Breaking News
Home / ಜಿಲ್ಲೆ / ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್

ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್

Spread the love

ಹುಬ್ಬಳ್ಳಿ: ಕೊರೊನಾ ಹಾವಳಿಯಿಂದ ಮಾಸ್ಕ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಕ್ಷೇತ್ರದ ಬಡ ಮಹಿಳೆಯರಿಗೆ ಸಂಸದರ ಅನುದಾನದಡಿ ವಿತರಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಈಗಾಗಲೇ ಸಾವಿರಾರು ಮಾಸ್ಕ್ ಸಿದ್ಧಪಡಿಸಲಾಗಿದೆ. ಈಗ ವಿತರಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿರುವ ಧಾರವಾಡದ ಲೋಕಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಹಿಳೆಯರು ತಮಗೆ ನೀಡಿದ ಯಂತ್ರದಿಂದ ಉಚಿತವಾಗಿ ಮಾಸ್ಕ್ ಹೊಲಿದುಕೊಡುವ ಮೂಲಕ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ.

ಕೇಂದ್ರ ಸಚಿವ ಜೋಶಿ ಅವರು ತಮ್ಮ ಕ್ಷೇತ್ರದಲ್ಲಿ 544 ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಸಂಸದರ ಆದರ್ಶ ಗ್ರಾಮವಾದ ಹಾರೋಬೆಳವಡಿ, ಕಬ್ಬೇನೂರು ಗ್ರಾಮ ಸೇರಿದಂತೆ ಕ್ಷೇತ್ರದ 200ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಮಾಸ್ಕ್ ತಯಾರಿಕೆಯಲ್ಲಿ ನಿಶ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ತಲಾ ಒಬ್ಬರು ದಿನಕ್ಕೆ 100 ರಿಂದ 150 ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಸಚಿವ ಜೋಶಿ ಅವರು ತಮ್ಮದೇ ಪೋಷಕತ್ವದಲ್ಲಿರುವ ಕ್ಷಮತಾ ಸೇವಾ ಸಂಸ್ಥೆಯನ್ನು ಈ ಜನೋಪಕಾರಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆ ಮತ್ತು ದಾರವನ್ನು ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡಿಸಿದ್ದಾರೆ. ಸಚಿವರ ಈ ಮಹತ್ವದ ಸೇವಾ ಕಾರ್ಯಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

ಕ್ಷಮತಾ ಸೇವಾ ಸಂಸ್ಥೆಯೂ 3 ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬರುವ ಸಾವಿರಾರು ಬಡ ಮಹಿಳೆಯರಿಗೆ ‘ಸುವರ್ಣ ಎಜ್ಯುಕೇಶನ್ ಟ್ರಸ್ಟ್’ ಉಚಿತ ಹೊಲಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ಮಹಿಳೆಯರನ್ನು ಬಳಸಿಕೊಂಡು ಈಗಾಗಲೇ ಉತ್ತಮ ಗುಣಮಟ್ಟದ 40 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ತಯಾರಿದಿದೆ.

ಬಡ ಮಹಿಳೆಯರ ನಿಶ್ವಾರ್ಥ ಸೇವೆ
ಸಂಸದರ ಅನುದಾನದಡಿ ಈ ಹಿಂದೆ ವಿತರಣೆ ಮಾಡಿದ ಯಂತ್ರಗಳು ಇಂದು ಬಹಳಷ್ಟು ಸಹಕಾರಿಯಾಗಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉಚಿತ ಮಾಸ್ಕ್ ತಯಾರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಮಾಸ್ಕ್ ತಯಾರಿಸುವ ಕುಶರಿ ಕೆಲಸಕ್ಕೆ ಸಂಭಾವನೆ ನೀಡಲು ಮುಂದಾದರೂ ಅದನ್ನು ಈ ಮಹಿಳೆಯರು ನಿರಾಕರಿಸುತ್ತಿದ್ದಾರೆ.


Spread the love

About Laxminews 24x7

Check Also

ಶ್ರೀ ಶ್ರೀ ಹರಿ ವಿಠಲ ಪಾಂಡುರಂಗ ದೇವರಿಗೆ ತೊಟ್ಟಿಲೋತ್ಸವ ಸೇವೆ !

Spread the loveಹುಬ್ಬಳ್ಳಿ; ನಗರದ ಎಸ್.ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ,ಹುಬ್ಬಳ್ಳಿ ಈ ಸಂಸ್ಥೆಯ , …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ