Breaking News

ಬೇಲೂರಿನಿಂದ ಮೂಡಿಗೆರೆಯತ್ತ ಕಾಡಾನೆಗಳ ಸಂಚಾರ; ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

Spread the love

ಚಿಕ್ಕಮಗಳೂರು: ಬೇಲೂರಿನಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ  ಸಂಚಾರ ಕಂಡುಬಂದಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಓಡಾಡುತ್ತಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ಮೂಡಿಗೆರೆ  ತಾಲೂಕಿನ ಬಾರದಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿದ್ದು, ತುದಿಯಾಲ, ಹೊರಟ್ಟಿ, ನಂದೀಪುರ ಹಾಗೂ ಮೂಡಸಸಿ ಗ್ರಾಮಗಳಲ್ಲೂ ಕಾಡಾನೆಗಳ ಓಡಾಟ ಕಂಡುಬಂದಿದೆ. ಕಾಡಾನೆಗಳು ಯಾವುದೇ ಸಮಯದಲ್ಲಿ ಗ್ರಾಮಗಳ ಸಮೀಪಕ್ಕೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ತೋಟದ ಮಾಲೀಕರು ಹಾಗೂ ಕಾರ್ಮಿಕರು ಸದ್ಯಕ್ಕೆ ತೋಟದ ಕೆಲಸಗಳಿಗೆ ತೆರಳದಂತೆ ಇಲಾಖೆ ಸೂಚನೆ ನೀಡಿದೆ. ಕಾಡಾನೆಗಳು ಗುಂಪಿನಲ್ಲಿದ್ದಾಗ ಸಾಮಾನ್ಯವಾಗಿ ದಾಳಿ ಮಾಡುವ ಸಾಧ್ಯತೆ ಕಡಿಮೆ ಇದ್ದರೂ, ಅವುಗಳನ್ನು ಕೆರಳಿಸಿದ ಸಂದರ್ಭದಲ್ಲಿ ದಾಳಿ ಮಾಡುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.

ಅಲ್ಲದೇ, ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದು, ಕಲ್ಲು ತೂರುವುದು ಹಾಗೂ ಕೋಲಿನಿಂದ ಹೊಡೆಯುವಂತಹ ಕೃತ್ಯಗಳನ್ನು ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಕಾಡಾನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅವುಗಳ ಚಲನವಲನಕ್ಕೆ ಅಡ್ಡಿಪಡಿಸಬಾರದು ಎಂದು ಸೂಚಿಸಲಾಗಿದೆ.

ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆ ವತಿಯಿಂದ ಈ ಎಚ್ಚರಿಕೆ ನೀಡಲಾಗಿದ್ದು, ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.


Spread the love

About Laxminews 24x7

Check Also

ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ – ಎಂ.ಬಿ ಪಾಟೀಲ್ ವಿರುದ್ಧ ಶಂಕರ್ ಬಿದರಿ ಕಿಡಿ

Spread the loveಬೆಂಗಳೂರು: ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ