Breaking News

ಬೆಳಗಾವಿ ನ್ಯಾಯಾಲದ ಮುಂದೆ ಮಾಧ್ಯಮಗಳ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಎಫ್ಐಆರ್

Spread the love

ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಆರೋಪಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ಆರೋಪಿಗಳು ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿವಿಧ ಪ್ರಕರಣದ ಆರೋಪಿಗಳಾದ ಮುತ್ಯಾನಟ್ಟಿ ಮೂಲದ ಬಸವರಾಜ ದಡ್ಡಿ, ಬಸವಣ್ಣಿ ನಾಯಕ್, ನವೀನ್ ದಡ್ಡಿ ಹಾಗೂ ಲಕ್ಷ್ಮೀಣ ದಡ್ಡಿ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಿಧ ಪ್ರಕರಣದ ಆರೋಪಿಗಳಾದ ಮುತ್ಯಾನಟ್ಟಿ ಮೂಲದ ಬಸವರಾಜ ದಡ್ಡಿ, ಬಸವಣ್ಣಿ ನಾಯಕ್, ನವೀನ್ ದಡ್ಡಿ ಹಾಗೂ ಲಕ್ಷ್ಮೀಣ ದಡ್ಡಿ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ದಡ್ಡಿ ವಿರುದ್ಧ ದೋಷ ಸಾಬೀತಾಗಿದೆ ಎಂಬ ಮಾಹಿತಿ ಹೊರಬಿದ್ದ ತಕ್ಷಣವೇ, ನ್ಯಾಯಾಲಯ ಆವರಣದ ವಾತಾವರಣ ಉದ್ವಿಗ್ನಗೊಂಡಿತು. ಇದೇ ವೇಳೆ ದೃಶ್ಯ ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ಗಳತ್ತ ಮುಖ ಮಾಡಿದ್ದ ಆರೋಪಿಗಳು, ಕ್ಯಾಮೆರಾವನ್ನು ತಳ್ಳಿಹಾಕಲು ಹಲ್ಲೆಗೆ ಯತ್ನಿಸಿದರು.‌ ಈ ವೇಳೆ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ದೋಷಿಗಳ ದರ್ಪ ಸಿಡಿದ ಘಟನೆಯಿಂದ ಬುಧವಾರ ಸಂಜೆ ಆತಂಕ ಮೂಡಿಸಿತು.


Spread the love

About Laxminews 24x7

Check Also

ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

Spread the loveಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ  ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ