ಗೋಕಾಕ: ಕೊಣ್ಣೂರ ಪಟ್ಟಣದ ವಾಲ್ಮೀಕಿ ವೃತ್ತದ ವಾರ್ಡ ನಂ 10 ರಲ್ಲಿ ದಾನಿಗಳಾದ ಆಶಾ ಟೆಕ್ಸ್ ಟೈಲ್ , ಶ್ರೀ ಐಶ್ವರ್ಯ ಸ್ಟೀಲ್ಸ ಆ್ಯಂಡ್ ಹಾರ್ಡವೆರ್ಸ ಮತ್ತು ವಿನೋದ ಕರನಿಂಗ ಇವರ ನೇತೃತ್ವದಲ್ಲಿ ಮತ್ತು
ಸಾರ್ವಜನಿಕರಿಗಾಗಿ ಪದ್ಮಾವತಿ ಪೆಟ್ರೋಲಿಯಂ ಮಾಲೀಕರಾದ ಅಕ್ಷಯ ಬೆಡಕಿಹಾಳ ಇವರು ನೀಡಿದ ಸಾನಿಟೈಸರ್ ಸುರಂಗವನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಸುಪುತ್ರ ಹಾಗೂ ಕೆ,ಎಮ್,ಎಪ್,ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ಉದ್ಘಾಟಿಸಿದರು
ಇದೆ ಸಂದರ್ಭದಲ್ಲಿ 14ನೇಯ ಹಣಕಾಸು ಯೋಜನೆಯಲ್ಲಿ ನಿರ್ಮಿಸಲಾದ ಶುದ್ದ ಘಟಕ ನೀರನ್ನು ಸಾರ್ವಜನಿಕರಿಗೆ ಉಪಯೋಗಿಸಲು ಉದ್ಘಾಟಿಸಿ ಕೊರೋನಾ ತಡೆಗಟ್ಟಲು ಸಾರ್ವಜನಿಕರು ಎಲ್ಲ ಅಧಿಕಾರಿಗಳ ಜೊತೆ ಸಹಕರಿಸಲು ತಿಳಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಪುರಸಭೆಯ ಸದಸ್ಯರು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .