Breaking News

ನದಾಫ್‌ ಜೊತೆ ಪ್ರೀತಿ – ಮನೆಯಲ್ಲೇ ಭೂಮಿಕಾ ಆತ್ಮಹತ್ಯೆ.!

Spread the love

ಬಾಗಲಕೋಟೆ: ಮುಸ್ಲಿಮ್‌ ಯುವಕನನ್ನು ಪ್ರೀತಿ ಮಾಡುತ್ತಿದ್ದ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆಯ ಸೆಕ್ಟರ್ ನಂಬರ್ 48ರಲ್ಲಿ ನಡೆದಿದೆ.

ಭೂಮಿಕಾ ತಿಪ್ಪಣ್ಣವರ್ (19) ಆತ್ಮಹತ್ಯೆಗೆ ಶರಣಾದ ಯುವತಿ. ಭೂಮಿಕಾ (Bhumika) ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಟಯರ್‌ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್‌ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು.

ಭೂಮಿಕಾ ಪೋಷಕರು ನದಾಫ್‌ಗೆ ಸಾಕಷ್ಟು ಬಾರಿ ಮನೆ ಬಂದು ಮಾತನಾಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ್ದರೂ ಆತ ಮನೆಗೆ ಬಂದು ಮಾತನಾಡುತ್ತಿದ್ದ. ಏಕೈಕ ಮಗಳಾಗಿದ್ದ ಕಾರಣ ಪುತ್ರಿಗೆ ಆತನ ಸ್ನೇಹವನ್ನು ಬಿಡುವಂತೆ ಪೋಷಕರು ಬುದ್ಧಿವಾದ ಹೇಳಿದ್ದರು.

ಇಂದು ಭೂಮಿಕಾ ಮನೆಯ ಮೇಲ್ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ರಿ ಸಾವಿಗೆ ನದಾಫ್‌ ಕಾರಣ ಎಂದು ಭೂಮಿಕಾ ಪೋಷಕರು ಆರೋಪಿಸಿದ್ದಾರೆ.

ನವನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್‌ಪಿ ಸಿದ್ದಾರ್ಥ ಗೋಯೆಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಜಗತ್ತಿನ ಹಸಿವು ತಣಿಸುವ ಅನ್ನದಾತನಿಗೆ ಸರ್ಕಾರದ ಅಸಡ್ಡೆ; ಹೋರಾಟಕ್ಕಿಳಿದ ರೈತ ಸಂಘ

Spread the loveಬಿಸಿಲು ಮಳೆ ಎನ್ನದೇ ತನ್ನ ಜಮೀನಿನಲ್ಲಿ ಶ್ರಮವಹಿಸಿ ಜಗತ್ತಿನ ಹಸಿವು ತಣಿಸುವ ಕಾಯಕ ಅನ್ನದಾತನದ್ದು.‌ ಆದ್ರೆ ಅನ್ನದಾತನಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ