Breaking News

ಐದೇ ದಿನಗಳಲ್ಲಿ ATM ದರೋಡೆ ಖದೀಮರು ಅರೆಸ್ಟ್ – ಸಿಸಿಟಿವಿ ದೃಶ್ಯಗಳ ಮೂಲಕ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು

Spread the love

ಬೀದರ್: 5 ದಿನದಲ್ಲೇ ಸಿಸಿಟಿವಿ ದೃಶ್ಯಗಳ ಮೂಲಕ ಎಸ್‌ಬಿಐ ಬ್ಯಾಂಕ್  ಎಟಿಎಂ ದರೋಡೆ ಮಾಡಿದ್ದ ಅಂತರ್ ರಾಜ್ಯ ಖದೀಮರನ್ನು ಕೊನೆಗೂ ಬೀದರ್ ಪೊಲೀಸರು  ಭರ್ಜರಿ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ, ಹೈದ್ರಾಬಾದ್‌ನ  ಶಾಹಿನ್ ನಗರದಲ್ಲಿ ನಾಲ್ಕು ಜನ ಖದೀಮರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಮೂವರು ಹರಿಯಾಣ, ಓರ್ವ ರಾಜಸ್ಥಾನ ಮೂಲದ ಖದೀಮರಾಗಿದ್ದಾರೆ. ಆಸು ಎಂಡಿ ಶೋಹರಬ್ ಖಾನ್, ಆಸೀಪ್ ಚೇತರಖಾನ್, ಅನೀಷ್ ಇಂದ್ರಿಷ್, ರಾಹುಲ್ ಪಾಪುಖಾನ್ ಬಂಧಿತ ದರೋಡೆಕೋರರು ಎಂದು ತಿಳಿದುಬಂದಿದೆ.

ಅ.25ರಂದು ಭಾಲ್ಕಿಯ ಪಟ್ಟಣದ ಹಿರೇಮಠ ಸಂಸ್ಥಾನ ಮಳಿಗೆಯಲ್ಲಿನ ಎಟಿಎಂ ಕಳ್ಳತನ ಮಾಡಿ, ಖದೀಮರು ಪರಾರಿಯಾಗಿದ್ದರು. ಗ್ಯಾಸ್ ಕಟರ್‌ನಿಂದ ಎಸ್‌ಬಿಐ ಎಟಿಎಂ ಕಟ್ ಮಾಡಿ, ಬಳಿಕ ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು ಖದೀಮರು ದರೋಡೆ ಮಾಡಿದ್ದರು. ಒಟ್ಟು 23 ಲಕ್ಷ ರೂ.ಗೂ ಅಧಿಕ ಹಣ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದರು.

ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು 12 ಲಕ್ಷ ಹಣ, ಕೃತ್ಯಕ್ಕೆ ಬಳಿಸಿದ ಮಾಸ್ಕ್, ಮೊಬೈಲ್, ಗ್ಲೌಸ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟರ್, ಕಾರು ಸೇರಿದಂತೆ 32 ಲಕ್ಷ ರೂ. ವಸ್ತುಗಳು ಜಪ್ತಿ ಮಾಡಿದ್ದಾರೆ.

ದರೋಡೆಕೋರ ಬಂಧನಕ್ಕೆ ಎಸ್ಪಿ ಒಂದು ಟೀಂ ರಚನೆ ಮಾಡಿದ್ದು, ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ದರೋಡೆ ಪ್ರಕರಣ ಬೇಧಿಸುವಲ್ಲಿ ಭಾಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

Special: ಕನ್ನಡವೇ ನಮ್ಮ ಉಸಿರು, ಕರ್ನಾಟಕವೇ ನಮ್ಮ ಹೆಮ್ಮೆ

Spread the loveನವೆಂಬರ್ 1, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಅತ್ಯಂತ ಹೆಮ್ಮೆಯ, ಅಭಿಮಾನದ ಹಾಗೂ ಸಂಭ್ರಮದ ದಿನ. ಕನ್ನಡ ನಾಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ