Breaking News

ಬರದ ನಡುವೆ ಕೇಂದ್ರದಿಂದ ಬಂಪರ್‌ ಕೊಡುಗೆ – ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು ಬಿಡುಗಡೆ

Spread the love

ನವದೆಹಲಿ: ಬರದ ನಡುವೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ. ಹೌದು. ಕೇಂದ್ರ ಸರ್ಕಾರವು ಶನಿವಾರ (ಇಂದು) ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿಯಾಗಿ 1.09 ಲಕ್ಷ ಕೋಟಿ ರೂ.ಗೂ ಅಧಿಕ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು ಬಿಡುಗಡೆ ಮಾಡಿದೆ.

ಇದು ರಾಜ್ಯಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ನೀಡುವ ತೆರಿಗೆ ಪಾಲಿನ ಜೊತೆಗೆ ಬಿಡುಗಡೆಯಾಗಿರುವ ಹೆಚ್ಚುವರಿ ಮೊತ್ತವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2ನೇ ಬಾರಿಗೆ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆಯ ಅನ್ವಯ, ರಾಜ್ಯ ಸರ್ಕಾರಗಳಿಗೆ ಒಟ್ಟು 1,09,019 ಕೋಟಿ ರೂ. ತೆರಿಗೆ ಪಾಲನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವೆಚ್ಚಗಳನ್ನ ಭರಿಸಲು ಅನುಕೂಲವಾಗುವಂತೆ ಈ ಹೆಚ್ಚುವರಿ ಮೊತ್ತವನ್ನ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಹಂಚಿಕೆ?

1. ಉತ್ತರ ಪ್ರದೇಶ – 19,208 ಕೋಟಿ ರೂ.
2. ಬಿಹಾರ – 10,845 ಕೋಟಿ ರೂ.
3. ಮಧ್ಯಪ್ರದೇಶ – 8,010 ಕೋಟಿ ರೂ.
4. ಪಶ್ಚಿಮ ಬಂಗಾಳ – 7,866 ಕೋಟಿ ರೂ.
5. ಮಹಾರಾಷ್ಟ್ರ – 7,022 ಕೋಟಿ ರೂ.
6. ರಾಜಸ್ಥಾನ – 6,460 ಕೋಟಿ ರೂ.
7. ಒಡಿಶಾ – 4,819 ಕೋಟಿ ರೂ.
8. ಆಂಧ್ರಪ್ರದೇಶ – 4,597 ಕೋಟಿ ರೂ.
9. ಕರ್ನಾಟಕ – 4,504 ಕೋಟಿ ರೂ.
10. ತಮಿಳುನಾಡು – 4,466 ಕೋಟಿ ರೂ.
11. ಗುಜರಾತ್ – 4,094 ಕೋಟಿ ರೂ.
12. ಜಾರ್ಖಂಡ್ – 3,660 ಕೋಟಿ ರೂ.
13. ಛತ್ತೀಸ್‌ಗಢ – 3,602 ಕೋಟಿ ರೂ.
14. ಅಸ್ಸಾಂ – 3,552 ಕೋಟಿ ರೂ.
15. ಕೇರಳ – 2,597 ಕೋಟಿ ರೂ.
16. ತೆಲಂಗಾಣ – 2,370 ಕೋಟಿ ರೂ.
17. ಪಂಜಾಬ್ – 2,176 ಕೋಟಿ ರೂ.
18. ಹರಿಯಾಣ – 1,484 ಕೋಟಿ ರೂ.
19. ಅರುಣಾಚಲ ಪ್ರದೇಶ – 1,476 ಕೋಟಿ ರೂ.
20. ಉತ್ತರಾಖಂಡ – 1,244 ಕೋಟಿ ರೂ.

ಪ್ರಸ್ತುತ, ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ.41 ರಷ್ಟನ್ನು ಒಂದು ಹಣಕಾಸು ವರ್ಷದಲ್ಲಿ 14 ಕಂತುಗಳ ಮೂಲಕ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ.


Spread the love

About Laxminews 24x7

Check Also

Special: ಕನ್ನಡವೇ ನಮ್ಮ ಉಸಿರು, ಕರ್ನಾಟಕವೇ ನಮ್ಮ ಹೆಮ್ಮೆ

Spread the loveನವೆಂಬರ್ 1, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಅತ್ಯಂತ ಹೆಮ್ಮೆಯ, ಅಭಿಮಾನದ ಹಾಗೂ ಸಂಭ್ರಮದ ದಿನ. ಕನ್ನಡ ನಾಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ