Breaking News
Home / 2021 / ಜೂನ್ / 23 (page 2)

Daily Archives: ಜೂನ್ 23, 2021

ಸಿಡಿ ಬಹಿರಂಗ ಕೇಸ್; ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದೇನು?

ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಸಂತ್ರಸ್ತ ಯುವತಿಯೊಂದಿಗೆ ಮಾತನಾಡಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಡಿ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಂದಿಗೆ ಮಾತನಾಡಿದ್ದೇನೆ. ಏನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರುವಂತೆ ಹೇಳಿದ್ದೇನೆ. ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ ಎಂದರು. ಸದ್ಯ ಸಿಡಿ ಬಹಿರಂಗ ಕೇಸ್ …

Read More »

ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯ ಯುವತಿಗೆ ಬಂಧನ ಭೀತಿ ಶುರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸಿಡಿ ಯುವತಿಗೆ ಬಂಧನ ಭೀತಿ ಶುರುವಾಗಿದೆ. ರಮೇಶ್ ಜಾರಕಿಹೊಳಿ ದೂರು ಆಧರಿಸಿ ಎಸ್ ಐಟಿ ಅಧಿಕಾರಿಗಳು ಯುವತಿಯನ್ನು ಬಂಧಿಸುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಯುವತಿ ಪರ ವಕೀಲ ಸಂಕೇತ್ ಏಣಗಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ದಾಖಲಿಸಿದ್ದರೂ ಕೂಡ ಈವರೆಗೂ ಮಾಜಿ ಸಚಿವರ …

Read More »

ಮರ ಸ್ಥಳಾಂತರದ ವಿವರ ನೀಡಲು ಸೂಚನೆ

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಕಾಮಗಾರಿಗಾಗಿ ಮರಗಳನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ನಿರ್ದಿಷ್ಟ ಸ್ಥಳದ ವಿವರ ಸಲ್ಲಿಸುವಂತೆ ಮರಗಳ ತಜ್ಞರ ಸಮಿತಿಗೆ (ಟಿಇಸಿ) ಹೈಕೋರ್ಟ್‌ ನಿರ್ದೇಶನ ನೀಡಿದೆ. ಟಿಇಸಿ ಕಾರ್ಯನಿರ್ವಹಣೆ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿತು. ‘ಮರಗಳು ಇರುವ ಜಾಗದಿಂದ ಸಮೀಪದ ಸ್ಥಳಗಳನ್ನು ಗುರುತಿಸಿ ಅಂದೇ ಸ್ಥಳಾಂತರ ಮಾಡಬೇಕಾಗುತ್ತದೆ. ನಿರ್ದಿಷ್ಟ ಜಾಗವನ್ನು ಟಿಇಸಿ ಅಂತಿಮಗೊಳಿಸಿದ ಬಳಿಕವೇ ಸ್ಥಳಾಂತರ ಮಾಡಬೇಕು’ ಎಂದು …

Read More »

1.99 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌! ಇ-ಆಡಳಿತ ಇಲಾಖೆಯಿಂದ ಪತ್ತೆ

ಸಿಂಧನೂರು: ನಿರ್ಗತಿಕ ರಿಗೆ ಅಂತ್ಯೋದಯ, ಕಡು ಬಡವರಿಗೆ ಬಿಪಿಎಲ್‌ ಕಾರ್ಡ್‌ ನೀಡಿ ಆಹಾರ ಧಾನ್ಯ ನೀಡುತ್ತಿರುವ ಇಲಾಖೆಯೇ ಆಂತರಿಕ ತಪಾಸಣೆ ವೇಳೆ ಬೆಚ್ಚಿಬಿದ್ದಿದೆ. 7.5 ಎಕರೆಗೂ ಮೇಲ್ಪಟ್ಟು ಜಮೀನು ಹೊಂದಿದವರೂ ಅನ್ನಭಾಗ್ಯಕ್ಕಾಗಿ ಕಡು ಬಡವರ ಪಟ್ಟಿಗೆ ಸೇರಿಕೊಂಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಕೂಡ ಪತ್ತೆಯಾಗಿವೆ. ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿದಾಗ ಆಹಾರ ಇಲಾಖೆಗೆ ಈ ಆಘಾತಕಾರಿ ಸಂಗತಿ ಗೊತ್ತಾಗಿದೆ. …

Read More »

ಸಂಸದೆಮಂಗಳಾ ಅಂಗಡಿಯವರಿಗೆ ಹೊಸ ಜವಾಬ್ದಾರಿ

ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಮಂಗಳಾ ಅಂಗಡಿ ಅವರಿಗೆ ಕೇಂದ್ರ ಸರ್ಕಾರ ಹೊಸ ಜವಾಬ್ದಾರಿ ನೀಡಿದೆ. ಮಂಗಳಾ ಅವರನ್ನು ಹಡಗು ಮತ್ತು ಜಲಮಾರ್ಗ ಸಚಿವಾಲಯ ಸಲಹಾ ಸಮಿತಿಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದ ಮಂಗಳಾ ಅಂಗಡಿಯವರಿಗೆ ಎರಡು ತಿಂಗಳಲ್ಲೇ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ. ಜಯಭೇರಿ ಬಾರಿಸಿದ್ದರು.

Read More »

ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ ಧನಸಹಾಯ: ಸಚಿವೆ ಜೊಲ್ಲೆ

ಧಾರವಾಡ: ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಪ್ರತಿ ಮಕ್ಕಳ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂ.ಗಳನ್ನು ಜಮೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದ ಕಮಲಾಪುರದಲ್ಲಿ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ ನಂತರ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಹುಬ್ಬಳ್ಳಿ- ಧಾರವಾಡದಲ್ಲಿ ಮೂರು ಜನ …

Read More »

ಇಬ್ಬರೂ ಬೇರೆ ಮದುವೆಯಾಗಿದ್ರೂ ಬೆಳೆದ ಅಕ್ರಮ ಸಂಬಂಧ, ನಂತರ ದುಡುಕಿನ ನಿರ್ಧಾರ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ಮಹಿಳೆಯೊಬ್ಬರು ಪ್ರಿಯಕರನ ತೊಡೆಯ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ. ರೇಣುಕಾ(36) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಗಂಗೂರು ಗ್ರಾಮದ ಅಶೋಕ, ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಅಶೋಕ ಕೇರಳಕ್ಕೆ ಕೆಲಸಕ್ಕಾಗಿ ತೆರಳಿದ್ದ. ಈ ವೇಳೆ ಆತನ ಸ್ನೇಹಿತ ಹಡಲಗೇರಿ ಗ್ರಾಮದ ಬಸವರಾಜ ರೇಣುಕ ಜೊತೆಗೆ ಸಂಬಂಧ ಬೆಳೆಸಿದ್ದಾನೆ. ಬಸವರಾಜನಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಅದೇನಾಯ್ತೋ ರೇಣುಕಾ ಮತ್ತು ಬಸವರಾಜ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, …

Read More »

ಅನುಪ ಮಂಡಲ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಜೈನ ಸಮಾಜದ ಮನವಿ

ಬೆಳಗಾವಿ,.ಜು.23: ರಾಜಸ್ಥಾನ ಮೂಲದ ಅನುಪ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಜೈನ ಧರ್ಮ ಮತ್ತು ಜೈನ ಸಮಾಜದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದು, ಈ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿ ಇಂದು ಬುಧವಾರ ವಿವಿಧ ಜೈನ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಅನುಪ ಮಂಡಲ ಸಂಘಟನೆಯು ಜೈನ ಧರ್ಮ ಮತ್ತು ಜೈನ ಸಮಾಜ ಕುರಿತಂತೆ ಅಪಪ್ರಚಾರ ಮಾಡುತ್ತಿದೆ. ಜೈನ ಸಾಧು ಸಾಧ್ವಿಗಳ ವಿರುದ್ದ ಇಲ್ಲ …

Read More »

ದೊಡ್ಡ ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ: ಸಚಿವ ನಿರಾಣಿ

ಕಲಬುರಗಿ: ಒಂದು ಕುಟುಂಬ ಎಂದ ಮೇಲೆ ಅಸಮಾಧಾನ ಇರುತ್ತದೆ. ಅದರಲ್ಲೂ ಬಿಜೆಪಿ ದೊಡ್ಡ ಕುಟುಂಬ. ಇಬ್ಬರು-ಮೂರು ಶಾಸಕರಿಗೆ ಅಸಮಾಧಾನ ಇರುವುದು ಸಾಮಾನ್ಯ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮುಂಬೈ ಭೇಟಿ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲೂ ನಾನು ಹೋಗಲ್ಲ. ನಮ್ಮ‌ ಹೈಕಮಾಂಡ್ ಸಮರ್ಥವಾಗಿದೆ. ಯಾವುದೇ ಸಮಸ್ಯೆ ಇದ್ದರೂ ಪರಿಹರಿಸುವ ಕೆಲಸ ಮಾಡುತ್ತಿದೆ ಎಂದರು. ಇತ್ತೀಚಿನ ಬೆಳವಣಿಗೆಗಳ …

Read More »

ಆಕೆ’ಗೆ ತಾಳಿ- ‘ಈಕೆ’ಗೆ ತಾಳಿ ಭರವಸೆ: ಶ್ರೀಮಂತನ ಠಾಣೆಗೆ ಬಂದಳು ಪ್ರಿಯತಮೆ…!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಠಾಣೆಗಳಲ್ಲಿ ಪೊಲೀಸರ ಪ್ರೇಮ ಪ್ರಕರಣಗಳು ಅವರದ್ದೆ ಠಾಣೆಯ ಮೆಟ್ಟಿಲೇರನ್ನೇರುತ್ತಿರುವುದು ಕಂಡು ಬರುತ್ತಿದೆ. ಶಂಭೋ ಶಂಭೋ ಪೊಲೀಸಪ್ಪನ ಪ್ರಿಯತಮೆ ಠಾಣೆಗೆ ಬಂದು ಹೋಗಿದ್ದು, ಇನ್ನೂ ಹಸಿರಿರುವಾಗಲೇ ಮತ್ತೊಂದು ಠಾಣೆಯಲ್ಲಿ ಇಂತಹದ್ದೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ತನ್ನ ಹೆಸರಿನಲ್ಲೇ ‘ಶ್ರೀಮಂತ’ ಎಂದು ಕೊಳ್ಳುವ ಆಸಾಮಿಯೇ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಆಗಾಗ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ, ಆಕೆಯೊಂದಿಗೆ ಎಲ್ಲವನ್ನೂ ಮುಗಿಸಿ, ಈಗ ಕೈ ತೊಳೆದುಕೊಳ್ಳಲು ಮುಂದಾಗಿದ್ದಾನಂತೆ. ಈ ವಿಷಯ ಗೊತ್ತಾದ …

Read More »