Breaking News

ಸಕ್ಕರೆ ಮೇಲೆ 50 ರೂ. ಬೆಂಬಲ ಬೆಲೆ ನಿಗದಿ ಮಾಡಿ – ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆಶಿ ಒತ್ತಾಯ

Spread the love

ಬೆಂಗಳೂರು: ಸಕ್ಕರೆ ಮೇಲೆ 50 ರೂ. MSP (ಕನಿಷ್ಠ ಬೆಂಬಲ ಬೆಲೆ) ದರ ನಿಗದಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆ ಶಿವಕುಮಾರ್  ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಹೋರಾಟ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ ಸಿಎಂ, ಕೇಂದ್ರ ಸರ್ಕಾರದಿಂದ ಕಬ್ಬಿಗೆ ದರ ಫಿಕ್ಸ್ ಮಾಡ್ತೇವೆ ಎಂದು ಜೋಶಿ ಅವರು ಮಾತು ಕೊಟ್ಟಿದ್ದಾರೆ. ಅವರು ಎಷ್ಟು ಫಿಕ್ಸ್ ಮಾಡ್ತಾರೋ ಅದನ್ನು ಪಾಸ್ ಆನ್ ಮಾಡಬೇಕು ಎಂದು ನಮಗೂ ಫ್ಯಾಕ್ಟರಿ ಅವರಿಗೂ ಮಾತುಕತೆ ಆಗಿತ್ತು ಎಂದು ತಿಳಿಸಿದರು.

ರೈತ ಮುಖಂಡರ ಮಧ್ಯದಲ್ಲಿ ಮಾತುಕತೆ ಆಗಿದೆ. ಸಕ್ಕರೆಗೆ ಕನಿಷ್ಟ 50 ರೂಪಾಯಿ ಎಮ್‌ಎಸ್‌ಪಿ ದರ ನಿಗದಿ ಮಾಡಬೇಕು. ಆಗ ಮಾತ್ರ ರೈತರಿಗೆ ಒಳ್ಳೆಯ ಬೆಲೆ ಕೊಡಲು ಸಾಧ್ಯ. 8 ವರ್ಷದಿಂದಲೂ ಸಕ್ಕರೆ ದರ ಜಾಸ್ತಿ ಮಾಡಿಲ್ಲ. ರೈತರನ್ನ ಬದುಕಿಸೋದಕ್ಕಾದ್ರೂ ಸಕ್ಕರೆಗೆ ಬೆಂಬಲ ಬೆಲೆ ಜಾಸ್ತಿ ಮಾಡಬೇಕು. ರೈತರನ್ನ ಉಳಿಸಬೇಕು, ನಾನು ರೈತರ ಪರವಾಗಿ ಇದ್ದೇನೆ. ನಿನ್ನೆ ಪ್ರಧಾನಿಯವರಿಗೂಪತ್ರ ಬರೆದಿದ್ದೇನೆ. ಮುಂದೆ ಕೇಂದ್ರ ಮಂತ್ರಿಗಳನ್ನ ಭೇಟಿ ಮಾಡ್ತೇವೆ ಎಂದರು.

ಇನ್ನು ಹೋರಾಟಗಾರರು ದಯವಿಟ್ಟು ಕಾನೂನು ಕ್ರಮ ಕೈಗೊಳ್ಳಲು ಹೋಗಬಾರದು ಎಂದು ಮನವಿ ಮಾಡಿದ ಸಿಎಂ, ಕೈಗಾರಿಕೆಗಳು ಕಬ್ಬು ಅರೆಯುವುದನ್ನು ಪ್ರಾರಂಭಿಸಬೇಕು. ರೈತರಿಗೆ ತೊಂದರೆ ಮಾಡೋದು ಬೇಡ. ಕಳೆದ ಸೆಪ್ಟೆಂಬರ್ ನಲ್ಲಿ ಕಬ್ಬು ಅರೆಯಿರಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆಗ ಜ್ಯೂಸ್ ಕಡಿಮೆ ಆಗುತ್ತೆ ಕಬ್ಬು ಬಲಿತಿರಲ್ಲ ಅಂತ ಕಾರ್ಖಾನೆಗಳು ಹೇಳಿದ್ವು. ಇನ್ನು ವಿಳಂಬ .ಅಡೋದು ಬೇಡ. ನಾನು ರೈತ ಮುಖಂಡರಿಗೆ ಮನವಿ ಮಾಡ್ತೇನೆ. ಅವತ್ತು ಏನು ಮಾತು ಆಗಿತ್ತು ಅದರಂತೆ ನೀವು ನಡೆದುಕೊಳ್ಳಬೇಕು. ಕೇಂದ್ರದ ತೀರ್ಮಾನದಂತೆ ಫ್ಯಾಕ್ಟರಿಯವರಿಂದ ದರ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಇದೇವೇಳೆ ಸಿಎಂ ತಿಳಿಸಿದ್ರು.


Spread the love

About Laxminews 24x7

Check Also

Special: ಕನ್ನಡವೇ ನಮ್ಮ ಉಸಿರು, ಕರ್ನಾಟಕವೇ ನಮ್ಮ ಹೆಮ್ಮೆ

Spread the loveನವೆಂಬರ್ 1, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಅತ್ಯಂತ ಹೆಮ್ಮೆಯ, ಅಭಿಮಾನದ ಹಾಗೂ ಸಂಭ್ರಮದ ದಿನ. ಕನ್ನಡ ನಾಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ