉಪಾಹಾರ ಬಡಿಸಿದ ಸಿಎಂ ವಿಜಯ್‌, ಬಳಿಕ ಮಕ್ಕಳ ಜೊತೆ ತಾವೂ ಕುಳಿತು ಪೊಂಗಲ್‌ ಸವಿದರು. …

Read More »

‘ವಂದೇ ಮಾತರಂ’ 2‌ ಚರಣ ಹಾಡುವ ರಾಜ್ಯ ಸರ್ಕಾರ ಆದೇಶ ಪ್ರಶ್ನಿಸಿ ಅರ್ಜಿ; ವಿಚಾರಣೆ 3 ವಾರ ಮುಂದೂಡಿಕೆ

ಬೆಂಗಳೂರು: ವಂದೇ ಮಾತರಂ  ಗೀತೆಯ ಎರಡು ಚರಣಗಳನ್ನ ಮಾತ್ರ ಹಾಡುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅನಗದ್ ಕಾಮತ್ ವಾದ ಮಂಡಿಸಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಗೀತೆಯ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮಾತ್ರ ತೀರ್ಮಾನಿಸುವ ಅಧಿಕಾರ ಹೊಂದಿದ್ದು, ಪ್ರತಿ ರಾಜ್ಯ ಸರ್ಕಾರ ಹೊಸದಾಗಿ ಅದೇಶ ಮಾಡಲು ಸಾಧ್ಯವಿಲ್ಲ. …

Read More »

SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು

ನವದೆಹಲಿ: ನಿಮ್ಮ ಹೆಸರಿನಲ್ಲಿ ಪಡೆದಿರುವ ಸಿಮ್‌ ಕಾರ್ಡ್‌  ಅನ್ನು ಬೇರೆಯವರಿಗೆ ಬಳಸಲು ನೀಡಿದ್ದೀರಾ? ಹಾಗಿದ್ದರೆ ಎಚ್ಚರ. ನಿಮ್ಮ ಹೆಸರಿನಲ್ಲಿರುವ ಸಿಮ್‌ ಕಾರ್ಡನ್ನ ಬೇರೆಯವರು ಬಳಸಲು ಅವಕಾಶ ನೀಡದಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ SIM ಕಾರ್ಡ್‌ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ, ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಗಳಲ್ಲಿ ಬದಲಾವಣೆ (ಟ್ಯಾಂಪರಿಂಗ್) ಮಾಡಿದ್ರೆ ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಇಲಾಖೆ ಎಚ್ಚರಿಸಿದೆ. ಈ …

Read More »

ವಿಧಾನಸೌಧ ಡಿಸಿಪಿ ಯೋಗೇಶ್ ಮೇಲೆ ಸಿದ್ದರಾಮಯ್ಯ ಗರಂ

ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ವಿಧಾನಸೌಧ ಡಿಸಿಪಿ ಯೋಗೇಶ್  ಮೇಲೆ ಗರಂ ಆಗಿದ್ದಾರೆ. ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮೆಟ್ಟಿಲು ಇಳಿದು ಬಂದು ಕಾರು ಹತ್ತಲು ಸಿದ್ದರಾಮಯ್ಯ ತೆರಳಿದ್ದರು. ಆದರೆ, ಕೆಂಗಲ್ ದ್ವಾರದ ಬಳಿ ನಿಲ್ಲಿಸಿದ್ದ ಅವರ ಕಾರನ್ನು ಡಿಸಿಪಿ ಯೋಗೇಶ್ ಅಲ್ಲಿಂದ ತೆಗೆಸಿ ಪಾರ್ಕಿಂಗ್‌ಗೆ ಕಳುಹಿಸಿದ್ದರು. ಹೀಗಾಗಿ ಕೆಂಗಲ್ ದ್ವಾರದ ಬಳಿ ಸಿದ್ದರಾಮಯ್ಯ ಕಾರಿಗಾಗಿ ಕಾಯಬೇಕಾಗಿತ್ತು.  ಕಾರು ಅಲ್ಲಿಲ್ಲದಿರುವುದನ್ನು ಕಂಡು …

Read More »

ಹಿಂಸೆ ತಡೆಯೋಕಾಗ್ತಿಲ್ಲ, ಒಂದು ತೊಟ್ಟು ವಿಷ ಕೊಡಿ ಅಂತಾರೆ – ಪವಿತ್ರಾಗೌಡ ಪರ ವಕೀಲರ ಪ್ರಬಲ ವಾದ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್‌  ಕೋರ್ಟ್‌ನಲ್ಲಿ ನಡೆಯುತ್ತಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದು, ಬಳಿಕ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ವಾದ ಆರಂಭಿಸಿದ್ದಾರೆ. ಪವಿತ್ರಾಗೌಡ ಪರ ಬಾಲನ್ ವಾದ ಪವಿತ್ರಾಗೌಡ  ಮಹಿಳೆಯಾಗಿದ್ದು, ಮಗಳ ಆರೈಕೆ ಮಾಡಬೇಕಿರುವ ಹಿನ್ನೆಲೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಬಾಲನ್ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ …

Read More »

ಕೊಡಗಿನಲ್ಲಿ ಮಳೆ ಕೊರತೆ – ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಭಕ್ತರಲ್ಲಿ ಆತಂಕಕೊಡಗಿನಲ್ಲಿ ಮಳೆ ಕೊರತೆ – ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಭಕ್ತರಲ್ಲಿ ಆತಂಕ

ಮಡಿಕೇರಿ: ಕೊಡಗು  ಜಿಲ್ಲೆಯಲ್ಲಿ ಈ ಬಾರಿ ಮಳೆಯ  ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಜಲಮೂಲಗಳ ಮೇಲೂ ಆಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿಯುತ್ತಿದ್ದ ಭಾಗಮಂಡಲದ  ಪವಿತ್ರ ತ್ರಿವೇಣಿ ಸಂಗಮದಲ್ಲೇ  ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇನ್ನು ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗಮಂಡಲಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ನಾನ ಹಾಗೂ …

Read More »

ಬಿಹಾರದಲ್ಲಿ ಅಪ್ರಾಪ್ತರ ಮೇಲೆ ಹಲ್ಲೆ – ಮೂವರು ಅರೆಸ್ಟ್‌

ಪಾಟ್ನಾ: ಬಿಹಾರದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲಿನ ಹಲ್ಲೆ ಹಾಗೂ ಲೈಂಗಿಕ ಕಿರುಕುಳದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19 ರಂದು ಬಿಹಾರದ ಜಮುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 10ನೇ ತರಗತಿಯ ಅಪ್ರಾಪ್ತ ಜೋಡಿ ಕೋಚಿಂಗ್  ಕ್ಲಾಸ್ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಪುಂಡರ ಗುಂಪೊಂದು ಅವರನ್ನು ರಸ್ತೆಯಲ್ಲೇ ತಡೆದಿದೆ. ಗುಂಪು ಬಾಲಕನ …

Read More »