Breaking News

ಮಧ್ಯರಾತ್ರಿ ನಡುರಸ್ತೆಯಲ್ಲೇ ಕೆಟ್ಟುನಿಂತ ಖಾಸಗಿ ಬಸ್ – ಚಳಿಯಲ್ಲೇ ಮಹಿಳೆಯರು, ಮಕ್ಕಳ ಪರದಾಟ!

Spread the love

ಚಿಕ್ಕಬಳ್ಳಾಪುರ: ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಿದ 30 ಮಂದಿ ಪ್ರಯಾಣಿಕರು ನಡುರಾತ್ರಿಯಲ್ಲಿ ನಡು ರಸ್ತೆಯಲ್ಲೇ ಕಾಲ ಕಳೆಯುವಂತಾದ ಘಟನೆ ಚಿಕ್ಕಬಳ್ಳಾಪುರ  ತಾಲೂಕಿನ ಅಗಲಗುರ್ಕಿ ಬಳಿ ನಡೆದಿದೆ.

ಮಂತ್ರಾಲಯದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್  NH-44ರ ಅಗಲಗುರ್ಕಿ ಬಳಿ ದಿಢೀರ್ ಕೆಟ್ಟು ನಿಂತಿದೆ. ರಾತ್ರಿ 9.30ಕ್ಕೆ ಬೆಂಗಳೂರಿಗೆ ತಲುಪಬೇಕಿದ್ದ ಬಸ್ ಮಾರ್ಗಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 30 ಮಂದಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕುಕ್ಕೇಶ್ರೀ ಟ್ರಾವೆಲ್ಸ್ ಹೆಸರಿನಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ ಪ್ರಯಾಣಕ್ಕೆ ಬಂದಿದ್ದು ಸ್ಟ್ರೀಮ್‌ಲೈನ್ ಟೂರ್ಸ್ ಮತ್ತು ಟ್ರಾವೆಲ್ಸ್‌ಗೆ ಸೇರಿದ ಎನ್‌ಎಲ್ 01 ಬಿ 3358 ನೋಂದಣಿ ಸಂಖ್ಯೆಯ ಬಸ್. ದುರಸ್ತಿಯ ನೆಪದಲ್ಲಿ ಚಾಲಕ ನಡುರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ಲಿಸಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್ ಕೆಟ್ಟು ನಿಂತು ಪ್ರಯಾಣಿಕರು ಪರದಾಡುತ್ತಿದ್ದರೂ ಟ್ರಾವೆಲ್ಸ್ ಸಂಸ್ಥೆ ಪರ್ಯಾಯ ವಾಹನದ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾತ್ರಿಯಿಡೀ ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲೇ ಕಳೆಯುವಂತಾಗಿದ್ದು, ಕೊನೆಗೆ ರಾತ್ರಿ ಸುಮಾರು 2 ಗಂಟೆಗೆ ಪ್ರಯಾಣಿಕರೇ ಕ್ಯಾಬ್‌ಗಳನ್ನು ಬುಕ್ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ.

ಟಿಕೆಟ್ ಬುಕ್ ಮಾಡಿಕೊಂಡು ಹಣ ಪಾವತಿಸಿದ್ದರೂ ಸರಿಯಾದ ಸೇವೆ ನೀಡದ ಕುಕ್ಕೇಶ್ರೀ ಟ್ರಾವೆಲ್ಸ್ ಹಾಗೂ ಸ್ಟ್ರೀಮ್‌ಲೈನ್ ಟೂರ್ಸ್ ಮತ್ತು ಟ್ರಾವೆಲ್ಸ್ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕ ಹಾಗೂ ಬಸ್ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರಾದ ಶೃತಿ, ಸುಮತಿ, ರಾಜು ಮತ್ತು ಉಬೇದ್ ಅಸಮಾಧಾನ ಹೊರಹಾಕಿದ್ದಾರೆ.

ಪ್ರಯಾಣಿಕರ ಸುರಕ್ಷತೆ ಮತ್ತು ತುರ್ತು ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಹೊತ್ತಿರುವ ಖಾಸಗಿ ಬಸ್ ಸಂಸ್ಥೆಗಳ ನಿರ್ಲಕ್ಷ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.


Spread the love

About Laxminews 24x7

Check Also

ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ – ಎಂ.ಬಿ ಪಾಟೀಲ್ ವಿರುದ್ಧ ಶಂಕರ್ ಬಿದರಿ ಕಿಡಿ

Spread the loveಬೆಂಗಳೂರು: ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ