Breaking News

ಜನತಾ ದರುಶನವನ್ನೇ ಮರೆತ ಸಿಎಂ ಬಸವರಾಜ್ ಬೊಮ್ಮಾಯಿ: ಮುಖ್ಯಮಂತ್ರಿ ನಡೆ ವಿರುದ್ದ ರೈತರ ಆಕ್ರೋಶ

Spread the love

ಬೆಂಗಳೂರು: ಸಿಎಂ ಆಗಿ ಒಂದು ವಾರ ಕಳೆದರೂ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಸಿಎಂ ಬಸವರಾಜ ಬೊಮ್ಮಾಯಿ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲವೆಂದು ಆರ್ ಟಿ ನಗರದ ನಿವಾಸದ ಬಳಿ ಬೊಮ್ಮಾಯಿ ನಡೆ ವಿರುದ್ದ ರೈತರು ಆಕ್ರೋಶಗೊಂಡಿದ್ದಾರೆ. ಸಿಎಂ ಭೇಟಿ ಸಾಧ್ಯವಾಗದೇ ಇರುವುದಕ್ಕೆ ಕೋಪಗೊಂಡ ರೈತರು, ನಾವು ಎಲ್ಲೆಲ್ಲಿಂದಲೂ ಇಲ್ಲಿಗೆ ಬಂದಿದೇವೆ, ಆದರೆ ಮುಖ್ಯಮಂತ್ರಿಗಳು ನಮ್ಮ ಅಹವಾಲು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

ಇವರು ಈ ರೀತಿ ಮಾಡಿದ್ರೆ ನಾವು ಎಲ್ಲಿಗೆ ಹೋಗಬೇಕು, ನಾವು ಮನೆ ಬಳಿ ಮೂರು ದಿನಗಳಿಂದಲೂ ಬರ್ತಿದ್ದೇವೆ, ಆದರೆ ಸಿಎಂ ಮಾತ್ರ ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಸಿಎಂ ಮನೆಯ ಭದ್ರತಾ ಸಿಬ್ಬಂದಿ ಮೇಲೆ ಕಿಡಿಕಾರಿದ್ದಾರೆ. ಇನ್ನೂ ಸಿಎಂ ಅವರ ಪಿಎ ಟೈಮ್ ಕೊಟ್ಟ ಮೇಲೆ ಮತ್ತೆ ನಾವು 600 ಕಿಲೋ ಮೀಟರ್ ನಿಂದ ಬರಬೇಕಾ ಎಂದು ಸಿಎಂ ಬೊಮ್ಮಾಯಿಗೆ ರೈತರು ಬಿಸಿ ಮುಟ್ಟಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ