Breaking News

ಜನಧನದಿಂದ ಬಡತನ ನೀಗಲು ಯತ್ನ: ಯೋಜನೆ ಆರು ವರ್ಷ ಪೂರೈಸಿದ್ದಕ್ಕೆ ಮೋದಿ ಹರ್ಷ

Spread the love

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ‘ಜನ ಧನ’ ಯೋಜನೆ ಬಡತನ ನಿವಾರಣೆಯ ಪ್ರಯತ್ನ.

ಅದೊಂದು ದೂರಗಾಮಿ ಬದಲಾವಣೆ ತರುವಂಥದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿಯವರು ಘೋಷಣೆ ಮಾಡಿರುವ ಯೋಜನೆಗೆ ಆರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮಾ

‘ಶುಕ್ರವಾರಕ್ಕೆ ಜನಧನ ಯೋಜನೆ ಜಾರಿಯಾಗಿ ಆರು ವರ್ಷಗಳು ಪೂರ್ತಿಯಾದವು.

ಬ್ಯಾಂಕಿಂಗ್‌ ವ್ಯವಸ್ಥೆ ಹೊಂದಿಲ್ಲದವರಿಗೆ ಅದನ್ನು ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿತ್ತು.
ಇದರಿಂದಾಗಿ ಧನ್ಮಾತ್ಮಕವಾದ ಬದಲಾಣೆಗಳು ಉಂಟಾಗಿವೆ. ಕೋಟ್ಯಂತರ ಮಂದಿಗೆ ಅನುಕೂಲವಾಗುವುದರ ಜತೆಗೆ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿಯೂ ಉತ್ತಮ ಹೆಜ್ಜೆಯನ್ನಿಟ್ಟಂತಾಗಿದೆ’ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

17.90 ಕೋಟಿ ಖಾತೆ: 2015ರ ಆಗಸ್ಟ್‌ನಲ್ಲಿ ದೇಶಾದ್ಯಂತ 17.90 ಕೋಟಿ ಖಾತೆಗಳು ಇದ್ದವು. ಹಾಲಿ ತಿಂಗಳಲ್ಲಿ ಖಾತೆಗಳ ಜಂಖ್ಯೆ 40.35 ಕೋಟಿಗಳಿಗೆ ಏರಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಮಂತ್ರಿ ಜನ ಧನ ಯೋಜನೆಯಿಂದಾಗಿ ಹಲವು ಕುಟುಂಬಗಳ ಆರ್ಥಿಕ ಭವಿಷ್ಯ ಸುಭದ್ರವಾಗಿದೆ. ಶೇ.63ರಷ್ಟು ಜನ ಫ‌ಲಾನುಭವಿಗಳು ಗ್ರಾಮೀಣ ಪ್ರದೇಶದವರು. ಶೇ.55ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ನಗರ ಪ್ರದೇಶಗಳಲ್ಲಿ ಶೇ.36.4ರಷ್ಟು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ಪ್ರಧಾನಿಯವರು ಬರೆದುಕೊಂಡಿದ್ದಾರೆ.

ಪ್ರಯೋಜನವೇನು?
– ಮೈಕ್ರೋ ಪಿಂಚಣಿ, ವಿಮೆ

– 2 ಲಕ್ಷ ರೂ.ವರೆಗೆ ಅಪಘಾತ ವಿಮೆ

– ಡೆಬಿಟ್‌ ಕಾರ್ಡ್‌

– ಶೂನ್ಯ ಠೇವಣಿ ಇರುವ ಉಳಿತಾಯ ಖಾತೆ


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ