Breaking News

ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟುವಿಚಾರಣೆ ವೇಳೆ ಹಲವು ನಟ-ನಟಿಯರ ಹೆಸರನ್ನು ಕೂಡ ಹೇಳಲಾಗಿದೆ

Spread the love

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಮತ್ತೋರ್ವ ಡ್ರಗ್ಸ್ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ತಿಕ್ ರಾಜು ಎಂದು ತಿಳಿದುಬಂದಿದೆ. ಈಗಾಗಲೇ ಬಂಧಿತನಾಗಿರುವ ಆರ್ ಟಿಒ ಅಧಿಕಾರಿ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಕಾರ್ತಿಕ್ ರಾಜುನನ್ನು ಬಂಧಿಸಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ನಿನ್ನೆ ನಟಿ ರಾಗಿಣಿ ಆಪ್ತ, ಆರ್ ಟಿ ಒ ಅಧಿಕಾರಿ ರವಿಶಂಕರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣ್ ಅಸಂಬಂಧ ನಟಿ ಸಂಜನಾ ಗಲ್ರಾಣಿ ಆಪ್ತ ರಾಹುಲ್ ಎಂಬಾತನನ್ನೂ ವಶಕ್ಕೆ ಪಡೆಯಲಾಗಿತ್ತು. ಈ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಒಬ್ಬರ ಹೆಸರನ್ನೇ ಬಾಯ್ಬಿಡುತ್ತಿದ್ದಾರೆ.

ವಿಚಾರಣೆ ವೇಳೆ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಇನ್ನೋರ್ವ ಡ್ರಗ್ಸ್ ಪೆಡ್ಲರ್ ಕಾರ್ತಿಕ್ ರಾಜುನನ್ನು ಸಿಸಿಬಿ ಇದೀಗ ವಶಕ್ಕೆ ಪಡೆದಿದೆ. ಇನ್ನೂ ಹಲವರು ಈ ದಂಧೆಯಲ್ಲಿ ಭಾಗಿಯಾಗಿದ್ದು, ವಿಚಾರಣೆ ವೇಳೆ ಹಲವು ನಟ-ನಟಿಯರ ಹೆಸರನ್ನು ಕೂಡ ಹೇಳಲಾಗಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ