Breaking News
Home / ಜಿಲ್ಲೆ / ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ……….

ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ……….

Spread the love

ಕರ್ನಾಟಕದಲ್ಲಿ ಸೊಂಕಿತರ ಸಂಖ್ಯೆ 313ಕ್ಕೆ ಏರಿಕೆ
– ಬೆಳಗಾವಿಯಲ್ಲಿ ಒಟ್ಟು 36, ಮೈಸೂರಿನಲ್ಲಿ 61ಕ್ಕೆ ಏರಿಕೆ

ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಅತಿ ಹೆಚ್ಚು 34 ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 12, ವಿಜಯಪುರದಲ್ಲಿ 7, ಬೆಂಗಳೂರು 5, ಮೈಸೂರು 3, ಕಲಬುರಗಿ, ಗದಗ್ ಜಿಲ್ಲೆಯಲ್ಲಿ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಪತ್ತೆಯಾದ ಪ್ರಕರಣಗಳ ಪೈಕಿ 17 ಮಂದಿಗೆ ದೆಹಲಿಯ ಜಮಾತ್ ನಂಟಿದೆ.

ಇಂದು 12 ಪ್ರಕರಣಗಳೊಂದಿಗೆ ಬೆಳಗಾವಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 61ಕ್ಕೆ ಏರಿಕೆಯಾಗಿದೆ.

ರೋಗಿಗಳು ಯಾವ ಜಿಲ್ಲೆಯವರು?
ರೋಗಿ 280 – ಬೆಂಗಳೂರು ನಗರದ 13 ವರ್ಷದ ಬಾಲಕ, ರೋಗಿ 252ರ ಸಂಪರ್ಕ
ರೋಗಿ 281 – ಬೆಂಗಳೂರು ನಗರದ 65 ವರ್ಷದ ಮಹಿಳೆ, ಉಸಿರಾಟದ ಸಮಸ್ಯೆಯಿಂದ ದಾಖಲು
ರೋಗಿ 282 – ಬೆಳಗಾವಿ ಹೀರೇಬಾಗೇವಾಡಿಯ 51 ವರ್ಷದ ಮಹಿಳೆ, ರೋಗಿ 225ರ ಸಂಪರ್ಕ
ರೋಗಿ 283 -ಬೆಳಗಾವಿ ಹೀರೇಬಾಗೇವಾಡಿಯ 42 ವರ್ಷದ ವ್ಯಕ್ತಿ, ರೋಗಿ 224ರ ಸಂಪರ್ಕ

ರೋಗಿ 284 – ಬೆಳಗಾವಿ ಹೀರೇಬಾಗೇವಾಡಿಯ 33 ವರ್ಷದ ವ್ಯಕ್ತಿ, ರೋಗಿ 224ರ ಸಂಪರ್ಕ
ರೋಗಿ 285 – ಬೆಳಗಾವಿ ಹೀರೇಬಾಗೇವಾಡಿಯ 16 ವರ್ಷದ ಬಾಲಕಿ, ರೋಗಿ 224ರ ಸಂಪರ್ಕ
ರೋಗಿ 286 – ಬೆಳಗಾವಿ ಹೀರೇಬಾಗೇವಾಡಿಯ 65 ವರ್ಷದ ವೃದ್ಧೆ, ರೋಗಿ 224ರ ಸಂಪರ್ಕ
ರೋಗಿ 287 – ಬೆಳಗಾವಿ ಹೀರೇಬಾಗೇವಾಡಿಯ 30 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ

ರೋಗಿ 288 – ಬೆಳಗಾವಿ ಹೀರೇಬಾಗೇವಾಡಿಯ 54 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ
ರೋಗಿ 289 – ಬೆಳಗಾವಿ ಹೀರೇಬಾಗೇವಾಡಿಯ 58 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ
ರೋಗಿ 290 – ಬೆಂಗಳೂರಿನ 54 ವರ್ಷದ ಮಹಿಳೆ, ಅನಂತಪುರದಲ್ಲಿ ನಗರಕ್ಕೆ ಆಗಮಿಸಿದ ಮಹಿಳೆ, ಮೂಲ ಪತ್ತೆಯಾಗಿಲ್ಲ
ರೋಗಿ 291 – ಬೆಂಗಳೂರಿನ 37 ವರ್ಷದ ಪುರುಷ, ಮೂಲ ಪತ್ತೆಯಾಗಿಲ್ಲ

ರೋಗಿ 292 – ಬೆಂಗಳೂರಿನ 43 ವರ್ಷದ ವ್ಯಕ್ತಿ, ಮೂಲ ಪತ್ತೆಯಾಗಿಲ್ಲ
ರೋಗಿ 293 – ಬೆಳಗಾವಿ ಚಿಕ್ಕೋಡಿಯ 47 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 294 – ಬೆಳಗಾವಿ ರಾಯಬಾಗದ 25 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 295 – ಬೆಳಗಾವಿಯ 45 ವರ್ಷದ ಮಹಿಳೆ, ದೆಹಲಿ ಪ್ರವಾಸ

ರೋಗಿ 296 – ಬೆಳಗಾವಿ ಹೀರೇಬಾಗೇವಾಡಿಯ 30 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 297 – ಬೆಳಗಾವಿ ರಾಯಬಾಗದ 43 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 298 – 50 ವರ್ಷ, ಗೋವಾ ಮೂಲದ ವ್ಯಕ್ತಿ 1 ತಿಂಗಳಿನಿಂದ ರಾಯಬಾಗದಲ್ಲಿ ನೆಲೆಸಿದ್ದು, ರೋಗಿ 245ರ ಸಂಪರ್ಕ
ರೋಗಿ 299 – 35 ವರ್ಷದ ಪುರುಷ, ವಿಜಯಪುರ ನಿವಾಸಿ, ಒಂದು ತಿಂಗಳಿನಿಂದ ರಾಯಬಾಗದಲ್ಲಿ ನೆಲೆ, ರೋಗಿ ಸಂಖ್ಯೆ 245ರ ಸಂಪರ್ಕ

ರೋಗಿ 300 – 25 ವರ್ಷದ ಪುರುಷ, ಮಹಾರಾಷ್ಟ್ರದ ಮಿರಾಜ್ ನಿವಾಸಿ 1 ತಿಂಗಳಿನಿಂದ ಬೆಳಗಾವಿಯ ರಾಯಬಾಗದಲ್ಲಿ ನೆಲೆ, ರೋಗಿ 245ರ ಸಂಪರ್ಕ
ರೋಗಿ 301 -64 ವರ್ಷ ಪುರುಷ, ಬೆಳಗಾವಿಯ ರಾಯಬಾಗ ನಿವಾಸಿ, ರೋಗಿ 245ರ ಸಂಪರ್ಕ
ರೋಗಿ 302 – 23 ವರ್ಷದ ಮಹಿಳೆ, ರೋಗಿ 274 ರ ಸಂಪರ್ಕ
ರೋಗಿ 303 – 52 ವರ್ಷದ ಪುರುಷ, ನಂಜನಗೂಡು ಫಾರ್ಮಾ ಕಂಪನಿಯ ನೌಕರ

ರೋಗಿ 304 – ಗದಗ್ ಜಿಲ್ಲೆಯ 59 ವರ್ಷದ ಮಹಿಳೆ, ರೋಗಿ 166ರ ಸಂಪರ್ಕ
ರೋಗಿ 305 – 12 ವರ್ಷದ ವಿಜಯಪುರದ ಬಾಲಕ, ರೋಗಿ 221ರ ಸಂಪರ್ಕ
ರೋಗಿ 306– 65 ವರ್ಷದ ವಿಜಯಪುರದ ವ್ಯಕ್ತಿ, ರೋಗಿ 221ರ ಸಂಪರ್ಕ

ರೋಗಿ 307 – ವಿಜಯಪುರದ 66 ವರ್ಷದ ವ್ಯಕ್ತಿ, ರೋಗಿ 221ರ ಸಂಪರ್ಕ
ರೋಗಿ 308 – 37 ವರ್ಷದ ವಿಜಯಪುರದ ವ್ಯಕ್ತಿ, ರೋಗಿ 221ರ ಸಂಪರ್ಕ
ರೋಗಿ 309 – 70 ವರ್ಷದ ವಿಜಯಪುರದ ಮಹಿಳೆ, ರೋಗಿ 221ರ ಸಂಪರ್ಕ
ರೋಗಿ 310 – ವಿಜಯಪುರದ 1.5 ವರ್ಷದ ಹೆಣ್ಣು ಮಗು, ರೋಗಿ 228 ಮತ್ತು 232ರ ಸಂಪರ್ಕ

ರೋಗಿ 311 – ಮೈಸೂರಿನ 38 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ
ರೋಗಿ 312 – ಮೈಸೂರಿನ 26 ವರ್ಷದ ಮಹಿಳೆ, ಫಾರ್ಮಾ ಕಂಪನಿಯ ರೋಗಿ 77(ಪತಿ) ಸಂಪರ್ಕ.
ರೋಗಿ 313 – 55 ವರ್ಷದ ವಿಜಯಪುರದ ಮಹಿಳೆ, ರೋಗಿ 221ರ ಸಂಪರ್ಕ


Spread the love

About Laxminews 24x7

Check Also

ಕರ್ನಾಟಕ ವಿಧಾನಸಭಾ ಚುನಾವಣೆ : ಮೇ. 10 ರಂದು ಎಲ್ಲಾ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ( Karnataka Assembly Election 2023 ) ದಿನಾಂಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ