Breaking News

ಶಿವಸೇನೆ ಬಿಜೆಪಿಗೆ ಕೈಕೊಟ್ಟು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಕೈಜೋಡಿಸಿತ್ತು.

ಮುಂಬೈ : ಶಿವಸೇನೆ ನೇತೃತ್ವದ ಕಾಂಗ್ರೆಸ್‌, ಎನ್‌ಸಿಪಿ ಸರ್ಕಾರ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ. ಈಗ ಆಡಳಿತದಲ್ಲಿರುವ ಮೂರೂ ಪಕ್ಷಗಳು ವಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಬಂದಿತ್ತು. ಆದರೆ ನಮಗೆ ಮೋಸ ಮಾಡಲಾಯಿತು. ಈ ಸರ್ಕಾರವನ್ನು ಕೆಳಗಿಳಿಸುತ್ತೇವೆ. ಮಾಜಿ …

Read More »

ರಾಜ್ಯ ಸರ್ಕಾರವು ತಂಬಾಕು ನಿಷೇಧದ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಾರದೊಳಗೆ ತಂಬಾಕು ಉತ್ಪನ್ನಗಳ ನಿಷೇಧದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

ಬೆಂಗಳೂರು : ರಾಜ್ಯ ಸರ್ಕಾರವು ತಂಬಾಕು ನಿಷೇಧದ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಾರದೊಳಗೆ ತಂಬಾಕು ಉತ್ಪನ್ನಗಳ ನಿಷೇಧದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. ರಾಜ್ಯದಲ್ಲಿ ತಂಬಾಕು, ಗುಟ್ಕಾ ಹಾಗೂ ಇನ್ನಿತರ ಉತ್ಪನ್ನಗಳ ನಿಷೇಧದ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ರಾಜ್ಯಪಾಲರು ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿದ …

Read More »

ಕೊರೊನಾ ಸೋಂಕಿನಿಂದ.. ಬರುತ್ತಿದೆ ದೃಷ್ಟಿ ದೋಷ!

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಬಳಿಕ ದೃಷ್ಟಿ ದೋಷ ಉಂಟಾಗುತ್ತದೆ ಎಂಬ ಮತ್ತೊಂಧು ಆಘಾತಕಾರಿ ಮಾಃಇತಿ ಕೇಳಿಬಂದಿದೆ. ಕೊರೊನಾ ವೈರಸ್​​ನಿಂದ ಕಣ್ಣಿನ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಕೊರೊನಾ ಸೋಂಕಿನಿಂದ ಕಣ್ಣಿನ ರಕ್ತನಾಳದಲ್ಲಿ ಸೋರಿಕೆಯಾಗುತ್ತದೆ. ಆರ್ಟರಿಸ್ ಭಾಗದಲ್ಲಿ ರಕ್ತ ಬ್ಲಾಕ್ ಆದ್ರೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ ಎಂದು ತಿಳಿದುಬಂದಿದೆ. ಇಷ್ಟು ದಿನ ಕೊರೊನಾ ವೈರಸ್ ಬಂದವರಿಗೆ ದೇಹ, ಹೃದಯ, ಉಸಿರಾಟಕ್ಕೆ ತೊಂದರೆ ಆಗುತ್ತೆ ಅಂತಾ ಮಾಹಿತಿ ಇತ್ತು. ಇದೀಗ ಕೊರೊನಾ ವೈರಸ್ ಜನ್ರ …

Read More »

ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ಕನಸು ಕಂಡ ಶಾಸಕ ಸತೀಶ!

  ಬೆಳಗಾವಿ: ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಕೂಡ ಮುಂದೆ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಖಾಸಗಿ ಮಾಧ್ಯಮದವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಸದ್ಯ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ಮೂರು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅದೇ ರೀತಿ ನನ್ನ ಮಕ್ಕಳು ಕೂಡ ರಾಜಕೀಯ, ಸಾಮಾಜಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ. ಪುತ್ರ, ಪುತ್ರಿ ಸದ್ಯ …

Read More »

ಬಿಹಾರ ಮಾಜಿ CM ಲಾಲೂ ಪ್ರಸಾದ್ ಯಾದವ್‌ಗೆ ಸಿಕ್ತು ಜಾಮೀನು..

ಪಾಟ್ನಾ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್‌ಗೆ ಜಾಮೀನು ಸಕ್ಕಿದೆ. ಜಾರ್ಖಂಡ್‌ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದ್ದು ಮೇವು ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಲಾಲೂಗೆ ಇದೀಗ ಕೊಂಚ ರಿಲೀಫ್​ ದೊರೆತಿದೆ. RJD ನಾಯಕ ಹಾಗೂ ಬಿಹಾರ ಮಾಹಿ ಸಿಎಂ ಲಾಲೂ ಪ್ರಸಾದ್ ಯಾದವ್​ಗೆ ಚೈಬಾಸಾ ಖಜಾನೆ ಹಗರಣದಲ್ಲಿ ಜಾಮೀನು ಮಂಜೂರಾಗಿದೆ. ಆದರೆ, ಸದ್ಯಕ್ಕೆ ಲಾಲೂ ಪ್ರಸಾದ್ ಜೈಲಿನಿಂದ ಬಿಡುಗಡೆ ಆಗಲ್ಲ. ಏಕೆಂದರೆ, ಅವರ ವಿರುದ್ಧ ಧುಮ್ಕಾ ಖಜಾನೆ ಕೇಸ್​ ಪ್ರಕರಣವಿದ್ದು …

Read More »

ಮಾದಕ’ ನಟಿ ಸಂಜನಾ ಜೈಲಿನಲ್ಲಿ ಬರ್ತ್​ಡೇ ಅಚರಿಸಿಕೊಳ್ಳುತ್ತಿಲ್ಲ, ಯಾಕೆ ಗೊತ್ತಾ?

ಆನೇಕಲ್: ಸ್ಯಾಂಡಲ್ವುಡ್ ಡ್ರಸ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾದಕ ನಟಿ ಸಂಜನಾ ಗಲ್ರಾನಿ ನಾಳೆ ಜೈಲಿನಲ್ಲಿಯೇ ಹುಟ್ಟುಹಬ್ಬ ಅಚರಿಸಿಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಆ ಅವಕಾಶ ಅವರ ಕೈತಪ್ಪಿದೆ. ಸಂಜನಾ ಗಲ್ರಾನಿ ಬರ್ತ್​ಡೇಗೆ ಜೈಲಿನಲ್ಲಿ ಅವಕಾಶ ನಿರಾಕರಿಸಲಾಗಿದೆ. ಸಂಜನಾ ಮತ್ತು ರಾಗಿಣಿ ದ್ವಿವೇದಿ ಸದ್ಯ ಜೈಲಿನ ಒಂದೇ ಕೊಠಡಿಯಲ್ಲಿದ್ದಾರೆ. ಅಕ್ಟೋಬರ್ 10ರಂದು ಬರ್ತ್​ಡೇ ಆಚರಣೆಗೆ ಮನವಿಯನ್ನೂ ಸಲ್ಲಿಸಿದ್ದರು. ಇನ್ನು ಅವರ ಪೋಷಕರು ಮನೆಯಿಂದ ಮೂರು ಜೊತೆ …

Read More »

ದಲಿತ ವಿರೋಧಿ ನೀತಿಗಳು ಹೆಚ್ಚಾಗುತ್ತಿದ್ದು ಇದನ್ನು ವಿರೋಧಿಸಿ ಶೀಘ್ರದಲ್ಲೆ ಬೃಹತ್ ತಮಟೆ ಚಳವಳಿ ನಡೆಸಲಾಗುವುದು

ದೇವನಹಳ್ಳಿ: ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ದಲಿತ ವಿರೋಧಿ ನೀತಿಗಳು ಹೆಚ್ಚಾಗುತ್ತಿದ್ದು ಇದನ್ನು ವಿರೋಧಿಸಿ ಶೀಘ್ರದಲ್ಲೆ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ತಿಳಿಸಿದರು. ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ವಿವಿಧ ಸಂಘಟನೆಗಳಿಂದ ಸೇರ್ಪಡೆಗೊಂಡ ನೂತನ ಮುಖಂಡರನ್ನು ಸಮಿತಿಗೆ ಸೇರ್ಪಡೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದರು. ’40 ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ …

Read More »

ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ನಂತರ ಮಂಕಾಗಿದೆ.

ಶಾರ್ಜಾ: ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ನಂತರ ಮಂಕಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ತನ್ನ ನೆಚ್ಚಿನ ಶಾರ್ಜಾ ಕ್ರೀಡಾಂಗಣದಲ್ಲಿ ಶುಕ್ರವಾರ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಮತ್ತೆ ಜಯದ ಹಾದಿಗೆ ಮರಳುವ ಕನಸು ಕಾಣುತ್ತಿದೆ. ಆರಂಭದಲ್ಲಿ ಇಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿಯೂ ರಾಯಲ್ಸ್‌ ಗೆದ್ದಿತ್ತು.ಇಲ್ಲಿಗಿಂತ ತುಸು ದೊಡ್ಡ ಬೌಂಡರಿ ಹೊಂದಿರುವ ದುಬೈ ಮತ್ತು ಅಬುಧಾಬಿಯಲ್ಲಿ ಸ್ಮಿತ್ ಬಳಗವು ಪರದಾಡಿತ್ತು. ಆದರೆ ಅಂಕಪಟ್ಟಿಯಲ್ಲಿ …

Read More »

ಧಾರವಾಡ ಉಸ್ತುವಾರಿ ಸಚಿವರೇ ಹೇಳಿದ್ರೂ ನಿಲ್ಲದ ಖಾಕಿ ಒಳಜಗಳ!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ರೂ ಉನ್ನತ ಖಾಕಿ ಅಧಿಕಾರಿಗಳ ನಡುವಣ ಒಳಜಗಳ ನಿಲ್ಲುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಒಳಜಗಳ ಮುಂದುವರಿದಿದೆ. ಮತ್ತೆ ಡಿಸಿಪಿಗೆ ನೋಟಿಸ್ ನೀಡಿದ ಕಮಿಷನರ್ ದಿಲೀಪ್! ಭ್ರಷ್ಟಾಚಾರ ಆರೋಪ ಮಾಡಿ ಯುಟರ್ನ್ ತೆಗೆದುಕೊಂಡಿದ್ಯಾಕೆ? ನೀವು ಮತ್ತೋರ್ವ ಡಿಸಿಪಿ ವಿರುದ್ಧವೂ ಆರೋಪ ಮಾಡಿದ್ದೀರಿ. ಇನ್ನೂ ಕೆಲವು ಅಧಿಕಾರಿಗಳ ವಿರುದ್ಧವೂ ಆರೋಪಿಸಿ ಸುಮ್ಮನಿದ್ದೀರಿ. ಹಾಗಾಗಿ, ಆ ಬಗ್ಗೆ ವರದಿ ನೀಡುವಂತೆ ನಿಮಗೆ …

Read More »

ವಿದ್ಯಾಗಮ ಬದಲು ಕೊರೊನಾ ಬಂತು.. ವಠಾರ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಸೋಂಕು

ಕಲಬುರಗಿ: ಶಾಲೆ ಓಪನ್​ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದ ರಾಜ್ಯ ಸರ್ಕಾರ ಮತ್ತ ಪೋಷಕರಿಗೆ ಈ ಸುದ್ದಿ ಆಘಾತ ತಂದೊಡ್ಡಿದೆ. ಯಾಕಂದ್ರೆ, ವಠಾರ ಶಾಲೆಗೆ ಹೋಗಿದ್ದ 4 ಮಕ್ಕಳಿಗೆ ಕೊರೊನಾ ದೃಢವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ್ ಗ್ರಾಮದಲ್ಲಿ ನಡೆದಿದೆ. ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯನ್ನು ಪ್ರಾರಂಭಿಸಿದ್ದು ಸುಮಾರು 250 ಮಕ್ಕಳು ಶಾಲೆಗೆ ಬರುತ್ತಿದ್ದರು ಎಂದು ಹೇಳಲಾಗಿದೆ. ಈ ಹಿಂದೆ ಶಾಲೆಯ ಮುಖ್ಯ ಶಿಕ್ಷಕನಿಗೆ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ …

Read More »